ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 58

ಸಮರ್ಪಣೆಯ ಬಗ್ಗೆ ನನ್ನ ಪ್ರಾರ್ಥನೆ

ಸಮರ್ಪಣೆಯ ಬಗ್ಗೆ ನನ್ನ ಪ್ರಾರ್ಥನೆ

(ಮತ್ತಾಯ 22:37)

1. ತಕ್ಕೋ ನನ್ನ ಹೃದಯ,

ತುಂಬು ಸತ್ಯ ವಿವೇಕ.

ತಕ್ಕೋ ನನ್ನ ಮನಸ್ಸು,

ಸೇವೆಗಾಗಿ ಮೀಸಲು.

2. ತಕ್ಕೋ ಕೈಕಾಲುಗಳ,

ಆಜ್ಞೆಯಂತೆ ನಡೆಯ.

ನನ್ನ ಕಂಠ ಹಾಡಲಿ,

ರಾಜನ ಸ್ತುತಿಸಲಿ.

3. ತಕ್ಕೋ ನನ್ನ ಜೀವವ,

ಚಿತ್ತದಂತೆ ನಡೆಯ.

ತಕ್ಕೋ ನನ್ನನ್ನೇ ಕರ್ತ,

ನಿನ್ನ ಮೆಚ್ಚಿಸ ಸದಾ