ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 112

ಶಾಂತಿಯ ಮೂಲ ಯೆಹೋವ

ಶಾಂತಿಯ ಮೂಲ ಯೆಹೋವ

(ಫಿಲಿಪ್ಪಿ 4:9)

  1. 1. ಯೆಹೋವ ತಂದೆಯೇ

    ಶಾಂತಿಯ ಮೂಲ ನೀನೇ.

    ನೀಡು ನಿನ್ನ ಶಾಂತಿಯನ್ನ,

    ಪವಿತ್ರ ಶಕ್ತಿಯನ್ನ.

    ನಿನ್ನ ಪುತ್ರನಲ್ಲೇ

    ನಂಬಿಕೆ ತೋರುತ್ತೇವೆ;

    ಆತನಿಂದ ನಿನ್ನ ಸ್ನೇಹ

    ನಮಗೆ ದೊರೆಯಿತು.

  2. 2. ಈ ಲೋಕದಲ್ಲೆಲ್ಲ

    ಅಂಧಕಾರ ತುಂಬಿದೆ;

    ನಿನ್ನ ವಾಕ್ಯ ದೀಪದಂತೆ

    ಬೆಳಕು ನೀಡುತ್ತದೆ.

    ನಾವು ಸಾಗುವೆವು

    ವಾಕ್ಯದ ಮಾರ್ಗದಲ್ಲೇ;

    ಆಗ ನಮ್ಮ ಬಾಳಿನಲ್ಲಿ

    ನೆಮ್ಮದಿ ಸಿಗುವುದು.

  3. 3. ನಿನ್ನ ಪ್ರೀತಿಯಿಂದ

    ಒಂದಾಗಿ ಸೇರಿದ್ದೇವೆ.

    ಐಕ್ಯರಾಗಿ ಸಾರುತ್ತೇವೆ

    ರಾಜ್ಯದ ಸಂದೇಶವ.

    ನಿನ್ನ ಆಳ್ವಿಕೆಯು

    ಶಾಂತಿಗೆ ಬುನಾದಿಯೂ.

    ಭೂಮಿ ತುಂಬ ದೀನರೆಲ್ಲ

    ಹರ್ಷದಿ ಬಾಳುವರು.