ಗೀತೆ 17
“ನನಗೆ ಮನಸ್ಸಿದೆ”
(ಲೂಕ 5:13)
-
1. ತಾಳ್ಮೆ ಸೌಮ್ಯ ಪ್ರೀತಿ ತೋರೋ,
ಕ್ರಿಸ್ತ ಯೇಸು ಶಾಂತಿಶೀಲ.
ಆತ ತೋರಿದನು ನಿಸ್ವಾರ್ಥ ಪ್ರೀತಿ;
ಮಾತಿನಲ್ಲೂ, ಕಾರ್ಯದಲ್ಲೂ.
ದೀನರನ್ನು ಪ್ರೋತ್ಸಾಹಿಸಿ
ಅಸ್ವಸ್ಥರ ಸ್ವಸ್ಥ ಮಾಡಿ,
ಹೇಳಿದನು ಜನ ಕೋರಿದಾಗ
“ಮನಸ್ಸಿದೆ ನಂಗೆ” ಎಂದು.
-
2. ಆತನ ಹೆಜ್ಜೆಜಾಡನ್ನು
ಹಿಂಬಾಲಿಸಿ ಸಾಗುವೆವು;
ನಾವು ಪ್ರೀತಿ ತೋರಿ, ನಿಸ್ವಾರ್ಥವಾಗಿ
ಬೋಧಿಸುವೆವು ವಾಕ್ಯವ.
ಎಲ್ಲರನ್ನು ನಮ್ಮಂತೆಯೇ
ಪ್ರೀತಿಸುವೆವು ಐಕ್ಯದಿ;
ಹೇಳುವೆವು ಜನ ಕೋರಿದಾಗ
“ಮನಸ್ಸಿದೆ ನಂಗೆ” ಎಂದು.
(ಯೋಹಾ. 18:37; ಎಫೆ. 3:19; ಫಿಲಿ. 2:7 ಸಹ ನೋಡಿ.)