ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 76

ಶಾಂತಿಯ ದೇವರಾದ ಯೆಹೋವನು

ಶಾಂತಿಯ ದೇವರಾದ ಯೆಹೋವನು

(ಫಿಲಿಪ್ಪಿ 4:9)

1. ಯೆಹೋವ ದೇವರೇ,

ಶಾಂತಿ, ಪ್ರೀತಿಯ ಪಿತಾ,

ಕೊಡೆಮಗೆ ಶಾಂತ ಸ್ಥಿತಿ,

ಹೆಚ್ಚಲಿ ನಮ್ಮ ಫಲ.

ಪುತ್ರ ದ್ವಾರಾ ಕೊಂಡಿ,

ಕೊಟ್ಟು ನಮಗೆ ಬುದ್ಧಿ,

ಕೊಡೆಮಗೆ ನಿನ್ನ ಶಾಂತಿ,

ಬುದ್ಧಿ ಮೀರುವ ಶಾಂತಿ.

2. ಲೋಕ ಯತ್ನ ವ್ಯರ್ಥ,

ಬಿತ್ತಿ ಕೊಯ್ದಿದೆ ಕ್ಲೇಶ.

ಶಾಂತಿ ದೇವ ಜನರಿಗೆ

ಕೊಡುತೆ ಚೈತನ್ಯವ.

ನಿನ್ನ ಚಿತ್ತ ಮಾಡಿ,

ವಚನಬದ್ಧರಾಗಿ,

ಹರಸೆಮ್ಮ ಪ್ರಯತ್ನವ,

ಹೆಚ್ಚಿಸು ನಮ್ಮ ಶಾಂತಿ.

3. ನಿನ್ನ ವಾಕ್ಯ ದೀಪ,

ಆತ್ಮ ಜ್ಞಾನೋತ್ತೇಜಕ.

ಕತ್ತಲೆಯ ಲೋಕದಲಿ

ನಮಗಿದೆ ಪ್ರಕಾಶ.

ಶಾಂತಿ ಮಂಜಿನಂತೆ

ಕೊಡಲಿ ಚೈತನ್ಯವ.

ನಮ್ಮ ಹೃದಯಾಲೋಚನೆ

ನೀನು ಕಾಪಾಡು ಅಪ್ಪಾ.