ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 97

ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!

ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!

(2 ತಿಮೊಥೆಯ 4:5)

1. ಮುಂದ್ಹೋಗಿ ಸಾರಿ ರಾಜ್ಯವಾರ್ತೆ

ಸರ್ವ ದೇಶೀಯರಿಗೆ.

ನೆರೆಯವಗೆ ಪ್ರೀತಿ ತೋರಿ

ದೀನನ ಸಮರ್ಥಿಸಿ.

ಸುಯೋಗವೇ ದೇವರ ಸೇವೆ,

ನಮಗಿಷ್ಟ ಈ ಘೋಷಣೆ.

ಕ್ಷೇತ್ರಕ್ಕೆ ಸಾಗಿ ರಾಜ್ಯ ಸಾರಿ,

ನೀಡಿ ದೇವ ನಾಮ ಸಾಕ್ಷಿ.

(ಪಲ್ಲವಿ)

ಮುಂದೆ ಹೋಗಿ ಧೈರ್ಯದಿಂದ

ಸಾರಿ ರಾಜ್ಯವಾರ್ತೆಯ.

ಮುಂದೆ ಸಾಗಿ ನಿಷ್ಠೆಯಿಂದ

ನಿಲ್ಲಿ ಯೆಹೋವ ಪಕ್ಷ.

2. ಮುಂದೊತ್ತುತದೆ ಶಿಷ್ಯ ವರ್ಗ

ವೀಕ್ಷಿಸಿ ನಿತ್ಯಜೀವ.

ನವೀಕೃತ ಹೃದಯದಿಂದ

ಹಿಂಬಾಲಿಸಿ ಕರ್ತನ.

ದೇವರ ರಾಜ್ಯದ ಸುವಾರ್ತೆ

ಮುಟ್ಟಬೇಕು ಎಲ್ಲರಿಗೆ.

ಯೆಹೋವನ ಶಕ್ತೀಲಿ ಸಾರೆ

ಭಯವೇ ಇಲ್ಲವೆಮಗೆ.

(ಪಲ್ಲವಿ)

ಮುಂದೆ ಹೋಗಿ ಧೈರ್ಯದಿಂದ

ಸಾರಿ ರಾಜ್ಯವಾರ್ತೆಯ.

ಮುಂದೆ ಸಾಗಿ ನಿಷ್ಠೆಯಿಂದ

ನಿಲ್ಲಿ ಯೆಹೋವ ಪಕ್ಷ.

3. ಮುಂದೊತ್ತುವೆವು “ಬೇರೆಕುರಿ,”

‘ಉಳಿಕೆ’ಯವರಾಗಿ.

ನಡೆಯುತೆ ಸತ್ಯದ ಜೊತೆ

ಆಬಾಲವೃದ್ಧ ಮಂದೆ.

ನಮ್ಮ ದೇವ ಸೇವೆ ಪವಿತ್ರ,

ಭಕ್ತಿಯು ಯಾಂತ್ರಿಕವಲ್ಲ.

ದೇವಗೆ ಯೋಗ್ಯರಾಗಿರೋಣ

ನಡೆನುಡಿಯ ಮೂಲಕ.

(ಪಲ್ಲವಿ)

ಮುಂದೆ ಹೋಗಿ ಧೈರ್ಯದಿಂದ

ಸಾರಿ ರಾಜ್ಯವಾರ್ತೆಯ.

ಮುಂದೆ ಸಾಗಿ ನಿಷ್ಠೆಯಿಂದ

ನಿಲ್ಲಿ ಯೆಹೋವ ಪಕ್ಷ.