ಗೀತೆ 28
ಯೆಹೋವನ ಸ್ನೇಹವನ್ನು ಗಳಿಸೋಣ
-
1. ದೇವ ನಿಂಗೆ ಯಾರು
ಸ್ನೇಹಿತರು ಹೇಳು?
ದೇವರೇ ನಿನ್ನ ಡೇರೆಯಲಿ
ತಂಗುವವ ಯಾರು?
ದೇವ ನಿನ್ನ ನಂಬಿ,
ವಾಕ್ಯವನು ಓದಿ,
ನಂಬಿಕೆಯ ತೋರೋ ಜನರು
ಸ್ನೇಹಿತರು ಎಂದೂ.
-
2. ದೇವ ನಿಂಗೆ ಯಾರು
ಸ್ನೇಹಿತರು ಹೇಳು?
ಯಾರಿಗೆ ನಿನ್ನ ಸ್ನೇಹವನು
ನೀಡುವಿ ನೀ ಹೇಳು?
ಪ್ರೀತಿಸುತ ವಾಕ್ಯ,
ಪಾಲಿಸುತ ನ್ಯಾಯ,
ನೀತಿಯಲಿ ಸಂತೋಷಿಸುವ
ಸ್ನೇಹಿತರು ಎಂದೂ.
-
3. ಆಲಿಸಿದಿ ನೀನು
ಪ್ರಾರ್ಥನೆಯ ದೇವ.
ಪ್ರೀತಿಯ ನಿನ್ನ ಆರೈಕೆಗೆ
ಧನ್ಯರು ನಾವೆಂದೂ.
ಸ್ನೇಹಿತನೇ ನಿಂಗೆ
ಸಾಟಿಯಿಲ್ಲ ಯಾರೂ.
ಶಾಶ್ವತವಾದ ಸ್ನೇಹವನು
ಬೇಡುವೆವು ನಾವು.
( ಕೀರ್ತ 139:1; 1ಪೇತ್ರ 5:6, 7 ಸಹ ನೋಡಿ.)