ಗೀತೆ 94
ದೇವರ ವಾಕ್ಯಕ್ಕಾಗಿ ಕೃತಜ್ಞರು
-
1. ಯೆಹೋವ ನೀ ತಂದ ಅಮೂಲ್ಯ ವಾಕ್ಯ,
ಬೆಂಗಾಡಲ್ಲಿ ಚಿಮ್ಮೋ ಕಾರಂಜಿಯಂತೆ!
ಈ ನಮ್ಮ ಬದುಕಲ್ಲಿ
ನಿರೀಕ್ಷೆ ತಂದಿದೆ;
ಆಭಾರಿ ನಾವೆಂದೂ ನಿನ್ನ ಪ್ರೀತಿಗೆ!
-
2. ಈ ಬಾಳ ಹಾದೀಲಿ ಸರಿ ದಾರಿಯ
ತೋರಿ ನಮ್ಮನ್ನು ತಿದ್ದೋ ನಿನ್ನ ವಾಕ್ಯ,
ಹೋಗೋದು ಹೃದಯಾಳ!
ಆ ವಾಕ್ಯ ಸರಳ;
ಈ ಶ್ರೇಷ್ಠ ಜ್ಞಾನಕ್ಕೆ ಬುನಾದಿ ನೀನೇ.
-
3. ನಮ್ಮೆಲ್ಲ ಭಾವನೆ ತುಂಬಿದ ವಾಕ್ಯ,
ನೀಡುತೆ ಚೈತನ್ಯ ಪ್ರತಿ ಹೆಜ್ಜೇಲೂ.
ನಾವಂತೂ ಮನಸಾರೆ
ಧನ್ಯರು ನಿನಗೆ;
ನೀಡು ನಿನ್ನ ಜ್ಞಾನ ನಂಬಿ ಸಾಗೋಕೆ.
(ಕೀರ್ತ. 19:9; 119:16, 162; 2 ತಿಮೊ 3:16; ಯಾಕೋ. 5:17; 2 ಪೇತ್ರ 1:21 ಸಹ ನೋಡಿ.)