ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

sinceLF/E+ via Getty Images

ಸದಾ ಎಚ್ಚರವಾಗಿರಿ!

ನಾಗರೀಕರನ್ನ ಯಾರು ರಕ್ಷಿಸ್ತಾರೆ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ನಾಗರೀಕರನ್ನ ಯಾರು ರಕ್ಷಿಸ್ತಾರೆ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ವಿಶ್ವಸಂಸ್ಥೆಯ ವರದಿ ಹೀಗೆ ಹೇಳುತ್ತೆ:

  •   2023, ಅಕ್ಟೋಬರ್‌ 7ರಿಂದ ಅಕ್ಟೋಬರ್‌ 23ರವರೆಗೆ ಗಾಜಾ ಮತ್ತು ಇಸ್ರೇಲ್‌ ಮಧ್ಯೆ ನಡೆದ ಯುದ್ಧದಲ್ಲಿ 6,400ಕ್ಕಿಂತ ಜಾಸ್ತಿ ಜನ ಜೀವ ಕಳ್ಕೊಂಡ್ರು ಮತ್ತು ಸುಮಾರು 15,200 ಜನರು ಗಾಯಗೊಂಡ್ರು. ಅಷ್ಟೇ ಅಲ್ಲ ಸಾವಿರಾರು ಜನರು ತಮ್ಮ ಮನೆಗಳನ್ನ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂತು.

  •   ಸೆಪ್ಟೆಂಬರ್‌ 24, 2023ರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆದ ಯುದ್ಧದಲ್ಲಿ 9,701 ಜನ ತಮ್ಮ ಜೀವ ಕಳ್ಕೊಂಡ್ರು ಮತ್ತು 17,748 ಉಕ್ರೇನಿಯನ್ನರು ಗಾಯಗೊಂಡ್ರು.

 ಯುದ್ಧಗಳಿಂದ ಕಷ್ಟಪಡ್ತಿರೋ ಜನ್ರಿಗೆ ಬೈಬಲ್‌ ಯಾವ ನಿರೀಕ್ಷೆ ಕೊಡುತ್ತೆ?

ನಿರೀಕ್ಷೆಗೆ ಒಂದು ಕಾರಣ

 ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ” ಅಂತ ಬೈಬಲ್‌ ಮುಂಚೆನೇ ಹೇಳಿತ್ತು. (ಕೀರ್ತನೆ 46:9) ದೇವರು ಮಾನವ ಸರ್ಕಾರಗಳನ್ನ ತೆಗೆದುಹಾಕಿ ತನ್ನ ಸರ್ಕಾರ ಅಥವಾ ಆಳ್ವಿಕೆಯನ್ನ ತರ್ತಾನೆ. (ದಾನಿಯೇಲ 2:44) ದೇವರ ಸರ್ಕಾರ ಎಲ್ಲ ಕಷ್ಟ ಸಮಸ್ಯೆಗಳನ್ನ ತೆಗೆದುಹಾಕಿ ಜನ್ರಿಗೆ ನೆಮ್ಮದಿ ಕೊಡುತ್ತೆ.

 ದೇವರ ಸರ್ಕಾರದ ರಾಜನಾಗಿರೋ ಯೇಸು ಕ್ರಿಸ್ತ ಏನು ಮಾಡ್ತಾನೆ ಅಂತ ಗಮನಿಸಿ:

  •   “ಯಾಕಂದ್ರೆ ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ, ಬಡವರ ಜೀವವನ್ನ ಕಾಪಾಡ್ತಾನೆ. ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:12-14.

 ಯುದ್ಧ ಮತ್ತು ಹಿಂಸಾಚಾರದಿಂದ ಆದ ನೋವು ಮತ್ತು ಹಾನಿಯನ್ನ ದೇವರು ತನ್ನ ಸರ್ಕಾರದಲ್ಲಿ ತೆಗೆದುಹಾಕ್ತಾನೆ.

  •   “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕಟನೆ 21:4.

 ದೇವರ ಸರ್ಕಾರ ಬಂದಾಗ ಭೂಮಿಯಲ್ಲಿ ತುಂಬ ಬದಲಾವಣೆಗಳಾಗುತ್ತೆ. ಅಲ್ಲಲ್ಲಿ “ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ” ನಾವು ಕೇಳಿಸ್ಕೊಳ್ತೀವಿ ಅಂತ ಬೈಬಲ್‌ ಮುಂಚೆನೇ ತಿಳಿಸಿತ್ತು. (ಮತ್ತಾಯ 24:6) ಈ ತರದ ಘಟನೆಗಳು ಮತ್ತು ಬೇರೆ ಘಟನೆಗಳು ನಾವು ಮಾನವ ಆಳ್ವಿಕೆಯ “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅಂತ ತೋರಿಸಿಕೊಡುತ್ತೆ.—2 ತಿಮೊತಿ 3:1.