ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

kovop58/stock.adobe.com

ಸದಾ ಎಚ್ಚರವಾಗಿರಿ! 

ಒಲಿಂಪಿಕ್‌ನಿಂದ ಒಗ್ಗಟ್ಟು ಸಾಧ್ಯನಾ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಒಲಿಂಪಿಕ್‌ನಿಂದ ಒಗ್ಗಟ್ಟು ಸಾಧ್ಯನಾ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 2024ರ ಬೇಸಿಗೆಯ ಒಲಿಂಪಿಕ್‌ನ್ನ ಸುಮಾರು 500 ಕೋಟಿ ಜನ್ರು ನೋಡ್ತಾರೆ. ಇದ್ರಲ್ಲಿ 206 ದೇಶದಿಂದ ಬಂದಿರೋ ಕ್ರೀಡಾಪಟುಗಳು ಭಾಗವಹಿಸ್ತಾರೆ. ಈ ಒಲಿಂಪಿಕ್‌ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಚ್‌ ಹೀಗೆ ಹೇಳಿದ್ರು: “ಇಡೀ ಪ್ರಪಂಚದಲ್ಲಿ ಶಾಂತಿ ಒಗ್ಗಟ್ಟು ತರೋ ಒಂದು ಕ್ರೀಡೆ ಇದು . . . ನಾವೆಲ್ಲೂ ಬೇರೆ ಬೇರೆ ಕಡೆಯವ್ರಾಗಿದ್ರೂ ಪ್ರತಿಯೊಬ್ರು ಶಾಂತಿ ಒಗ್ಗಟ್ಟಿಂದ ಇರೋ ತರ ಮಾಡೋದೇ ಈ ಕ್ರೀಡೆಯ ಉದ್ದೇಶ. ಅದ್ರಿಂದ ಇದನ್ನ ಹೆಮ್ಮೆಯಿಂದ ಆಡೋಣ.”

 ಆದ್ರೆ ಒಲಿಂಪಿಕ್‌ಗೆ ನಿಜವಾಗ್ಲೂ ಇಷ್ಟು ಶಕ್ತಿ ಇದ್ಯಾ? ನಮ್ಮ ಮಧ್ಯೆ ಶಾಂತಿ ಮತ್ತು ಒಗ್ಗಟ್ಟನ್ನ ಯಾರಿಂದ ತರೋಕಾಗುತ್ತೆ?

ಒಲಿಂಪಿಕ್‌ಗೆ ಇಷ್ಟು ಶಕ್ತಿ ಇದ್ಯಾ?

 ಈ ವರ್ಷದ ಒಲಿಂಪಿಕ್‌ ಬರೀ ಆಟಗಳನ್ನಷ್ಟೇ ಅಲ್ಲ ಜನ್ರಲ್ಲಿ ಬಿರುಕು ತರೋ ಸಾಮಾಜಿಕ ಮತ್ತು ರಾಜಕೀಯ ವಿಷ್ಯಗಳನ್ನೂ ತೋರಿಸ್ತು. ಉದಾಹರಣೆಗೆ ಮಾನವ ಹಕ್ಕುಗಳು, ಕಪ್ಪು ಜನ ಬಿಳಿ ಜನ ಅನ್ನೋ ಭೇದಭಾವ, ಒಂದು ಧರ್ಮಕ್ಕಿಂತ ಇನ್ನೊಂದು ಶ್ರೇಷ್ಠ ಅನ್ನೋ ಭಾವನೆ ಮತ್ತು ಗಂಡು ಮೇಲು ಹೆಣ್ಣು ಕೀಳು ಅನ್ನೋ ವಾದ.

 ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯೋ ಈ ಆಟ ಜಗತ್ತಿನ ಮೂಲೆ ಮೂಲೆಲಿರೋ ಜನ್ರನ್ನ ಹುಚ್ಚೆಬ್ಬಿಸುತ್ತೆ. ಆದ್ರೆ ಇನ್ನೊಂದು ಕಡೆ ಜನ್ರ ಯೋಚ್ನೆನ ಕೆಡಿಸುತ್ತೆ. ಇದ್ರಿಂದ ಜನ ಒಂದಾಗೋ ಬದ್ಲು ಹೊಡೆದಾಡ್ಕೊಂಡು ಬೇರೆ ಬೇರೆ ಆಗ್ತಿದ್ದಾರೆ.

 ಒಗ್ಗಟ್ಟನ್ನ ಒಡೆಯೋ ಗುಣಗಳು ಜನ್ರಲ್ಲಿ ಜಾಸ್ತಿಯಾಗತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. (2 ತಿಮೊತಿ 3:1-5) ಈ ಭವಿಷ್ಯವಾಣಿ ಬಗ್ಗೆ ಹೆಚ್ಚನ್ನ ತಿಳ್ಕೊಳ್ಳೋಕೆ “‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?” ಅನ್ನೋ ಲೇಖನ ಓದಿ.

ನಿಜ ಶಾಂತಿ ಮತ್ತು ಒಗ್ಗಟ್ಟಿನ ಗುಟ್ಟು

 ಭೂಮಿಲಿ ಎಲ್ರೂ ಶಾಂತಿ ಮತ್ತು ಒಗ್ಗಟ್ಟಿಂದ ಇರೋ ತರ ಯಾರು ಮಾಡ್ತಾರೆ? “ದೇವರ ಆಳ್ವಿಕೆ” ಮಾಡುತ್ತೆ ಅಂತ ಬೈಬಲ್‌ ಮಾತು ಕೊಡುತ್ತೆ. ಸ್ವರ್ಗದಲ್ಲಿರೋ ಈ ಸರ್ಕಾರಕ್ಕೆ ಮಾತ್ರನೇ ನಮ್ಮೆಲ್ರನ್ನ ಒಗ್ಗಟ್ಟಿಂದ ಇರೋ ತರ ಮಾಡೋ ಶಕ್ತಿ ಇದೆ.—ಲೂಕ 4:43; ಮತ್ತಾಯ 6:10.

 ಈ ಸರ್ಕಾರದ ರಾಜ ಯೇಸು ಕ್ರಿಸ್ತ ಇಡೀ ಭೂಮೀಲಿ ಶಾಂತಿ ತುಂಬಿ ತುಳುಕೋ ತರ ನೋಡ್ಕೊಳ್ತಾನೆ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ:

  •   “ನೀತಿವಂತರು ಅಭಿವೃದ್ಧಿ ಆಗ್ತಾರೆ . . . ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ.”—ಕೀರ್ತನೆ 72:7.

  •   “ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ . . . ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:12, 14.

 ಯೇಸು ಕಲಿಸಿದ ವಿಷ್ಯಗಳನ್ನ ಲಕ್ಷಗಟ್ಟಲೆ ಯೆಹೋವನ ಸಾಕ್ಷಿಗಳು ಇವತ್ತು ಪಾಲಿಸ್ತಿರೋದ್ರಿಂದ ಒಗ್ಗಟ್ಟಿನಿಂದ ಇದ್ದಾರೆ. ಅವರು 239 ದೇಶಗಳಲ್ಲಿ ಹರಡ್ಕೊಂಡಿದ್ರೂ ಶಾಂತಿಯಿಂದ ಇದ್ದಾರೆ. ಅದ್ಹೇಗೆ ಅಂತ ತಿಳ್ಕೊಳ್ಳೋಕೆ “ದ್ವೇಷದ ಸರಪಳಿ ಮುರಿಯಿರಿ” ಅನ್ನೋ ಕಾವಲಿನಬುರುಜು ಪತ್ರಿಕೆ ಓದಿ.