ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Yan Zabolotnyi/stock.adobe.com

ಸದಾ ಎಚ್ಚರವಾಗಿರಿ! 

ಜನ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಜನ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಹೈಟಿಯಲ್ಲಿ ಗುಂಪು ಹಿಂಸಾಚಾರ ಜಾಸ್ತಿ ಆಗ್ತಿದೆ. ದಕ್ಷಿಣ ಆಫ್ರಿಕಾ, ಮೆಕ್ಸಿಕೋ ಮತ್ತು ಇತರ ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ಅಪರಾಧಗಳ ಸಂಖ್ಯೆ ಮುಗಿಲು ಮುಟ್ತಿದೆ. ಕೆಲವು ದೇಶಗಳಲ್ಲಿ ಹಿಂಸಾಚಾರ ಕಮ್ಮಿ ಆಗಿದ್ರೂ ಆಸ್ತಿ ವಿಚಾರದಲ್ಲಿ ಅನೇಕ ಅಪರಾಧಗಳು ಆಗ್ತಿರೋದ್ರಿಂದ ಜನರಲ್ಲಿ ಭಯ ಮತ್ತು ಆತಂಕದ ವಾತಾವರಣ ಮನೆ ಮಾಡಿದೆ.

 ಲೋಕದ ಎಲ್ಲಾ ಕಡೆ ನಿಯಮಗಳನ್ನ ಮುರಿಯೋದು ಜಾಸ್ತಿ ಆಗ್ತಿದೆ. ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ನಿಯಮ ಮುರಿಯೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ನಿಯಮ ಮುರಿಯೋದು ‘ಅಂತ್ಯಕಾಲದ ಸೂಚನೆಗಳಲ್ಲಿ’ ಒಂದು ಅಂತ ಬೈಬಲ್‌ ಮುಂಚೆನೇ ಹೇಳಿದೆ. (ಮತ್ತಾಯ 24:3) ಆಗ ಪರಿಸ್ಥಿತಿ ಹೇಗಿರುತ್ತೆ ಅಂತ ವಿವರಿಸುವಾಗ ಯೇಸು ಈ ಮಾತುಗಳನ್ನ ಹೇಳಿದನು:

  •   “ಕೆಟ್ಟತನ [ನಿಯಮ ಉಲ್ಲಂಘನೆ] ಹೆಚ್ಚಾಗೋದ್ರಿಂದ ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ.”—ಮತ್ತಾಯ 24:12.

 ಕೊನೆ ದಿನಗಳಲ್ಲಿ “ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು” ಇರ್ತಾರೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. (2 ತಿಮೊತಿ 3:1-5) ಜನರಲ್ಲಿ ಇಂಥ ಗುಣಗಳು ಇರೋದ್ರಿಂದಾನೇ ನಿಯಮಗಳನ್ನ ಮುರಿಯುತ್ತಿದ್ದಾರೆ ಅಥವಾ ಗಾಳಿಗೆ ತೂರುತ್ತಿದ್ದಾರೆ.

 ಆದ್ರೆ ಖುಷಿ ಕೊಡೋ ಒಂದು ವಿಷ್ಯ ಇದೆ. ಅದೇನಂದ್ರೆ ಇಂಥ ಕೆಟ್ಟ ವಿಷ್ಯಗಳು ಬೇಗ ಕೊನೆಯಾಗುತ್ತೆ ಅಂತ ಬೈಬಲ್‌ ಹೇಳಿದೆ.

  •   “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ. ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ, ಅವರು ನಿನಗೆ ಸಿಗೋದೇ ಇಲ್ಲ. ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತನೆ 37:10, 11.

 ಬೈಬಲ್‌ ನಮಗೆ ಯಾವ ನಿರೀಕ್ಷೆ ಕೊಡುತ್ತೆ ಮತ್ತು ಈ ಎಲ್ಲಾ ವಿಷ್ಯಗಳು ಬೈಬಲ್‌ ಭವಿಷ್ಯವಾಣಿಯ ನೆರವೇರಿಕೆ ಅಂತ ಯಾಕೆ ಹೇಳಬಹುದು ಅಂತ ತಿಳ್ಕೊಳ್ಳೋಕೆ ಈ ಮುಂದಿನ ಲೇಖನಗಳನ್ನ ನೋಡಿ.

 ಸಂತೋಷದ ಜೀವನಮಾರ್ಗ—ನಿರೀಕ್ಷೆ

 ‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?

 ಕಡೇ ದಿವಸಗಳಲ್ಲಿ ಎಂಥ ಜನರು ಇರುತ್ತಾರೆ?