ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 106

ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು

ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು

(1 ಕೊರಿಂಥ 13:1-8)

  1. 1. ಯೆಹೋವ ದೇವರ ಕೋರುವ

    ಪ್ರೀತಿ ಎಂಬ ಗುಣ ನೀಡಲು;

    ಪ್ರತಿಯೊಂದು ಗುಣ ತೋರಲು

    ಪ್ರೀತಿ ತಾನೇ ಸ್ಪೂರ್ತಿ ಎಂದಿಗೂ.

    ಅದೇನೇ ಕೌಶಲ್ಯವಾದರೂ

    ನಿಸ್ವಾರ್ಥ ಪ್ರೀತಿಯೇ ಗೆಲ್ಲೋದು.

    ನಿಜ ಪ್ರೀತಿಯನ್ನು ಹಂಚೋಣ

    ನಡೆ ನುಡಿಯಲ್ಲೂ ತೋರೋಣ.

  2. 2. ಎಂದೂ ತನ್ನ ಹಿತ ನೋಡದೆ

    ತಪ್ಪನ್ನು ಮನ್ನಿಸಿ ತಾಳುವ,

    ಧಾರಾಳ ಹೃದಯ ಹೊಂದಿರೋ

    ಇಂಥ ಪ್ರೀತಿ ಶ್ರೇಷ್ಠವಲ್ಲವೇ!

    ಅದೇನೇ ತೊಂದರೆ ಬಂದರೂ

    ನಿಷ್ಠಾವಂತ ಪ್ರೀತಿ ಸೋಲದು;

    ಎಲ್ಲಾ ಗುಣದಲ್ಲೂ ಎಂದಿಗೂ

    ಪ್ರೀತಿ ಒಂದೇ ಮಹಾ ರಾಜನು!