ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬರಗಾಲದಿಂದ ನೆಲ ಒಣಗಿ ಹೋಗಿ ಒಂದೇ ಒಂದು ಗಿಡ ಬದುಕುಳಿದಿದೆ.

ಸದಾ ಎಚ್ಚರವಾಗಿರಿ!

ಬರಗಾಲ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬರಗಾಲ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
  •   “ಚೀನಾದಲ್ಲಿ ಈ ವರ್ಷ ತೀವ್ರವಾದ ಸುಡುಬಿಸಿಲಿತ್ತು. ಈ ತರ ಬಿಸಿಲು ಬಂದಿದ್ದು, ಇದು ಮೂರನೇ ಸಲ.”—ದಿ ಗಾರ್ಡಿಯನ್‌, ಸೆಪ್ಟೆಂಬರ್‌ 7, 2022.

  •   “ಆಫ್ರಿಕಾದ ಗ್ರೇಟರ್‌ ಹಾರ್ನ್‌ನಲ್ಲಿ ನಾಲ್ಕು ವರ್ಷಗಳಿಂದ ಬರಗಾಲವಿತ್ತು. ಈಗ ಬರಗಾಲ ಐದನೇ ವರ್ಷಕ್ಕೆ ಕಾಲಿಡುತ್ತಿದೆ.”—ಯುಎನ್‌ ನ್ಯೂಸ್‌, ಆಗಸ್ಟ್‌ 26, 2022.

  •   ಯುರೋಪಿನ ಅರ್ಧಕ್ಕಿಂತ ಹೆಚ್ಚು ಭಾಗಗಳಲ್ಲಿ ಬರಗಾಲ ಬರುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ. ಕಳೆದ 500 ವರ್ಷಗಳಲ್ಲಿ ಬಂದ ಬರಗಾಲಕ್ಕಿಂತ ಇದು ತುಂಬ ಭೀಕರ ಬರಗಾಲವಾಗಲಿದೆ.”—ಬಿಬಿಸಿ ನ್ಯೂಸ್‌, ಆಗಸ್ಟ್‌ 23, 2022.

 ಕೆಲವು ವಿದ್ವಾಂಸರು ಈ ಬರಗಾಲ ಇನ್ನೂ ಮುಂದುವರಿಯುತ್ತೆ, ಹೋಗ್ತಾ ಹೋಗ್ತಾ ಇನ್ನೂ ಜಾಸ್ತಿಯಾಗುತ್ತೆ ಅಂತ ಹೇಳಿದ್ದಾರೆ. ಭವಿಷ್ಯದಲ್ಲಿ ಏನಾದರೂ ಒಳ್ಳೇದಾಗುತ್ತಾ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬರಗಾಲ ಮತ್ತು ಬೈಬಲ್‌ ಭವಿಷ್ಯವಾಣಿ

 ನಮ್ಮ ದಿನಗಳ ಬಗ್ಗೆ ಬೈಬಲ್‌ ಹೀಗೆ ಹೇಳಿತ್ತು:

  •   “ಒಂದಾದ ಮೇಲೆ ಒಂದು ಜಾಗದಲ್ಲಿ. . . ಆಹಾರದ ಕೊರತೆ ಇರುತ್ತೆ.”ಲೂಕ 21:11.

 ಬರಗಾಲದಿಂದ ಆಹಾರಕ್ಕೆ ಕೊರತೆ ಆಗುತ್ತೆ. ಆಹಾರದ ಕೊರತೆಯಿಂದ ತುಂಬ ಕಷ್ಟಗಳಾಗುತ್ತೆ, ತುಂಬ ಜನ ಸಾಯ್ತಾರೆ ಅಂತನೂ ಬೈಬಲ್‌ ಮುಂಚೆನೇ ಹೇಳಿತ್ತು.—ಪ್ರಕಟನೆ 6:6, 8.

ಬರಗಾಲ ಯಾಕೆ ಜಾಸ್ತಿಯಾಗ್ತಿದೆ?

 ಬರಗಾಲ ಈಗ ಯಾಕೆ ಜಾಸ್ತಿಯಾಗ್ತಿದೆ ಅನ್ನೋದಕ್ಕೆ ಬೈಬಲ್‌ ಕೆಲವು ಕಾರಣ ಕೊಡುತ್ತೆ. ಅದು ಹೇಳೋದು:

  •   “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.”ಯೆರೆಮೀಯ 10:23.

 ಇದರ ಅರ್ಥ ಮನುಷ್ಯರು ತಮಗೆ ತಾವೇ ‘ದಾರಿ ತೋರಿಸ್ಕೊಳ್ಳೋಕೆ’ ಆಗಲ್ಲ ಮತ್ತು ಆ ಅಧಿಕಾರನೂ ಇಲ್ಲ. ಅವರು ಮಾಡೋ ತಪ್ಪು ನಿರ್ಧಾರಗಳಿಂದ ನೀರಿನ ಕೊರತೆ ಮತ್ತು ಬರಗಾಲ ಜಾಸ್ತಿಯಾಗ್ತಿದೆ.

  •   ಭೂಮಿಯಲ್ಲಿ ಬರಗಾಲ ಮತ್ತು ತಾಪಮಾನ ಜಾಸ್ತಿಯಾಗೋಕೆ ಮನುಷ್ಯರೇ ಕಾರಣ ಅಂತ ತುಂಬ ವಿಜ್ಞಾನಿಗಳು ಹೇಳ್ತಾರೆ.

  •   ಹೀಗೆ ಅರಣ್ಯ ನಾಶ, ಪರಿಸರ ಮಾಲಿನ್ಯ ಮತ್ತು ಪ್ರಕೃತಿಯ ದುರುಪಯೋಗ ಮಾಡ್ತಿರೋದ್ರಿಂದ ನೀರಿನ ಕೊರತೆ ಆಗ್ತಿದೆ.

 ಆದರೆ ಬೈಬಲ್‌ ನಮಗೆ ನಿರೀಕ್ಷೆ ಕೊಡುತ್ತೆ.

ಭವಿಷ್ಯದಲ್ಲಿ ಏನಾದರೂ ಒಳ್ಳೇದಾಗುತ್ತಾ?

 ದೇವರು ನೀರಿನ ಕೊರತೆಯನ್ನ ಸರಿಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ. ಅದು ಹೇಗೆ?

  1.  1. ದೇವರು “ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶ” ಮಾಡ್ತಾನೆ. (ಪ್ರಕಟನೆ 11:18) ಆತನು ನೀರಿನ ಕೊರತೆಗೆ ಕಾರಣರಾಗಿರೋ ದುಷ್ಟರನ್ನ ಮತ್ತು ದುರಾಸೆಯಿಂದ ಪರಿಸರವನ್ನ ಹಾಳು ಮಾಡೋ ಜನರನ್ನ ನಾಶ ಮಾಡ್ತಾನೆ.—2 ತಿಮೊತಿ 3:1, 2.

  2.  2. “ಬೆಂಗಾಡು ಗಿಡಗಳಿರೋ ಕೆರೆ ತರ ಆಗುತ್ತೆ.” (ಯೆಶಾಯ 35:1, 6, 7) ದೇವರು ಬರಗಾಲದಿಂದ ಭೂಮಿಗೆ ಆದ ಹಾನಿಯನ್ನ ಸರಿಮಾಡಿ ಸುಂದರ ಪರದೈಸ್‌ ಮಾಡ್ತಾನೆ.

  3.  3. “ನೀನು ಭೂಮಿಯ ಆರೈಕೆ ಮಾಡ್ತೀಯ, ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ” (ಕೀರ್ತನೆ 65:9) ದೇವರ ಆಶೀರ್ವಾದದಿಂದ ಭೂಮಿಯಲ್ಲಿರೋ ಎಲ್ಲರಿಗೂ ಒಳ್ಳೆ ಆಹಾರ ಮತ್ತು ನೀರು ಸಮೃದ್ಧವಾಗಿ ಸಿಗುತ್ತೆ.