ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

hadynyah/E+ via Getty Images

ಸದಾ ಎಚ್ಚರವಾಗಿರಿ! 

ಆಹಾರದ ಕೊರತೆ, ಯುದ್ಧ ಮತ್ತು ಹವಾಮಾನದ ಏರುಪೇರು—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆಹಾರದ ಕೊರತೆ, ಯುದ್ಧ ಮತ್ತು ಹವಾಮಾನದ ಏರುಪೇರು—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಉಕ್ರೇನ್‌ ಯುದ್ಧದಿಂದ ಮತ್ತು ಹವಾಮಾನದ ಏರುಪೇರಿಂದ ಲೋಕದಲ್ಲಿ ಎಲ್ಲಾ ಕಡೆ ಆಹಾರದ ಕೊರತೆ ಶುರುವಾಗಿದೆ. ಇದ್ರಿಂದ ಅಭಿವೃದ್ಧಿಯಾಗ್ತಿರೋ ದೇಶಗಳಿಗೆ ತುಂಬ ತೊಂದರೆ ಆಗ್ತಿದೆ. ಹಾಗಾಗಿ ಒಂದು ತುತ್ತು ಅನ್ನಕ್ಕೂ ಜನ ಅಲೆದಾಡ್ತಿದ್ದಾರೆ.

  •   “ಯುದ್ಧದಿಂದ, ಹವಾಮಾನದ ಏರುಪೇರಿಂದ, ಇಂಧನದ ಬೆಲೆ ಏರಿಕೆಯಿಂದ ಆಹಾರ ಧಾನ್ಯಗಳು ಸಿಗೋದು ಮತ್ತು ಅದನ್ನ ಬೆಳಸೋದು ಕಷ್ಟ ಆಗಿದೆ.”—ಆಂಟೋನಿಯೊ ಗುಟೆರಸ್‌, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಜುಲೈ 17, 2023.

  •   “ಆಹಾರ ಧಾನ್ಯಗಳನ್ನ ರಫ್ತು ಮಾಡೋ ಒಪ್ಪಂದದಿಂದ ರಷ್ಯಾ ಹಿಂಜರಿದಿದಕ್ಕೆ ಆಹಾರದ ಕೊರತೆ ಆಯ್ತು. ಇದ್ರಿಂದ ಹಿಂದುಳಿದ ದೇಶಗಳಾದ ಉತ್ತರ ಆಫ್ರಿಕ ಮತ್ತು ಮಧ್ಯ ಪ್ರಾಚ್ಯ ದೇಶಗಳಿಗೆ ಕಷ್ಟ ಆಯ್ತು ಅಂತ ವಿದ್ವಾಂಸರು ಹೇಳ್ತಾರೆ.—Atalayar.com, ಜುಲೈ 23, 2023.

 ಆಹಾರದ ಕೊರತೆ ಮತ್ತು ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆಹಾರದ ಕೊರತೆ ಆಗುತ್ತೆ ಅಂತ ಬೈಬಲ್‌ ಮೊದಲೇ ಹೇಳಿತ್ತು

  •   “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ” ಅಂತ ಯೇಸು ಮುಂಚೇನೆ ಹೇಳಿದ್ರು.—ಮತ್ತಾಯ 24:7.

  •   ಪ್ರಕಟನೆ ಪುಸ್ತಕದಲ್ಲಿ ನಾಲ್ಕು ಕುದುರೆ ಸವಾರರ ಬಗ್ಗೆ ತಿಳಿಸಲಾಗಿದೆ. ಇವರು ನಿಜವಾದ ಕುದುರೆ ಸವಾರರಲ್ಲ. ಇದರಲ್ಲಿ ಒಬ್ಬ ಸವಾರ ಯುದ್ಧಗಳನ್ನ ಸೂಚಿಸ್ತಾನೆ. ಇದರ ನಂತರ ಬರೋ ಇನ್ನೊಬ್ಬ ಕುದುರೆ ಸವಾರ ಬರಗಾಲವನ್ನ ಸೂಚಿಸ್ತಾನೆ. ಆ ಸಮಯದಲ್ಲಿ ಜನ ಆಹಾರಕ್ಕಾಗಿ ಎಷ್ಟು ಪರದಾಡುತ್ತಾರೆ ಅಂದ್ರೆ ತುತ್ತು ಅನ್ನಕ್ಕೂ ಸಾವಿರಾರು ರೂಪಾಯಿ ಕೊಡಬೇಕಾಗುತ್ತೆ. “ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು . . . ಒಂದು ಧ್ವನಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ: ‘ಒಂದು ದಿನಾರಿಗೆ [ಒಂದು ದಿನದ ಕೂಲಿಗೆ, ಪಾದಟಿಪ್ಪಣಿ] ಒಂದು ಕಿಲೋ ಗೋದಿ. ಒಂದು ದಿನಾರಿಗೆ ಮೂರು ಕಿಲೋ ಬಾರ್ಲಿ.’”—ಪ್ರಕಟನೆ 6:5, 6.

 ನಾವು ಜೀವಿಸೋ ಕಾಲವನ್ನು ಬೈಬಲ್‌ ‘ಕೊನೇ ದಿನಗಳು’ ಅಂತ ಕರಿಯುತ್ತೆ. ಆಹಾರದ ಕೊರತೆ ಇರುತ್ತೆ ಅಂತ ಬೈಬಲಿನಲ್ಲಿ ಹೇಳಿರೋ ಮಾತು ಈಗ ನಮ್ಮ ಕಣ್ಮುಂದೆನೇ ನಡೀತಾ ಇದೆ. (2 ತಿಮೊತಿ 3:1) ‘ಕೊನೇ ದಿನಗಳು’ ಮತ್ತು ಪ್ರಕಟನೆ ಪುಸ್ತಕದಲ್ಲಿ ಹೇಳಿದ ನಾಲ್ಕು ಕುದುರೆ ಸವಾರರ ಬಗ್ಗೆ ಇನ್ನೂ ಜಾಸ್ತಿ ವಿಷ್ಯ ತಿಳ್ಕೊಳ್ಳೋಕೆ 1914ರಿಂದ ಲೋಕದಲ್ಲಾದ ಬದಲಾವಣೆ ಅನ್ನೋ ವಿಡಿಯೋ ನೋಡಿ ಮತ್ತು ನವೆಂಬರ್‌ 2019ರ ಕೂಟದ ಕೈಪಿಡಿಯಲ್ಲಿರೋ “ನಾಲ್ಕು ಕುದುರೆ ಸವಾರರ ಸವಾರಿ” ಅನ್ನೋ ಲೇಖನ ಓದಿ.

ಬೈಬಲ್‌ ಕೊಡುವ ಸಹಾಯ

  •   ಆಹಾರದ ಕೊರತೆ ಮತ್ತು ಬೆಲೆಯೇರಿಕೆಯಂಥ ಅನೇಕ ಸಮಸ್ಯೆಗಳನ್ನ ನಾವು ಹೇಗೆ ನಿಭಾಯಿಸಿಕೊಂಡು ಹೋಗಬಹುದು ಅನ್ನೋದಕ್ಕೆ ಬೈಬಲ್‌ ಪ್ರಾಯೋಗಿಕ ಸಲಹೆಗಳನ್ನ ಕೊಡುತ್ತೆ. ಆ ಸಲಹೆಗಳಲ್ಲಿ ಕೆಲವನ್ನ ತಿಳ್ಕೊಳ್ಳೋಕೆ““ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಅನ್ನೋ ಲೇಖನ ನೋಡಿ.

  •   ಪರಿಸ್ಥಿತಿ ಹೀಗೇ ಇರಲ್ಲ, ಮುಂದೆ ನಮಗೆ ಒಂದು ಭವ್ಯವಾದ ಭವಿಷ್ಯ ಇದೆ ಅಂತ ಬೈಬಲ್‌ ಹೇಳುತ್ತೆ. ಆ ಸಮಯದಲ್ಲಿ “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ” ಮತ್ತೆ ಎಲ್ಲರಿಗೂ ಸಾಕಷ್ಟು ಆಹಾರನೂ ಇರುತ್ತೆ. (ಕೀರ್ತನೆ 72:16) ಬೈಬಲ್‌ ಹೇಳೋ ಈ ಭವ್ಯವಾದ ಭವಿಷ್ಯದ ಬಗ್ಗೆ ಮತ್ತು ಯಾಕೆ ಇದನ್ನ ನಂಬಬಹುದು ಅಂತ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರೋ “ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು” ಅನ್ನೋ 2ನೇ ಪಾಠ ಓದಿ.