ಒಂಟಿತನ ಕಾಡಿದಾಗ . . .
ಮನೇಲಿ ಕೂತು ಕೂತು ನಿಮ್ಗೆ ಬೋರ್ ಆಗ್ತಿದಿಯಾ? ಒಂಟಿತನ ಕಾಡುವಾಗ “ಮನೆಮಾಳಿಗೆ ಮೇಲಿರುವ ಒಂಟಿಯಾದ ಪಕ್ಷಿ” ತರ ಇರುತ್ತೆ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 102:7) ಈ ತರ ಬದುಕಲ್ಲಿ ಒಂಟಿತನ ಕಾಡುವಾಗ ಅದ್ರಿಂದ ಹೊರ ಬರೋಕೆ ಏನು ಮಾಡಬೇಕು ಅಂತ ಬೈಬಲ್ ಸಹಾಯ ಮಾಡುತ್ತೆ.
ದೇವರ ಜೊತೆ ಸ್ನೇಹ ಬೆಳೆಸಿ
ನಾವು ಸೃಷ್ಟಿಕರ್ತ ದೇವರ ಬಗ್ಗೆ ತಿಳ್ಕೊಂಡ್ರೆ ಒಂಟಿ ಭಾವನೆಯನ್ನ ಹೊಡೆದೋಡಿಸಿ ಖುಷಿಯಾಗಿರಬಹುದು ಅಂತ ಬೈಬಲ್ ಹೇಳುತ್ತೆ. (ಮತ್ತಾಯ 5:3, 6) ದೇವರ ಬಗ್ಗೆ ತಿಳ್ಕೊಳ್ಳೋಕೆ ಈ ಕೆಳಗಿನ ವಿಷ್ಯಗಳು ಸಹಾಯ ಮಾಡುತ್ತೆ. ಇವೆಲ್ಲ ಉಚಿತವಾಗಿ ಲಭ್ಯ.
ಈ ವೆಬ್ಸೈಟ್ನಲ್ಲಿ ಆನ್ಲೈನ್ ಬೈಬಲನ್ನ ಓದಬಹುದು.
ಬೈಬಲ್ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡೋ ಚಿಕ್ಕ ಚಿಕ್ಕ ವಿಡಿಯೋಗಳನ್ನ ನೋಡಬಹುದು
“ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ”—ಬೈಬಲ್ ಬಗ್ಗೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳಬಹುದು.
“ಅವರ ನಂಬಿಕೆಯನ್ನು ಅನುಕರಿಸಿರಿ”—ಈ ಸರಣಿ ಲೇಖನಗಳಲ್ಲಿ ದೇವರ ಮೇಲೆ ನಂಬಿಕೆ ಇಟ್ಟಿದ್ದ ಬೈಬಲ್ ಕಾಲದ ಸ್ತ್ರೀ ಪುರುಷರ ಜೀವನ ಕಥೆಯನ್ನು ಓದಬಹುದು
“ವಿಕಾಸವೇ ವಿನ್ಯಾಸವೇ?”—ಈ ಸರಣಿ ಲೇಖನದಲ್ಲಿ ವೈಜ್ಞಾನಿಕ ವಿಸ್ಮಯದ ಬಗ್ಗೆ ಕಲಿಬಹುದು
ಮನಸ್ಸಿಗೆ ನೆಮ್ಮದಿ ಕೊಡೋ ವಿಷಯಗಳು ಬೈಬಲಲ್ಲಿ ಇದೆ, ಅದನ್ನ ಓದಿ
ಬೈಬಲಲ್ಲಿರೋ ವಿಷ್ಯಗಳು ತುಂಬ ಜನರಿಗೆ ನೆಮ್ಮದಿ ಕೊಟ್ಟಿವೆ. ಈಗ ತುಂಬ ಸಮಯ ಇದೆ. ಎಲ್ಲ ವಿಷ್ಯಗಳನ್ನೂ ಒಂದೇ ಸಲ ಓದೋದಕ್ಕಿಂತ ನಿಧಾನವಾಗಿ ವಿಷ್ಯಗಳನ್ನ ಅರ್ಥಮಾಡ್ಕೊಂಡು ಓದಿ. ಅದರ ಬಗ್ಗೆ ಯೋಚಿಸಿ, ಪ್ರಾರ್ಥನೆ ಮಾಡಿ.—ಮಾರ್ಕ 1:35.
ಕಷ್ಟಗಳು ಇಷ್ಟು ಭೀಕರವಾಗಿರೋದಕ್ಕೆ ಕಾರಣ ಇದೆ, ಅದನ್ನ ತಿಳ್ಕೊಳ್ಳಿ
ಇಷ್ಟೊಂದು ಕಷ್ಟಗಳು ಯಾಕಿವೆ ಮತ್ತು ದೇವರು ಇದನ್ನೆಲ್ಲ ಹೇಗೆ ತಗೆದು ಹಾಕ್ತಾನೆ ಅಂತ ತಿಳ್ಕೊಂಡ್ರೆ ಜೀವನದಲ್ಲಿ ಎಂಥ ಕಷ್ಟಗಳೂ ಬಂದ್ರೂ ಅದನ್ನ ಜಯಿಸಬಹುದು.—ಯೆಶಾಯ 65:17.
ಜಾಸ್ತಿ ಚಿಂತೆ ಮಾಡ್ತಾ ಕೂರಬೇಡಿ
ಒಂಟಿತನ ಮತ್ತು ಚಿಂತೆಯಿಂದ ಹೊರ ಬರೋಕೆ ಈ ಕೆಳಗಿನ ಲೇಖನಗಳು ಸಹಾಯ ಮಾಡುತ್ತೆ. ಇದನ್ನ ಓದಿದ್ರೆ ನಾವು ‘ಚಿಂತೆ ಮಾಡೋದನ್ನ ನಿಲ್ಲಿಸೋಕೆ’ ಆಗುತ್ತೆ.—ಮತ್ತಾಯ 6:25.
ಸ್ನೇಹಿತರ ಜೊತೆ ಆಗಾಗ ಮಾತಾಡ್ತಾ ಇರಿ
ಸ್ನೇಹಿತರ ಜೊತೆ ಮಾತಾಡ್ತಾ ಇದ್ರೆ ಖುಷಿಖುಷಿಯಾಗಿ ಇರಬಹುದು. ಅದರಲ್ಲೂ ಭೇಟಿ ಮಾಡಕ್ಕಾಗದೇ ಇರೋ ಪರಿಸ್ಥಿತಿಯಲ್ಲಿ ಅವರ ಜೊತೆ ಮಾತಾಡೋದು ತುಂಬ ಮುಖ್ಯ. ನೀವು ಹೊರಗಡೆ ಹೋಗೋಕೆ ಆಗ್ತಾನೇ ಇಲ್ಲ ಅಂದಾಗ ಫೋನ್ ಮಾಡಬಹುದು ಅಥವಾ ವಿಡಿಯೊ ಕಾಲ್ ಮಾಡಬಹುದು. ಇದ್ರಿಂದ ನಿಮ್ಮ ಸ್ನೇಹ ಉಳಿಯುತ್ತೆ ಮತ್ತು ಹೊಸ ಫ್ರೆಂಡ್ಸೂ ಸಿಗ್ತಾರೆ. ಒಳ್ಳೆ ಫ್ರೆಂಡ್ಸನ್ನ ಮಾಡ್ಕೊಳ್ಳೋಕೆ ಮತ್ತು ನೀವೂ ಒಳ್ಳೇ ಫ್ರೆಂಡ್ ಆಗಿರೋಕೆ ಈ ಕೆಳಗಿನ ಲೇಖನಗಳು ಸಹಾಯ ಮಾಡುತ್ತೆ.—ಜ್ಞಾನೋಕ್ತಿ 17:17.
ಮನೇಲೇ ಏನಾದ್ರೂ ಕೆಲಸ ಮಾಡ್ತಾ ಫಿಟ್ ಆಗಿರಿ
“ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ” ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 4:8) ಬೈಬಲಿನಲ್ಲಿ ಹೇಳಿರೋ ತರ ನೀವು ವ್ಯಾಯಾಮ ಮಾಡ್ತಾ ಫಿಟ್ ಆಗಿದ್ರೆ, ಸಂತೋಷವಾಗಿ ಇರಬಹುದು. ಅದರಲ್ಲೂ ಒಂಟಿತನ ಕಾಡುವಾಗ ವ್ಯಾಯಾಮ ಮಾಡಿದ್ರೆ ಖುಷಿಖುಷಿಯಾಗಿ ಇರಬಹುದು. ಮನೆಯಿಂದ ಹೊರಗೆ ಹೋಗಕ್ಕಾಗಲಿಲ್ಲ ಅಂದ್ರೂ ಮನೇಲೇ ಏನಾದ್ರೂ ಕೆಲಸ ಮಾಡ್ತಾಲವಲವಿಕೆಯಿಂದ ಇರಬಹುದು.