ಗೀತೆ 143
ನಿರೀಕ್ಷಿಸುತ್ತಾ, ಸಹಿಸುತ್ತಾ ಕಾಯೋಣ
-
1. ಆದಿ, ಅಂತ್ಯ ಇಲ್ಲದಾತ
ಅಂತ್ಯ ಮಾಡುವ ಈ ಲೋಕ;
ನೋಡಿ ಅದರ ಸಂಕೇತ
ಎಲ್ಲೆಲ್ಲಿಯೂ ಗೋಚರ.
(ಪಲ್ಲವಿ)
ನಾವು ನಿರೀಕ್ಷಿಸುತ್ತಾ ಕಾಯೋಣ,
ಸಂತೋಷದಿ ಸಹಿಸೋಣ;
ಆಗ ಈ ಬಾಳು ಚೆನ್ನ!
-
2. ಅಂತ್ಯ ಕಾಲವು ಯಾವಾಗ?
ಗೊತ್ತು ಮಾಡಿದನು ದೇವ.
ಸಿದ್ಧ ಮಾಡುವನು ಸೈನ್ಯ;
ವಿರೋಧಿ ಆಗ ಶೂನ್ಯ.
(ಪಲ್ಲವಿ)
ನಾವು ನಿರೀಕ್ಷಿಸುತ್ತಾ ಕಾಯೋಣ,
ಸಂತೋಷದಿ ಸಹಿಸೋಣ;
ಆಗ ಈ ಬಾಳು ಚೆನ್ನ!
-
3. ಸೃಷ್ಟಿ ನರಳಿದೆ ಈಗ;
ಅಂತ್ಯ ಬರುವುದು ಬೇಗ.
ನಮ್ಮ ಬಿಡುಗಡೆ ಆಗ;
ವಿಶ್ವಾಸದಿ ಕಾಯೋಣ.
(ಪಲ್ಲವಿ)
ನಾವು ನಿರೀಕ್ಷಿಸುತ್ತಾ ಕಾಯೋಣ,
ಸಂತೋಷದಿ ಸಹಿಸೋಣ;
ಆಗ ಈ ಬಾಳು ಚೆನ್ನ!
(ಮತ್ತಾ. 25:13; ಲೂಕ 12:36 ಸಹ ನೋಡಿ.)