ಗೀತೆ 118
ಹೆಚ್ಚು ನಂಬಿಕೆಯನ್ನು ಕೊಡು
(ಲೂಕ 17:5)
-
1. ಯೆಹೋವನೇ ನಾವು ಅಪರಿಪೂರ್ಣ,
ನಿನ್ನನ್ನು ನೋಯಿಸುತೆ ಈ ಪ್ರಾಣ.
ಪದೇ ಪದೇ ಮಾಡಿದರಂತೂ ಪಾಪ
ಕಾರಣವು ನಂಬಿಕೆ ಕೊರತೆ.
(ಪಲ್ಲವಿ)
ಹೆಚ್ಚು ಮಾಡು ನಂಬಿಕೆಯನ್ನು ದೇವ
ಅಗತ್ಯವೇನು ಎಂದು ಬಲ್ಲಾತ
ನಿನ್ನ ಕೃಪೆ ಬೇಕೀಗ ಓ ಯೆಹೋವ
ನಮ್ಮ ನಡತೆ ತರಲಿ ಮಾನ.
-
2. ನಂಬಿಕೆ ಬೇಕು ನಿನ್ನ ಮೆಚ್ಚಿಸೋಕೆ
ಪ್ರತಿಫಲವ ಕೊಡುವೆ ನೀನೇ.
ನಮಗಿದೆ ನಂಬಿಕೆಯ ಗುರಾಣಿ
ಭಯವಿಲ್ಲ ಇನ್ನು ಲೋಕದಲ್ಲಿ.
(ಪಲ್ಲವಿ)
ಹೆಚ್ಚು ಮಾಡು ನಂಬಿಕೆಯನ್ನು ದೇವ
ಅಗತ್ಯವೇನು ಎಂದು ಬಲ್ಲಾತ
ನಿನ್ನ ಕೃಪೆ ಬೇಕೀಗ ಓ ಯೆಹೋವ
ನಮ್ಮ ನಡತೆ ತರಲಿ ಮಾನ.
(ಆದಿ. 8:21; ಇಬ್ರಿ. 11:6; 12:1. ಸಹ ನೋಡಿ)