ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 35

ಹೆಚ್ಚು ಪ್ರಮುಖ ವಿಷಯಗಳನ್ನು ಮಾಡೋಣ

ಹೆಚ್ಚು ಪ್ರಮುಖ ವಿಷಯಗಳನ್ನು ಮಾಡೋಣ

(ಫಿಲಿಪ್ಪಿ 1:10)

  1. 1. ವಿವೇಕವು ಪ್ರತಿ ಹೆಜ್ಜೆಯಲ್ಲೂ

    ಮುಖ್ಯ ನಮ್ಮ ಬಾಳಲ್ಲಿ;

    ಒಳ್ಳೇ ಆಯ್ಕೆ ಮಾಡೋಕೆ

    ದಿಕ್ಸೂಚಿ ಹಾಗೆ ತೋರುತ್ತೆ ದಾರಿ.

    (ಪಲ್ಲವಿ)

    ವಾಕ್ಯವನ್ನು ಧ್ಯಾನಿಸೋಣ:

    ಒಳ್ಳೇದನ್ನು

    ಪ್ರೀತಿಸಿ, ನಾವು ಯೆಹೋವನನ್ನು

    ಮೆಚ್ಚಿಸೋಣ;

    ಈ ಪ್ರಾಮುಖ್ಯ ಕಾರ್ಯ ಮಾಡೋಣ.

  2. 2. ಈ ಲೋಕದಿ ನೊಂದ ಜನರಿಗೆ

    ಬೇಕು ಪ್ರೀತಿ, ಸಾಂತ್ವನ;

    ಜೀವ ನೀಡೋ ಒಳ್ಳೇ ಸುದ್ದಿಯನ್ನು

    ಪ್ರೀತಿ ತೋರಿ ಸಾರೋಣ.

    (ಪಲ್ಲವಿ)

    ವಾಕ್ಯವನ್ನು ಧ್ಯಾನಿಸೋಣ;

    ಒಳ್ಳೇದನ್ನು

    ಪ್ರೀತಿಸಿ, ನಾವು ಯೆಹೋವನನ್ನು

    ಮೆಚ್ಚಿಸೋಣ;

    ಈ ಪ್ರಾಮುಖ್ಯ ಕಾರ್ಯ ಮಾಡೋಣ.

  3. 3. ಸೇವೆ ನೀಡೋ ಆಶೀರ್ವಾದ ಎಂದೂ

    ನಮ್ಮ ಬಾಳಿಗೆ ಸ್ಪೂರ್ತಿ;

    ಭದ್ರ ಕೋಟೆ ಹಾಗೆ ಕಾಯುವುದು

    ನಮ್ಮ ದೇವರ ಶಾಂತಿ.

    (ಪಲ್ಲವಿ)

    ವಾಕ್ಯವನ್ನು ಧ್ಯಾನಿಸೋಣ;

    ಒಳ್ಳೇದನ್ನು

    ಪ್ರೀತಿಸಿ, ನಾವು ಯೆಹೋವನನ್ನು

    ಮೆಚ್ಚಿಸೋಣ;

    ಈ ಪ್ರಾಮುಖ್ಯ ಕಾರ್ಯ ಮಾಡೋಣ.