ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 101

ಬಾಳೋಣ ಐಕ್ಯದಿ

ಬಾಳೋಣ ಐಕ್ಯದಿ

(ಎಫೆಸ 4:3)

  1. 1. ದ್ವೇಷದ ಈ ಲೋಕದಿಂದ

    ನಮ್ಮನ್ನು ಯೆಹೋವ ತಂದ;

    ಶಾಂತಿ, ಪ್ರೀತಿ, ಸಾಮರಸ್ಯ

    ನಮಗೆ ನೀಡಿದ.

    ಜೇನು ಗೂಡಿನಂತೆ

    ನಮ್ಮ ಐಕ್ಯತೆ.

    ಜೇನಿನಂತ ಪ್ರೀತಿ ತೋರಿ;

    ಜೀವ ನೀಡೋ ವಾರ್ತೆ ಸಾರಿ;

    ನಾವು ದೇವ ಸೇವೆ ಮಾಡಿ

    ಬಾಳೋಣ ಐಕ್ಯದಿ.

  2. 2. ಐಕ್ಯಕ್ಕಾಗಿ ಪ್ರಾರ್ಥಿಸೋಣ;

    ಸೌಮ್ಯ ಭಾವ ತೋರಿಸೋಣ;

    ದೇವ ನಾಮ ಕೀರ್ತಿಸುತ್ತಾ,

    ಐಕ್ಯದಿ ಸಾಗೋಣ.

    ಇಲ್ಲ ಭೇದ ಭಾವ

    ನಮ್ಮ ಪ್ರೀತಿಗೆ.

    ಹೀಗೆ ನಾವು ಐಕ್ಯರಾಗಿ;

    ಶಾಂತಿ ನೀತಿ ಮಾರ್ಗದಲ್ಲಿ,

    ದೇವ ತೋರೊ ಪ್ರೀತಿಯಲ್ಲಿ

    ಬಾಳೋಣ ಐಕ್ಯದಿ.