ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

TheCrimsonMonkey/E+ via Getty Images

ಪರಿಸರ ಸಮಸ್ಯೆಗಳನ್ನ ದೇವರ ಸರ್ಕಾರ ಸರಿಮಾಡುತ್ತಾ?

ಪರಿಸರ ಸಮಸ್ಯೆಗಳನ್ನ ದೇವರ ಸರ್ಕಾರ ಸರಿಮಾಡುತ್ತಾ?

 ಹವಾಮಾನದಲ್ಲಿ ಆಗ್ತಿರೋ ಭಯಾನಕ ಬದಲಾವಣೆಗಳಿಂದ ಜನರಿಗೆ, ನಗರಗಳಿಗೆ, ಪರಿಸರ ವ್ಯವಸ್ಥೆಗೆ ತುಂಬ ತೊಂದರೆ ಆಗ್ತಿದೆ. ಅಷ್ಟೇ ಅಲ್ಲ ಇಡೀ ಲೋಕದಲ್ಲಿ ಚಂಡಮಾರುತಗಳ ಆರ್ಭಟದಿಂದ ಜನರು ಮನೆಗಳನ್ನ ಕಳ್ಕೊಂಡು ಬೀದಿಪಾಲಾಗ್ತಿದ್ದಾರೆ. ಸಾಗರಗಳಲ್ಲಿ ತಾಪಮಾನದ ಪ್ರಮಾಣ ಜಾಸ್ತಿ ಆಗ್ತಿರೋದ್ರಿಂದ ಸಾಗರಗಳು ಬೆಚ್ಚಗಾಗುತ್ತಿದೆ. ಇದರಿಂದ ಸಮುದ್ರದ ಜೀವಸಂಕುಲ ಅಳಿವಿನ ಅಂಚಿನಲ್ಲಿದೆ.—ಇಂಗರ್‌ ಆ್ಯಂಡರ್ಸನ್‌, ಅಂಡರ್‌-ಸೆಕ್ರೆಟರಿ-ಜನರಲ್‌ ಆಫ್‌ ದ ಯುನೈಟೆಡ್‌ ನೇಶನ್ಸ್‌ ಆ್ಯಂಡ್‌ ಎಕ್ಸಿಕ್ಯುಟಿವ್‌ ಡೈರಕ್ಟರ್‌ ಆಫ್‌ ದ ಯುಎನ್‌ ಎನ್ವಯರ್ಮೆಂಟ್‌ ಪ್ರೋಗ್ರಾಮ್‌, ಜುಲೈ 25, 2023.

 ಇಡೀ ಭೂಮಿಯನ್ನೇ ಹಾಳು ಮಾಡುತ್ತಿರೋ ಈ ಸಮಸ್ಯೆಗಳನ್ನ ಸರಿಮಾಡೋಕೆ ಎಲ್ಲಾ ಸರ್ಕಾರಗಳು ಒಟ್ಟಿಗೆ ಸೇರಿ ಬರುತ್ತಾ? ಈ ಸಮಸ್ಯೆಗಳಿಗೆ ಇವರು ಶಾಶ್ವತ ಪರಿಹಾರ ಕೊಡ್ತಾರಾ?

 ಭೂಮಿಯಲ್ಲಿರೋ ಪರಿಸರ ಸಮಸ್ಯೆಗಳಿಗೆ ಪರಿಹಾರ ಕೊಡೋ ಸಾಮರ್ಥ್ಯ ಮತ್ತು ಅದನ್ನ ಖಂಡಿತ ಸರಿ ಮಾಡೋ ಒಂದು ಸರ್ಕಾರ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ” ಮತ್ತು ಅದು ಇಡೀ ಭೂಮಿಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೆ ಅಂತಾನೂ ಬೈಬಲ್‌ ಹೇಳುತ್ತೆ. (ದಾನಿಯೇಲ 2:44) ಆ ಸರ್ಕಾರ ಆಳುವಾಗ ಜನರು ಬೇರೆಯವರಿಗೆ ಅಥವಾ ಭೂಮಿಗೆ “ಯಾವ ಹಾನಿನೂ ಮಾಡಲ್ಲ, ಯಾವುದನ್ನೂ ಹಾಳುಮಾಡಲ್ಲ.”—ಯೆಶಾಯ 11:9.