ಗೀತೆ 135
ಯೆಹೋವನ ಸ್ನೇಹಪರ ಮನವಿ:“ನನ್ನ ಮಗನೇ, ವಿವೇಕಿಯಾಗಿರು”
-
1. ನನ್ನ ಯುವ ತಾರೆಗಳೇ ಕಿವಿಗೊಡಿ,
ನಿಮ್ಮ ಹೃದಯ ಗೂಡಲ್ಲಿ ನನ್ನಿರಿಸಿ.
ಸಂಪೂರ್ಣ ಭಕ್ತಿಯ ಎಂದೆಂದೂ ನೀಡಿರಿ,
ವೈರಿಯ ಆರೋಪ ಸುಳ್ಳೆಂದು ತೋರಿಸಿ.
(ಪಲ್ಲವಿ)
ಓ ಮಗನೇ, ಮಗಳೇ ಕೇಳು,
ನನ್ನ ಮನವಿಯ ನೀನು.
ಸಂತೋಷಪಡಿಸು ನನ್ನನ್ನು!
ಮನಸಾರೆ ಆರಾಧಿಸು.
-
2. ಸರ್ವಸ್ವವ ನೀಡಿ ಆನಂದ ಖಾತರಿ!
ನಾನೆತ್ತುವೆ ಬಿದ್ದರೂ ನೀವು ಎಡವಿ.
ಯಾರೇನೇ ಮಾಡಲಿ ಯಾರೇ ಕೈಬಿಡಲಿ,
ನನ್ನ ಕಣ್ಮಣಿಯಂತೆ ನೀನು ಇರುವಿ!
(ಪಲ್ಲವಿ)
ಓ ಮಗನೇ, ಮಗಳೇ ಕೇಳು,
ನನ್ನ ಮನವಿಯ ನೀನು.
ಸಂತೋಷಪಡಿಸು ನನ್ನನ್ನು!
ಮನಸಾರೆ ಆರಾಧಿಸು.
(ಧರ್ಮೋ 6:5; ಪ್ರಸಂ 11:9; ಯೆಶಾ 41:13 ಸಹ ನೋಡಿ.)