ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಸ್ರಾಯೇಲಿನ ಒಂದು ಕುಲದ ಪ್ರದೇಶ—ಪುರಾತನ ಪುರಾವೆಗಳು

ಇಸ್ರಾಯೇಲಿನ ಒಂದು ಕುಲದ ಪ್ರದೇಶ—ಪುರಾತನ ಪುರಾವೆಗಳು

 ದೇವರು ಮಾತುಕೊಟ್ಟ ದೇಶವನ್ನು ಇಸ್ರಾಯೇಲ್ಯರು ವಶಪಡಿಸಿಕೊಂಡು ತಮ್ಮಲ್ಲಿದ್ದ ಎಲ್ಲ ಕುಲಗಳಿಗೆ ಹಂಚಿಕೊಂಡರು ಎಂದು ಬೈಬಲ್‌ ಹೇಳುತ್ತದೆ. ಮನಸ್ಸೆ ಕುಲದ 10 ಮನೆತನಗಳಿಗೆ ಸಿಕ್ಕಿದ ಪ್ರದೇಶಗಳು ಯೋರ್ದನಿನ ಪಶ್ಚಿಮಕ್ಕೆ ಇದ್ದವು. ಬೇರೆ ಕುಲಗಳಿಗೆ ಸಿಕ್ಕಿದ ಪ್ರದೇಶಗಳು ಇದದ್ದು ಬೇರೆ ಕಡೆ. (ಯೆಹೋಶುವ 17:1-6) ಇದಕ್ಕೆ ಏನಾದರೂ ಪುರಾವೆ ಇದೆಯಾ?

 1910 ರಲ್ಲಿ ಸಮಾರ್ಯದಲ್ಲಿ ಒಟ್ಟು 102 ಮಡಿಕೆ ಚೂರುಗಳು ಸಿಕ್ಕಿದವು. ಅವು ಕ್ರಿ.ಪೂ. 8 ನೇ ಶತಮಾನದ್ದು. ಆಸ್ಟ್ರಕ ಎಂಬ ಹೆಸರು ಪಡೆದ ಆ ಮಡಿಕೆ ಚೂರುಗಳ ಮೇಲೆ ಹೀಬ್ರು ಭಾಷೆಯಲ್ಲಿ ಏನೋ ಬರೆದಿತ್ತು. ದ್ರಾಕ್ಷಾಮದ್ಯ, ಮೈಕೈಗೆ ಹಚ್ಚುವ ಎಣ್ಣೆ ಇತರ ಬೆಲೆಬಾಳುವ ವಸ್ತುಗಳನ್ನು ರಾಜಧಾನಿಯಾದ ಸಮಾರ್ಯದ ಅರಮನೆಗೆ ಸಾಗಿಸಿದ್ದರ ಬಗ್ಗೆ ಬರೆದಿತ್ತು. ಆದರೆ ಆ 102 ರಲ್ಲಿ ಬರೀ 63 ಮಡಿಕೆ ಚೂರುಗಳಲ್ಲಿದ್ದ ಬರಹಗಳು ಮಾತ್ರ ಓದಲಿಕ್ಕೆ ಆಗುವ ತರ ಇದ್ದವು. ಆದರೆ ಈ ಚೂರುಗಳನ್ನೆಲ್ಲ ಒಟ್ಟಿಗೆ ಪರಿಶೀಲಿಸಿದಾಗ ಅದು ಯಾವ ಕಾಲದ್ದು, ಮನೆತನದ ಹೆಸರುಗಳು ಮತ್ತು ವ್ಯಾಪಾರವಹಿವಾಟುಗಳು ಮಾಡಿದವರ ಮತ್ತು ಕೊಂಡುಕೊಂಡವರ ಹೆಸರುಗಳು ಇದ್ದವು.

 ಸಮಾರ್ಯದ ಆ ಮಡಿಕೆ ಚೂರುಗಳ ಮೇಲೆ ಬರೆದಿದ್ದ ಮನೆತನಗಳ ಹೆಸರುಗಳು ಮನಸ್ಸೆ ಕುಲದ್ದು ಅನ್ನುವುದು ಸ್ಪಷ್ಟ. NIV ಭೂಅಗೆತಶಾಸ್ತ್ರದ ಅಧ್ಯಯನ ಬೈಬಲ್‌ (ಇಂಗ್ಲಿಷ್‌) ಹೇಳುವ ಪ್ರಕಾರ ಆ ಮಡಿಕೆ ಚೂರುಗಳು, “ಮನೆಸ್ಸೆಯ ಮನೆತನದವರ ಬಗ್ಗೆ, ಅವರು ವಾಸಿಸಿದ ಸ್ಥಳಗಳ ಬಗ್ಗೆ ಬೈಬಲಲ್ಲಿ ಹೇಳಿರುವ ವಿಷಯಗಳು ಸರಿ ಅನ್ನುವುದಕ್ಕೆ ಪುರಾವೆಯಾಗಿವೆ.”

ಈ ಮಡಿಕೆ ಚೂರಿನ ಮೇಲಿರುವ ಬರಹ ನೋವಾ ಎಂಬ ಹೆಂಗಸು ಮನಸ್ಸೆ ವಂಶದವಳು ಎಂದು ತೋರಿಸುತ್ತದೆ

 ಬೈಬಲ್‌ ಬರಹಗಾರನಾದ ಆಮೋಸ ಆ ಕಾಲದ ಶ್ರೀಮಂತರ ಬಗ್ಗೆ ಬರೆದ ಮಾತು ನಿಜ ಅಂತ ಸಹ ಸಮಾರ್ಯದಲ್ಲಿ ಸಿಕ್ಕಿದ ಆ ಮಡಿಕೆ ಚೂರುಗಳು ತೋರಿಸುತ್ತವೆ. ಆಮೋಸ ಹೀಗಂದ, “ನೀವು ಬೋಗುಣಿ ತುಂಬ ದ್ರಾಕ್ಷಾಮದ್ಯ ಕುಡಿತೀರ, ಅತ್ಯುತ್ತಮ ಎಣ್ಣೆಗಳನ್ನ ಹಚ್ಕೊಳ್ತೀರ.” (ಆಮೋಸ 6:1, 6) ಮನಸ್ಸೆ ಕುಲದ 10 ಮನೆತನದವರು ವಾಸಿಸುತ್ತಿದ್ದ ಸ್ಥಳಕ್ಕೆ ಅಂಥ ವಸ್ತುಗಳು ಆಮದು ಆಗುತ್ತಿತ್ತು ಎಂದು ಸಮಾರ್ಯದ ಆಸ್ಟ್ರಕ ದೃಢೀಕರಿಸುತ್ತದೆ.