ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ! 

ಜಗತ್ತಿನಾದ್ಯಂತ ಬೆಚ್ಚಿ ಬೀಳಿಸುವ ಗುಂಡಿನ ದಾಳಿಗಳು—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಜಗತ್ತಿನಾದ್ಯಂತ ಬೆಚ್ಚಿ ಬೀಳಿಸುವ ಗುಂಡಿನ ದಾಳಿಗಳು—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 2022ರ ಜುಲೈ ತಿಂಗಳೊಂದರಲ್ಲೇ ಲೋಕದ ಬೇರೆ ಬೇರೆ ಕಡೆ ಬೆಚ್ಚಿ ಬೀಳಿಸುವ ಗುಂಡಿನ ದಾಳಿಗಳು ನಡೆದಿವೆ:

  •   “ಜಪಾನ್‌ ಕಂಡ ಅತ್ಯಂತ ಪ್ರಸಿದ್ದ ರಾಜಕಾರಣಿ [ಮಾಜಿ ಪ್ರಧಾನ ಮಂತ್ರಿ, ಶಿಂಜೋ ಅಬೆ] ಗುಂಡಿನ ದಾಳಿಗೆ ತುತ್ತಾದ ಸುದ್ದಿ ಕೇಳಿ ಇಡೀ ಜಗತ್ತೇ ದಂಗಾಯಿತು. ಯಾಕಂದ್ರೆ ಜಪಾನ್‌ನಲ್ಲಿ ಈ ತರ ಹಿಂಸೆ, ಅಪಾರಾಧಗಳು ನಡೆಯೋದು ತುಂಬ ಕಮ್ಮಿ. ಅಲ್ಲದೆ, ಅಲ್ಲಿ ಜನ ಗನ್‌ ಇಟ್ಟುಕ್ಕೊಳ್ಳೋದರ ಬಗ್ಗೆ ತುಂಬ ಕಟ್ಟುನಿಟ್ಟಾದ ನಿಯಮಗಳಿವೆ.”—ಜುಲೈ 10, 2022, ದಿ ಜಪಾನ್‌ ಟೈಮ್ಸ್‌.

  •   “ಡೆನ್ಮಾರ್ಕ್‌ನ ಕೊಪೆನ್‌ಹೆಗನ್‌ ಅನ್ನೋ ಶಾಪಿಂಗ್‌ ಮಾಲ್‌ನಲ್ಲಿ ಒಬ್ಬ ಬಂದೂಕುಧಾರಿ ಮೂರು ಜನರನ್ನ ಕೊಂದುಹಾಕಿದ.”—ಜುಲೈ 4, 2022, ರಾಯ್‌ಟರ್ಜ್‌.

  •   “ದಕ್ಷಿಣ ಆಫ್ರಿಕ: ಸೊವೆಟೊ ಅನ್ನೋ ಜಾಗದ ಒಂದು ಬಾರ್‌ನಲ್ಲಿ ಒಬ್ಬ ವ್ಯಕ್ತಿ ಮಾಡಿದ ಗುಂಡಿನ ದಾಳಿಗೆ 15 ಜನ ಬಲಿಯಾದ್ರು.”—ಜುಲೈ 10, 2022, ದಿ ಗಾರ್ಡಿಯನ್‌.

  •   “ರಜಾ ದಿನವಾಗಿದ್ದ ಜುಲೈ 4 ಮತ್ತು ಅದರ ಹಿಂದಿನ ವಾರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯಿಂದ ಅಮೇರಿಕದಲ್ಲಿ ಸುಮಾರು 220ಕ್ಕಿಂತ ಹೆಚ್ಚು ಜನ ಪ್ರಾಣ ಕಳಕೊಂಡರು.”—ಜುಲೈ 5, 2022, ಸಿಬಿಎಸ್‌ ನ್ಯೂಸ್‌.

 ಇಂಥ ಮನಕಲಕುವ ಘಟನೆಗಳಿಗೆ ಕೊನೆ ಇದೆಯಾ? ಇದರ ಬಗ್ಗೆ ಬೈಬಲ್‌ ಏನಾದರೂ ಹೇಳುತ್ತಾ?

ಹಿಂಸೆ ಹೇಳಹೆಸರಿಲ್ಲದೆ ಹೋಗುತ್ತೆ

 ಬೈಬಲ್‌, ನಾವಿರೋ ಕಾಲವನ್ನ ‘ಕೊನೇ ದಿನಗಳು’ ಅಂತ ಕರೆಯುತ್ತೆ. ಇಂಥ ಸಮಯದಲ್ಲಿ ಜನರು ಉಗ್ರರು ಮತ್ತು ಕ್ರೂರಿಗಳಾಗಿ ಮಾನವೀಯತೆಯನ್ನೇ ಮರೆತು ಹೋಗ್ತಾರೆ ಅಂತನೂ ಹೇಳುತ್ತೆ. (2 ತಿಮೊತಿ 3:1, 3) ಇಂಥ ಘಟನೆಗಳನ್ನ ನೋಡಿ ಜನ ಇವತ್ತು ಭಯದಲ್ಲೇ ಬದುಕ್ತಿದ್ದಾರೆ. (ಲೂಕ 21:11) ಆದರೆ ಮುಂದೆ ಹಿಂಸೆನೇ ಇಲ್ಲದ ಪರಿಸ್ಥಿತಿ ಬರುತ್ತೆ ಮತ್ತು “ಜನ್ರು ಪ್ರಶಾಂತವಾದ ಸ್ಥಳದಲ್ಲಿ ವಾಸಿಸ್ತಾರೆ, ಸುರಕ್ಷಿತವಾದ ತಾಣಗಳಲ್ಲಿ, ನೆಮ್ಮದಿಯಿರೋ ವಿಶ್ರಾಂತಿ ಸ್ಥಳಗಳಲ್ಲಿ ನೆಲೆಸ್ತಾರೆ” ಅಂತ ದೇವರ ವಾಕ್ಯ ಮಾತು ಕೊಡುತ್ತೆ. (ಯೆಶಾಯ 32:18) ಈ ಮಾತು ನಿಜ ಆಗುತ್ತಾ? ಆಗೋದಾದ್ರೂ ಹೇಗೆ?

 ದೇವರು ಕೆಟ್ಟತನವನ್ನ ಕೊನೆಗೊಳಿಸಿ, ಆಯುಧಗಳನ್ನ ಅಳಿಸಿ ಹಾಕ್ತಾನೆ.

  •   “ಆದ್ರೆ ಕೆಟ್ಟವರು ಭೂಮಿ ಮೇಲಿಂದ ನಾಶ ಆಗ್ತಾರೆ.”—ಜ್ಞಾನೋಕ್ತಿ 2:22.

  •   “ಆತನು [ದೇವರು] ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ. ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ, ಯುದ್ಧ ರಥಗಳನ್ನ ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.”—ಕೀರ್ತನೆ 46:9.

 ದೇವರು ಜನರಿಗೆ ಶಾಂತಿಯಿಂದ ಇರಲು ಕಲಿಸಿ, ಹಿಂಸೆಯನ್ನ ಬುಡ ಸಮೇತ ಕಿತ್ತು ಹಾಕ್ತಾನೆ.

  •   “ನನ್ನ ಇಡೀ ಪವಿತ್ರ ಬೆಟ್ಟದಲ್ಲಿ ಅವು ಯಾವ ಹಾನಿನೂ ಮಾಡಲ್ಲ, ಯಾವುದನ್ನೂ ಹಾಳುಮಾಡಲ್ಲ, ಯಾಕಂದ್ರೆ ಸಮುದ್ರ ನೀರಿಂದ ತುಂಬಿರೋ ತರ, ಭೂಮಿ ಯೆಹೋವನ ಜ್ಞಾನದಿಂದ ತುಂಬಿಕೊಳ್ಳುತ್ತೆ.”—ಯೆಶಾಯ 11:9.

  •   ಈಗಲೂ ಕೂಡ ದೇವರು ಲೋಕವ್ಯಾಪಕವಾಗಿ ಜನರಿಗೆ, ಹಿಂಸೆಗೆ ಕಡಿವಾಣ ಹಾಕುವಂತೆ ಮತ್ತು ಆಯುಧ ಅಥವಾ ‘ಕತ್ತಿಗಳನ್ನ ನೇಗಿಲ ಗುಳಗಳಾಗಿ ಮತ್ತು ಈಟಿಗಳನ್ನ ಕುಡುಗೋಲುಗಳಾಗಿ ಮಾಡುವಂತೆ ಕಲಿಸಿಕೊಡ್ತಿದ್ದಾರೆ.’—ಮೀಕ 4:3.

 ಭಯನೇ ಇಲ್ಲದೇ ಇರೋ ಕಾಲ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. ಅದ್ರ ಬಗ್ಗೆ ಹೆಚ್ಚನ್ನ ತಿಳಿಯಲು “ಭಯ—ಈಗ ಸಾಮಾನ್ಯ ಆದರೆ ಸದಾಕಾಲಕ್ಕಲ್ಲ!” ಅನ್ನೋ ಲೇಖನ ನೋಡಿ.

 ಹಿಂಸೆಗೆ ಶಾಶ್ವತ ಪರಿಹಾರ ಏನು ಅಂತ ತಿಳಿಯಲು “ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ” ಅನ್ನೋ ಲೇಖನ ನೋಡಿ.