ಗೀತೆ 45
ನನ್ನ ಹೃದಯದ ಧ್ಯಾನ
-
1. ನನ್ನ ಹೃದ-ಮನದಲ್ಲಿ,
ನಿನ್ನ ವಾಕ್ಯ ನೆಲೆಸಿದೆ.
ನನ್ನ ಪ್ರತಿ ಆಲೋಚನೆ,
ಸಲ್ಲಿಸಲಿ ಘನ ನಿಂಗೆ.
ಚಿಂತೆ ನನ್ನನ್ನು ಕಾಡಲು,
ದೇವಾ ಕಾಪಾಡು ನನ್ನನ್ನು.
ನೀತಿ ಮಾರ್ಗದಿ ಸಾಗಲು,
ಧ್ಯಾನಿಸುವೆ ನಿನ್ನ ಮಾತು.
-
2. ನನ್ನ ಗ್ರಹಿಕೆ ಮೀರುವ,
ನಿನ್ನ ಯೋಚನೆ ಅಗಾಧ!
ದೇವಾ ನಿನ್ನ ವಾಕ್ಯವನ್ನ,
ಧ್ಯಾನಿಸುವೆ ಪ್ರತಿಕ್ಷಣ.
ನನ್ನ ನಡೆ-ನುಡಿಯಲ್ಲೂ,
ನಿನ್ನ ಆಜ್ಞೆ ಪಾಲಿಸುವೆ,
ಶಾಂತಿ, ಪ್ರೀತಿ ಮಾರ್ಗದಲ್ಲೇ
ಬಾಳುವೆನು ಸದಾ ಹೀಗೆ.
(ಕೀರ್ತ. 49:3; 63:6; 139:17, 23; ಫಿಲಿ. 4:7, 8; 1 ತಿಮೊ. 4:15 ಸಹ ನೋಡಿ.)