ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Pawel Gluza/500Px Plus/Getty Images

ಸದಾ ಎಚ್ಚರವಾಗಿರಿ!

ಪ್ರಾಣಿಗಳೆಲ್ಲಾ ಕಣ್ಮರೆ ಆಗ್ತಿವೆ!—ಇದ್ರ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?

ಪ್ರಾಣಿಗಳೆಲ್ಲಾ ಕಣ್ಮರೆ ಆಗ್ತಿವೆ!—ಇದ್ರ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?

 ಅಕ್ಟೋಬರ್‌ 9, 2024ರಂದು ವಿಶ್ವ ವನ್ಯಜೀವಿ ನಿಧಿ (ವರ್ಲ್ಡ್‌ ವೈಡ್‌ಲೈಫ್‌ ಫಂಡ್‌) ಕಾಡುಪ್ರಾಣಿಗಳ ಬಗ್ಗೆ ಒಂದು ರಿಪೋರ್ಟ್‌ ಕೊಡ್ತು. ಅದನ್ನ ನೋಡಿದ ಎಷ್ಟೋ ಜನ್ರ ಮನ್ಸಿಗೆ ಬೇಜಾರಾಯ್ತು. ಆ ರಿಪೋರ್ಟ್‌ನಲ್ಲಿ ಹೀಗಿತ್ತು: ಮನುಷ್ಯರು ಮಾಡ್ತಿರೋ ಕೆಲಸದಿಂದ “1970ರಿಂದ 2020ರವರೆಗೆ ಅಂದ್ರೆ ಕಳೆದ 50 ವರ್ಷಗಳಲ್ಲಿ ಹತ್ತತ್ರ 73% ಕಾಡುಪ್ರಾಣಿಗಳು ನಾಶ ಆಗಿದೆ. ಹೀಗೇ ಆಗ್ತಾ ಹೋದ್ರೆ ಇನ್ನು ಐದು ವರ್ಷದಲ್ಲಿ ಇಡೀ ಭೂಮೀಲಿ ಒಂದೇ ಒಂದು ಪ್ರಾಣಿನೂ ಉಳಿಯಲ್ಲ.”

 ಕಾಡುಪ್ರಾಣಿಗಳ ಬಗ್ಗೆ ಈ ತರ ರಿಪೋರ್ಟ್‌ಗಳನ್ನ ಕೇಳಿಸ್ಕೊಂಡಾಗ ನಮಗೆ ಬೇಜಾರಾಗುತ್ತೆ. ಯಾಕಂದ್ರೆ ಅವುಗಳನ್ನ ಇಷ್ಟಪಟ್ಟು ಚೆನ್ನಾಗಿ ನೋಡ್ಕೊಳ್ಳೋ ಆಸೆನ ದೇವರು ನಮಗೆ ಕೊಟ್ಟಿದ್ದಾನೆ. ಅದಕ್ಕೆ ನಾವು ಭೂಮಿನ, ಅದ್ರಲ್ಲಿರೋ ಪ್ರಾಣಿಗಳನ್ನ ತುಂಬ ಇಷ್ಟಪಡ್ತೀವಿ, ಅವುಗಳಿಗೆ ಏನಾದ್ರೂ ಆದಾಗ ನಮ್ಮ ಮನ್ಸಿಗೆ ನೋವಾಗುತ್ತೆ.—ಆದಿಕಾಂಡ 1:27, 28; ಜ್ಞಾನೋಕ್ತಿ 12:10.

 ‘ನಾಶ ಆಗ್ತಿರೋ ಈ ಕಾಡುಪ್ರಾಣಿಗಳನ್ನ ಮನುಷ್ಯರು ನಿಜವಾಗ್ಲೂ ಕಾಪಾಡೋಕೆ ಆಗುತ್ತಾ? ಇದ್ರ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ?’

ಭವಿಷ್ಯ ಚೆನ್ನಾಗಿರುತ್ತೆ ಅಂತ ದೇವರು ಕೊಟ್ಟಿರೋ ಮಾತು

 ಒಂದುಕಡೆ ಮನುಷ್ಯರು ಕಾಡುಪ್ರಾಣಿಗಳನ್ನ ರಕ್ಷಿಸೋಕೆ ಹೋರಾಡ್ತಾ ಇದ್ದಾರೆ, ಆದ್ರೆ ಇನ್ನೊಂದು ಕಡೆ ಬೇರೆಯವರು ಅವನ್ನ ನಾಶ ಮಾಡ್ತಾ ಇದ್ದಾರೆ. ಹಾಗಾಗಿ ಮನುಷ್ಯರ ಕೈಯಿಂದ ಪ್ರಾಣಿಗಳನ್ನ ಕಾಪಾಡೋಕೆ ಆಗಲ್ಲ. ದೇವ್ರಿಂದ ಮಾತ್ರನೇ ಆಗೋದು. ಅದಕ್ಕೆ ಪವಿತ್ರ ಗ್ರಂಥದಲ್ಲಿ, ‘ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ದೇವರು ನಾಶಮಾಡ್ತಾನೆ’ ಅನ್ನೋ ಭವಿಷ್ಯವಾಣಿ ಇದೆ. (ಪ್ರಕಟನೆ 11:18) ಈ ಮಾತಿಂದ ನಮಗೆ ಎರಡು ವಿಷ್ಯ ಗೊತ್ತಾಗುತ್ತೆ:

  1.  1. ಭೂಮಿಯನ್ನ ಮತ್ತು ಅದ್ರಲ್ಲಿರೋ ಪ್ರಾಣಿಗಳನ್ನ ಮನುಷ್ಯರು ಸಂಪೂರ್ಣವಾಗಿ ನಾಶ ಮಾಡೋಕೆ ದೇವರು ಬಿಡಲ್ಲ.

  2.  2. ದೇವರು ಆದಷ್ಟು ಬೇಗ ಕಾಪಾಡ್ತಾನೆ. ಅದನ್ನ ನಾವು ಹೇಗೆ ಹೇಳಬಹುದು? ಈಗಾಗ್ಲೇ ಎಷ್ಟೊಂದು ಪ್ರಾಣಿಗಳು ನಾಶ ಆಗೋಗಿವೆ. ಹೀಗೇ ಆಗ್ತಿದ್ರೆ ಒಂದೇ ಒಂದು ಪ್ರಾಣಿನೂ ಉಳಿಯಲ್ಲ! ಅದಕ್ಕೆ ದೇವರು ಪ್ರಾಣಿಗಳನ್ನ ತುಂಬ ಬೇಗ ಕಾಪಾಡ್ತಾನೆ.

 ಇದನ್ನ ದೇವರು ಹೇಗೆ ಮಾಡ್ತಾನೆ? ಆತನು ಇಡೀ ಭೂಮಿ ಮೇಲೆ ತನ್ನ ಸರ್ಕಾರ ತರ್ತಾನೆ. (ಮತ್ತಾಯ 6:10) ಆ ಸರ್ಕಾರ ಪ್ರಾಣಿಗಳನ್ನ ನೋಡ್ಕೊಳೋದು ಹೇಗೆ, ಕಾಪಾಡೋದು ಹೇಗೆ ಅಂತ ಪ್ರಜೆಗಳಿಗೆ ಹೇಳ್ಕೊಡುತ್ತೆ.—ಯೆಶಾಯ 11:9.