ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ!

ಕೋವಿಡ್‌ಗೆ 60 ಲಕ್ಷ ಜನರು ಬಲಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕೋವಿಡ್‌ಗೆ 60 ಲಕ್ಷ ಜನರು ಬಲಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಪ್ರಕಾರ ಮೇ 23, 2022ರಷ್ಟಕ್ಕೆ 62 ಲಕ್ಷ 70 ಸಾವಿರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ ಮೇ 5, 2022ರಲ್ಲಿ ಬಿಡುಗಡೆಯಾದ ನ್ಯೂಸ್‌ ವರದಿಯಲ್ಲಿ ಸತ್ತವರ ಸಂಖ್ಯೆ ಇದಕ್ಕಿಂತ ಜಾಸ್ತಿ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಆ ನ್ಯೂಸ್‌ನಲ್ಲಿ ಹೀಗೆ ತಿಳಿಸಲಾಗಿತ್ತು: 2020 ಮತ್ತು 2021ರಲ್ಲಿ “ಕೋವಿಡ್‌-19ರಿಂದ ಸುಮಾರು 1 ಕೋಟಿ 49 ಲಕ್ಷ ಜನ ತೀರಿ ಹೋಗಿದ್ದಾರೆ. ಇದ್ರಲ್ಲಿ ಕೆಲವರು ನೇರವಾಗಿ ಕೋವಿಡ್‌ಗೆ ತುತ್ತಾದ್ರೆ ಇನ್ನೂ ಕೆಲವರು ಅದರಿಂದಾದ ಅನಾಹುತಗಳಿಂದ ತಮ್ಮ ಪ್ರಾಣ ಕಳ್ಕೊಂಡಿದ್ದಾರೆ.” ಇಂಥಾ ಮನಕಲಕುವ ಅನಾಹುತಗಳ ಬಗ್ಗೆ ಬೈಬಲ್‌ ಮುಂಚೆನೇ ಹೇಳಿತ್ತಾ?

ಇಂಥಾ ಅಂಟುರೋಗಗಳ ಬಗ್ಗೆ ಬೈಬಲ್‌ ಮುಂಚೆನೇ ಹೇಳಿತ್ತು

  •    “ಕೊನೇ ದಿನಗಳಲ್ಲಿ” “ಅಂಟುರೋಗಗಳು,” ಭಯಂಕರ ಕಾಯಿಲೆಗಳು ಬರುತ್ತೆ ಅಂತ ಯೇಸು ಮೊದಲೇ ಹೇಳಿದ್ದನು.—ಲೂಕ 21:11; 2 ತಿಮೊತಿ 3:1.

 ಯೇಸು ಹೇಳಿದ್ದು ಇವತ್ತು ನಮ್ಮ ಕಣ್ಮುಂದೆನೇ ನಡೀತಿದೆ. ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?” ಅನ್ನೋ ಲೇಖನ ನೋಡಿ.

ಸಮಾಧಾನದ ಮಾತುಗಳೂ ಬೈಬಲಿನಲ್ಲಿವೆ

  •    “ಎಲ್ಲ ತರದ ಸಾಂತ್ವನ ಕೊಡೋ ದೇವರು . . . ನಮ್ಮನ್ನ ಸಮಾಧಾನ ಮಾಡ್ತಾನೆ.”— 2 ಕೊರಿಂಥ 1:3, 4.

 ತಮ್ಮ ಪ್ರೀತಿಪಾತ್ರರನ್ನು ಕಳ್ಕೊಂಡಿರೋ ತುಂಬಾ ಜನ ಬೈಬಲಿನಲ್ಲಿರೋ ಸಮಾಧಾನದ ಮಾತುಗಳಿಂದ ಸಾಂತ್ವನ ಪಡ್ಕೊಂಡಿದ್ದಾರೆ. ಈ ಮಾತುಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು?” ಮತ್ತು “ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ” ಅನ್ನೋ ಲೇಖನಗಳನ್ನ ನೋಡಿ.

ಇದಕ್ಕಿರೋ ಪರ್ಮನೆಂಟ್‌ ಪರಿಹಾರದ ಬಗ್ಗೆ ಬೈಬಲಿನಲ್ಲಿದೆ

  •    “ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ.”—ಮತ್ತಾಯ 6:10.

 ತುಂಬಾ ಬೇಗ ಈ ಭೂಮಿ ಮೇಲೆ “ದೇವರ ಆಳ್ವಿಕೆ” ಬರಲಿಕ್ಕಿದೆ. ಆಗ ದೇವರು ಎಲ್ಲಾ ರೋಗಗಳನ್ನ ತೆಗೆದುಹಾಕುತ್ತಾನೆ, ಯಾರೂ “‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.” (ಮಾರ್ಕ 1:14, 15; ಯೆಶಾಯ 33:24) ದೇವರ ಸರ್ಕಾರದ ಬಗ್ಗೆ ಮತ್ತು ಅದು ಏನೆಲ್ಲಾ ಮಾಡುತ್ತೆ ಅಂತ ತಿಳ್ಕೊಳ್ಳೋಕೆ ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.

 ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಹಾಯ ಮಾಡುವ ಸಲಹೆಗಳು ಮತ್ತು ಅದ್ಭುತ ಭವಿಷ್ಯವಾಣಿಗಳು ಬೈಬಲಿನಲ್ಲಿವೆ. ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳಿ, ಪ್ರಯೋಜನ ಪಡ್ಕೊಳ್ಳಿ.