ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 102

ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

(ಕೀರ್ತನೆ 98:1)

1. ಹರ್ಷಕರ ವಿಜಯ ಗೀತೆಯಿದು;

ಕೀರ್ತಿಸುತೆ ಅತಿ ಶ್ರೇಷ್ಠನನು.

ನಿರೀಕ್ಷೆ, ನಿಷ್ಠೆಯ ಉತ್ತೇಜಿಸುತೆ.

ಬನ್ನಿ ಹಾಡಿರಿ ರಾಜ್ಯದ ಗೀತೆ.

(ಪಲ್ಲವಿ)

‘ಯೆಹೋವನ ಆರಾಧಿಸಿ.

ಪುತ್ರ ರಾಜ ಎಂದು ಸಾರಿ!

ಕಲಿಯಿರಿ ರಾಜ್ಯದ ಗೀತೆಯನು;

ಸ್ತುತಿಸಿರಿ ದೇವನಾಮವನ್ನು.’

2. ಹೊಸ ಗೀತೆ ಪ್ರಕಟಿಸುತೆ ರಾಜ್ಯ.

ಆಳುತ್ತಾನೆ ಕ್ರಿಸ್ತನು ಭೂಮಿಯ.

ಜನಿಸಿದೆ ಈಗ ಹೊಸ ಜನಾಂಗ;

ಕ್ರಿಸ್ತನಾಳಿಕೆ ಇವರಿಗಿಷ್ಟ.

(ಪಲ್ಲವಿ)

‘ಯೆಹೋವನ ಆರಾಧಿಸಿ.

ಪುತ್ರ ರಾಜ ಎಂದು ಸಾರಿ!

ಕಲಿಯಿರಿ ರಾಜ್ಯದ ಗೀತೆಯನು;

ಸ್ತುತಿಸಿರಿ ದೇವನಾಮವನ್ನು.’

3. ರಾಜ್ಯ ಗೀತೆ ಕಲಿಯೋರು ದೀನರು.

ಅದರ ವಾರ್ತೆ ಸ್ಪಷ್ಟ, ಹಾರ್ದಿಕ.

ಮಹಾ ಸಮೂಹ ಹಾಡುತೆ ಇದನ್ನು,

ಕಲಿಸುತೆ ಇತರರ್ಗೆ ಸಹ.

(ಪಲ್ಲವಿ)

‘ಯೆಹೋವನ ಆರಾಧಿಸಿ.

ಪುತ್ರ ರಾಜ ಎಂದು ಸಾರಿ!

ಕಲಿಯಿರಿ ರಾಜ್ಯದ ಗೀತೆಯನು;

ಸ್ತುತಿಸಿರಿ ದೇವನಾಮವನ್ನು.’