ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

YURI LASHOV/AFP via Getty Images

ಸದಾ ಎಚ್ಚರವಾಗಿರಿ!

ಕ್ರೈಸ್ತರು ಯುದ್ಧ ಮಾಡಬಹುದಾ? ಬೈಬಲ್‌ ಏನು ಹೇಳುತ್ತೆ?

ಕ್ರೈಸ್ತರು ಯುದ್ಧ ಮಾಡಬಹುದಾ? ಬೈಬಲ್‌ ಏನು ಹೇಳುತ್ತೆ?

 ಉಕ್ರೇನಿನಲ್ಲಿ ನಡೆದ ಯುದ್ಧವನ್ನ ಅನೇಕ ಕ್ರೈಸ್ತ ಧರ್ಮಗುರುಗಳು ಬೆಂಬಲಿಸಿದ್ರು. ಅಷ್ಟೇ ಅಲ್ಲ ಜನರಿಗೆ ಯುದ್ಧ ಮಾಡೋಕೆ ಪ್ರೋತ್ಸಾಹಿಸಿದರು. ಎರಡೂ ಕಡೆಗಳಲ್ಲಿ ಇರುವ ಧರ್ಮಗುರುಗಳು ತಮ್ಮ ದೇಶದವರನ್ನ ಬೆಂಬಲಿಸಿದ್ದರ ಬಗ್ಗೆ ನಾವೀಗ ನೋಡೋಣ:

  •   “ಉಕ್ರೇನಿನ ಮಣ್ಣಿಗಾಗಿ ಹೋರಾಡಿರುವ ವೀರ ಸೈನಿಕರ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತೆ, ಅವರನ್ನ ನಾವು ತುಂಬ ಗೌರವಿಸುತ್ತೀವಿ . . . ಅವರಿಗಾಗಿ ಪ್ರಾರ್ಥಿಸುತ್ತೀವಿ ಅವರಿಗೆ ಯಾವ ಸಹಾಯ ಬೇಕಿದ್ರೂ ಮಾಡಕ್ಕೆ ರೆಡಿ ಇರುತ್ತೀವಿ.”—ಕಿಯೇವ್‌ನ ಮೆಟ್ರೂಪೊಲಿಟನ್‌ ಎಪಿಫೇನಿಯಸ್‌ I, ದ ಜೆರೂಸಲೇಮ್‌ ಪೋಸ್ಟ್‌, ಮಾರ್ಚ್‌ 16, 2022.

  •   ‘ರಷ್ಯನ್‌ ಆರ್ಥೊಡಾಕ್ಸ್‌ ಚರ್ಚಿನ ಮುಖ್ಯಸ್ಥ, ರಷ್ಯಾದ ಸೈನಿಕರಿಗಾಗಿ ಭಾನುವಾರ ವಿಶೇಷ ಕಾರ್ಯಕ್ರಮವನ್ನ ನಡೆಸಿದರು. ಉಕ್ರೇನಿನ ವಿರುದ್ಧ ನಡೆಯುವ ಯುದ್ಧದಲ್ಲಿ ರಷ್ಯಾದವರಾದ ನಾವು ಸೋಲನ್ನ ಕಣೋರಲ್ಲ ಅಂತ ತೋರಿಸಿಕೊಡಿ, ಹೋಗಿ ಗೆದ್ದು ಬನ್ನಿ ಅಂತ ಪ್ರೋತ್ಸಾಹ ನೀಡಿದರು.’—ರಾಯ್‌ಟ್ರೆಸ್‌, ಏಪ್ರಿಲ್‌ 3, 2022.

 ಕ್ರೈಸ್ತರು ಯುದ್ಧದಲ್ಲಿ ಭಾಗವಹಿಸಬೇಕಾ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಏನು ಹೇಳುತ್ತೆ

 ಯೇಸುವಿನ ಮಾತನ್ನ ಪಾಲಿಸುವವರು ಯುದ್ಧ ಮಾಡಲ್ಲ ಅಂತ ಬೈಬಲ್‌ ಹೇಳುತ್ತೆ.

  •   “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು. ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ.”—ಮತ್ತಾಯ 26:52.

     ಯುದ್ಧವನ್ನ ಮಾಡುವವರು ಅಥವಾ ಅದನ್ನ ಬೆಂಬಲಿಸುವವರು ಯೇಸುವಿನ ಮಾತನ್ನ ಪಾಲಿಸುತ್ತಿದ್ದಾರಾ?

  •   “ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ. ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”—ಯೋಹಾನ 13:34, 35.

     ನಿಮ್ಮ ಮಧ್ಯ ಪ್ರೀತಿ ಇದ್ರೆ ನೀವು ನನ್ನ ಶಿಷ್ಯರು ಅಂತ ಯೇಸು ಹೇಳಿದನು. ಹಾಗಾದ್ರೆ ಯುದ್ಧ ಮಾಡೋರು ಯೇಸುವಿನ ಈ ಮಾತನ್ನ ಪಾಲಿಸುತ್ತಿದ್ದಾರೆ ಅಂತ ಹೇಳಕ್ಕಾಗುತ್ತಾ?

 ಹೆಚ್ಚಿನ ಮಾಹಿತಿಗಾಗಿ, “ಈಸ್‌ ವಾರ್‌ ಕಂಪಾಟಿಬಲ್‌ ವಿತ್‌ ಕ್ರಿಶ್ಚಿಯಾನಿಟಿ?” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

ಕ್ರೈಸ್ತರು ಮತ್ತು ಯುದ್ಧ

 ಇವತ್ತು ಕ್ರೈಸ್ತರು ಯುದ್ಧಗಳಲ್ಲಿ ಭಾಗವಹಿಸದೇ ಇರೋದು ನ್ಯಾಯವಾಗಿದೆಯಾ? ಹೌದು. ಯಾಕಂದ್ರೆ, “ಕೊನೇ ದಿನಗಳಲ್ಲಿಎಲ್ಲಾ ಜನಾಂಗಗಳು ‘ಯಾವತ್ತೂ ಯುದ್ಧ ಮಾಡೋಕೆ ಕಲಿಯಲ್ಲ’ ಅಂತ ಬೈಬಲ್‌ ಮುಂಚೆನೇ ತಿಳಿಸಿತ್ತು.—ಯೆಶಾಯ 2:2, 4.

 ಆದಷ್ಟು ಬೇಗನೇ ‘ಶಾಂತಿಯ ದೇವರಾದ’ ಯೆಹೋವ a ತನ್ನ ಆಳ್ವಿಕೆಯ ಮೂಲಕ ಜನರನ್ನ “ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಫಿಲಿಪ್ಪಿ 4:9; ಕೀರ್ತನೆ 72:14.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.