ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 14

ಹೊಸದಾಗಿ ಮಾಡಲ್ಪಟ್ಟ ಸಕಲ ವಿಷಯಗಳು

ಹೊಸದಾಗಿ ಮಾಡಲ್ಪಟ್ಟ ಸಕಲ ವಿಷಯಗಳು

(ಪ್ರಕಟನೆ 21:​1-5)

1. ದೇವಾಳಿಕೆಯ ಆರಂಭ ಸೂಚನೆ,

ದೇವಪುತ್ರನ ಪಟ್ಟವೇರಿಕೆ.

ಆತ ಜೈಸಿದ ಶತ್ರುಕಾಳಗ,

ಆಗೋದು ಭೂಮೀಲಿ ದೇವಚಿತ್ತ.

(ಪಲ್ಲವಿ)

ಹರ್ಷಿಸಿ, ಜನರ ಮಧ್ಯ,

ಇದೆ ದೇವರ ಗುಡಾರ.

ದುಃಖ, ಚಿಂತೆ, ಬೇನೆ, ಕೊರತೆ,

ಇನ್ನಿರವು ಮೊದಲಿನಂತೆ.

ಮಾಡುತ್ತೇನೆ ಹೊಸದು ಸಕಲ,

ಎನ್ನುತ್ತಾನೆ ಯೆಹೋವ.

2. ನೋಡಿ ನೂತನ ಯೆರೂಸಲೇಮನ್ನು,

ಆಕೆ ಕುರಿಮರಿಯ ವಧುವು.

ಬಹು ರತ್ನ ಭೂಷಿತೆ ಈ ವಧು,

ಯೆಹೋವನೇ ಆಕೆಯ ಜ್ಯೋತಿಯು.

(ಪಲ್ಲವಿ)

ಹರ್ಷಿಸಿ, ಜನರ ಮಧ್ಯ,

ಇದೆ ದೇವರ ಗುಡಾರ.

ದುಃಖ, ಚಿಂತೆ, ಬೇನೆ, ಕೊರತೆ,

ಇನ್ನಿರವು ಮೊದಲಿನಂತೆ.

ಮಾಡುತ್ತೇನೆ ಹೊಸದು ಸಕಲ,

ಎನ್ನುತ್ತಾನೆ ಯೆಹೋವ.

3. ಈ ನಗರವು ಜನತೆಯ ಹಿಗ್ಗು,

ತೆರೆದಿರುತೆ ಹಗಲಿರುಳು.

ಆಕೆಯ ಮಹಿಮೇಲಿ ಜನರು

ನಡೆದು ಬೀರುವರು ಬೆಳಕು.

(ಪಲ್ಲವಿ)

ಹರ್ಷಿಸಿ, ಜನರ ಮಧ್ಯ,

ಇದೆ ದೇವರ ಗುಡಾರ.

ದುಃಖ, ಚಿಂತೆ, ಬೇನೆ, ಕೊರತೆ,

ಇನ್ನಿರವು ಮೊದಲಿನಂತೆ.

ಮಾಡುತ್ತೇನೆ ಹೊಸದು ಸಕಲ,

ಎನ್ನುತ್ತಾನೆ ಯೆಹೋವ.