ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 22

“ಯೆಹೋವ ನನಗೆ ಕುರುಬನು”

“ಯೆಹೋವ ನನಗೆ ಕುರುಬನು”

(ಕೀರ್ತನೆ 23)

1. ಯೆಹೋವ ನನ್ನ ಕುರುಬ,

ಭಯವೇಕೆ ನನಗೆ?

ತನ್ನ ಪ್ರೀತಿಯ ಕುರಿಗಳ

ಆತನು ಮರೆತಾನೇ?

ತಣ್ಣೀರ ತೊರೆ ಬಳಿಗೆ,

ಚೈತನ್ಯದ ಸ್ಥಿತಿಗೆ.

ನೀತಿಯಲಿ ನಡೆಸುತ್ತಾನೆ

ತನ್ನ ನಾಮಕ್ಕಾಗಿಯೇ.

ನೀತಿಯಲಿ ನಡೆಸುತ್ತಾನೆ

ತನ್ನ ನಾಮಕ್ಕಾಗಿಯೇ.

2. ಕತ್ತಲ ಕಣಿವೆಯಲ್ಲಿ

ನಡೆದರೂ ಹೆದರೆ.

ಮಹಾ ಕುರುಬನ ದೊಣ್ಣೆಯು,

ವಿಪತ್ತು ತಪ್ಪಿಸುತೆ.

ತುಂಬಿಸಿ ನನ್ನ ಪಾತ್ರೆಯ,

ಹಚ್ಚಿ ತೈಲ ತಲೆಗೆ.

ಅಪಾರ ದಯೆಯ ಕಾರಣ

ಆಲಯದಿ ಬಾಳುವೆ.

ಅಪಾರ ದಯೆಯ ಕಾರಣ

ಆಲಯದಿ ಬಾಳುವೆ.

3. ಪ್ರಿಯ ಕುರುಬ ವಿವೇಕಿ,

ಸ್ತುತಿಗೀತ ಹಾಡುವೆ.

ಆತನಾರೈಕೆಯ ವಾರ್ತೆಯ

ತಿಳಿಸುವೆ ಕುರಿಗೆ.

ವಾಕ್ಯಕ್ಕೆ ವಿಧೇಯನಾಗಿ,

ನಡೆದು ಅದರಂತೆ.

ಆತನ ಸೇವಾನಿಧಿಯನ್ನು

ದಿನಾಲೂ ಬಳಸುವೆ.

ಆತನ ಸೇವಾನಿಧಿಯನ್ನು

ದಿನಾಲೂ ಬಳಸುವೆ.

(ಕೀರ್ತ. 28:9; 80:1 ಸಹ ನೋಡಿ.)