ಗೀತೆ 114
ತಾಳ್ಮೆಯಿಂದಿರಿ!
-
1. ಯೆಹೋವ ನಮ್ಮ ದೇವಾ
ಪವಿತ್ರ ನಾಮಧಾರಿಯು;
ತನ್ನ ನಾಮದ ಮೇಲೆ
ಬಂದ ಕಳಂಕ ನೀಗುವ.
ನೂರಾರು ಶತಮಾನ
ದಯೆ ತೋರಿ ನಿಂತನು;
ಈ ದೀರ್ಘ ಸಹನೆಯು
ಎಂದೂ ವ್ಯರ್ಥವಲ್ಲ.
ಮುಂದೆ ಶಾಶ್ವತ ಜೀವ
ಪಡೆಯಲು ಜನರೆಲ್ಲ,
ಪ್ರೀತಿ ಕಾಳಜಿಯಿಂದ
ತೋರಿದನು ಸಹನೆಯ.
-
2. ಈ ತಾಳ್ಮೆ ಗುಣ ಬೇಕು
ಅನಂತ ಜೀವ ಗೆಲ್ಲಲು,
ದೇವ ಮಾರ್ಗದಿ ನಾವು
ನಗುತ ಮುಂದೆ ಸಾಗಲು;
ನೋವೆಲ್ಲಾ ಮರೆಯೋಕೆ
ಇದೇ ನಮ್ಮ ಬಲವು;
ತೋರೋಕೆ ನಿಜ ಪ್ರೀತಿ
ತಾಳ್ಮೆ ಜರೂರಿಯು.
ಮುಂಗೋಪಿ ಜಗದಲ್ಲಿ
ಸುಲಭವಲ್ಲ ಸಹನೆ;
ತೋರೋಣ ನಾವು ತಾಳ್ಮೆ
ಎಂದೂ ಯೆಹೋವನ ಹಾಗೆ.
(ವಿಮೋ. 34:14; ಯೆಶಾ. 40:28; 1 ಕೊರಿಂ. 13:4, 7; 1 ತಿಮೊ 2:4 ಸಹ ನೋಡಿ.)