ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 95

ಬೆಳಕು ಪ್ರಕಾಶವಾಯ್ತು

ಬೆಳಕು ಪ್ರಕಾಶವಾಯ್ತು

(ಜ್ಞಾನೋಕ್ತಿ 4:18)

  1. 1. ಯೆಹೋವನು ತನ್ನ ಪ್ರವಾದಿಗಳ

    ಮುಖಾಂತರ ಹೇಳಿದನಂದು,

    ಈ ಲೋಕದ ಸಂಕಟ ಅಂತಿಮವು;

    ಮೆಸ್ಸೀಯ ಬರೋ ದಿನದಂದು.

    ಈಗ ಬಂದಿದೆ, ಸಮಯ ಇದುವೇ!

    ತನ್ನಾಡಳಿತ ಶುರುವೇ!

    ಆ ದೂತರಿಗೂ ಇದು ಸಂತಸವು!

    ನಮಗೂ ಇದು ಹರ್ಷಕರ!

    (ಪಲ್ಲವಿ)

    ಹೆಚ್ಚಾಗುತ್ತಿದೆ ಬೆಳಕೀಗ!

    ಸಂಪೂರ್ಣ ಪ್ರಕಾಶವಿದೆ;

    ಯೆಹೋವನ ನಂಬುವ ನಾವು,

    ಆತ ನಮ್ಮ ಮಾರ್ಗದರ್ಶಿ.

  2. 2. ಆಧ್ಯಾತ್ಮಿಕ ಭೋಜನ ನೀಡುವಿಕೆ

    ಹೆಚ್ಚಾಗಿಸಿದೆ ನಮ್ಮ ಜ್ಞಾನ;

    ನಂಬಿಗಸ್ತ ಆಳಿನ ಮೂಲಕವೇ

    ಮರೆ ಆಯ್ತು ಈಗ ಅಜ್ಞಾನ.

    ದಾರಿ ಸುವ್ಯಕ್ತ; ಬೆಳಕು ಪ್ರಕಾಶ;

    ದೃಢ ಹೆಜ್ಜೆಯ ಹಾಕೋಣ!

    ಸತ್ಯ ಬಯಲು ಮಾಡಿದ ದೇವರ

    ಹರಸಿ ಹಾಡೋಣ ನಾವೆಂದೂ.

    (ಪಲ್ಲವಿ)

    ಹೆಚ್ಚಾಗುತ್ತಿದೆ ಬೆಳಕೀಗ!

    ಸಂಪೂರ್ಣ ಪ್ರಕಾಶವಿದೆ;

    ಯೆಹೋವನ ನಂಬುವ ನಾವು,

    ಆತ ನಮ್ಮ ಮಾರ್ಗದರ್ಶಿ.