ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 98

ರಾಜ್ಯದ ಬೀಜವನ್ನು ಬಿತ್ತುವುದು

ರಾಜ್ಯದ ಬೀಜವನ್ನು ಬಿತ್ತುವುದು

(ಮತ್ತಾಯ 13:​4-8)

1. ಓ ಬನ್ನಿ ಯೆಹೋವ ದಾಸರೇ,

ಸಮರ್ಪಿತ ಸಾಕ್ಷಿಗಳೇ.

ಬನ್ನಿರಿ ಕರ್ತನ ಸೇವೆಗೆ,

ಹಿಡಿದು ಆತನ ಹೆಜ್ಜೆ.

ಸತ್ಯ ಬೀಜ ಬಿತ್ತಿ ಹೆದರದೆ

ಮೃದು ಹೃದಯದ ಮೇಲೆ.

ದೇವಸ್ತುತಿ ಫಲ ಆಗ ಬರುತೆ

ಮಾಡಿದರೆ ಉತ್ತಮ ಸೇವೆ.

2. ಬಿತ್ತುವ ಕೆಲ ಬೀಜಗಳು

ಕಲ್ಲೆದೆಗೆ ಬೀಳುವವು.

ಮೊಳಕೆಯೊಡೆದರೂ ಅವು

ಹೃದಸ್ಥಿತಿ ತೋರಿಸೋವು.

ಮುಳ್ಳು ಸತ್ಯವನ್ನು ಅದುಮಲು

ದುರಾಶೆ ಮೇಲೇರುವುದು.

ಒಳ್ಳೇ ಮಣ್ಣಿಂದ ಬರುವ ಬೀಜವು

ಆರೋಗ್ಯಕರವಾಗಿರೋದು.

3. ನಿಮ್ಮ ಕೆಲಸದ ಫಲವು

ಹೊಂದಿಕೊಂಡಿದೆ ನಿಮ್ಮನ್ನು.

ನಿಮ್ಮ ತಾಳ್ಮೆ ಮತ್ತು ಪ್ರೀತಿಯು

ಹೃದಯವ ತೆರೆದಾವು.

ಜನರ ಭಯಗಳ ನೀಗಿಸಿ.

ಮೃದು, ಧೀರತೆ ಮೇಳಿಸಿ.

ಹೀಗೆ ಹರ್ಷದಿ ಕೊಯ್ಯುವಿರಿ ನೀವು

ಮೂವತ್ತು ಯಾ ನೂರರಷ್ಟನ್ನು.

(ಮತ್ತಾ. 13:​19-23; 22:37 ಸಹ ನೋಡಿ.)