ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ!

ಲೋಕವ್ಯಾಪಕವಾಗಿ ಗಗನಕ್ಕೇರುತ್ತಿರುವ ಬೆಲೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಲೋಕವ್ಯಾಪಕವಾಗಿ ಗಗನಕ್ಕೇರುತ್ತಿರುವ ಬೆಲೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 “ಲೋಕದ ಆರ್ಥಿಕ ಪರಿಸ್ಥಿತಿ ಅಪಾಯದಲ್ಲಿದೆ. ಒಂದುಕಡೆ, ದೈನಂದಿನ ವಸ್ತುಗಳ ಮತ್ತು ನಾವು ಪಡೆಯುವ ಸೇವೆಗಳ ಬೆಲೆ ಇದ್ದಕ್ಕಿದ್ದಂತೆ ದುಬಾರಿ ಆಗ್ತಿದೆ. ಇನ್ನೊಂದು ಕಡೆ, ಇವುಗಳನ್ನು ಪಡ್ಕೊಳ್ಳೋಕೆ ಜನರ ಕೈಲಿ ಸಾಕಷ್ಟು ದುಡ್ಡು ಇಲ್ಲದಂತೆ ಆಗಿದೆ” ಅಂತ ಜೂನ್‌ 2022ರ ಒಂದು ವರದಿಯಲ್ಲಿ ವರ್ಲ್ಡ್‌ ಬ್ಯಾಂಕ್‌ ಗ್ರೂಪ್‌ನ ಅಧ್ಯಕ್ಷ ಹೇಳಿದ್ರು.

 “ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಆಗ್ತಿರೋದ್ರಿಂದ ಬಡ ರಾಷ್ಟ್ರಗಳ ಜನರಿಗೆ ತುಂಬಾ ಕಷ್ಟ ಆಗ್ತಿದೆ” ಅಂತ ಅಂತರರಾಷ್ಟ್ರೀಯ ಹಣಕಾಸು ನಿಧಿ ಗಮನಿಸಿದೆ.

 ಇಂಥಾ ಆರ್ಥಿಕ ಬಿಕ್ಕಟ್ಟಿಗೆ ಏನು ಕಾರಣ, ಅದನ್ನ ನಾವು ಹೇಗೆ ನಿಭಾಯಿಸಬಹುದು ಮತ್ತು ಇದಕ್ಕೇನಾದ್ರೂ ಶಾಶ್ವತ ಪರಿಹಾರ ಇದೆಯಾ ಅಂತ ತಿಳ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ.

ಬೆಲೆಯೇರಿಕೆ ‘ಕೊನೇ ದಿನಗಳ’ ಸೂಚನೆ

  •   ನಾವು ಜೀವನ ಮಾಡ್ತಿರೋ ಸಮಯವನ್ನು ಬೈಬಲ್‌ ‘ಕೊನೇ ದಿನಗಳು’ ಅಂತ ಕರೆಯುತ್ತೆ.—2 ತಿಮೊತಿ 3:1.

  •   ಈ ಸಮಯದಲ್ಲಿ “ಭಯಾನಕ ದೃಶ್ಯಗಳು” ಅಥವಾ ಭಯಾನಕ ಘಟನೆಗಳು ನಡೆಯುತ್ತೆ ಅಂತ ಯೇಸು ಹೇಳಿದನು. (ಲೂಕ 21:11) ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿರುವ ಬೆಲೆ ಏರಿಕೆಯನ್ನು ನೋಡಿದಾಗ ಜನರಿಗೆ ಭಯ ಆಗುತ್ತೆ. ‘ಮುಂದೆ ಏನಾಗುತ್ತೆ, ನಮ್ಮ ಕುಟುಂಬಕ್ಕೆ ಬೇಕಾಗಿರೋದನ್ನೆಲ್ಲಾ ನಾವು ಕೊಡೋಕಾಗುತ್ತಾ’ ಅನ್ನೋ ಚಿಂತೆ ಅವರನ್ನ ಕಾಡ್ತಿದೆ.

  •   ಕೊನೇ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಆಗುತ್ತೆ ಅಂತ ಪ್ರಕಟನೆ ಪುಸ್ತಕ ಮೊದಲೇ ತಿಳಿಸಿದೆ. ಅದು ಹೇಳೋದು “ಒಂದು ಧ್ವನಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ: ‘ಒಂದು ದಿನಾರಿಗೆ [ಒಂದು ದಿನದ ಕೂಲಿಗೆ, ಪಾದಟಿಪ್ಪಣಿ] ಒಂದು ಕಿಲೋ ಗೋದಿ. ಒಂದು ದಿನಾರಿಗೆ ಮೂರು ಕಿಲೋ ಬಾರ್ಲಿ.’”—ಪ್ರಕಟನೆ 6:6.

 ‘ಕೊನೇ ದಿನಗಳು’ ಮತ್ತು ಪ್ರಕಟನೆ ಪುಸ್ತಕದಲ್ಲಿರುವ ಭವಿಷ್ಯವಾಣಿಗಳ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಕೆ 1914ರಿಂದ ಲೋಕದಲ್ಲಾದ ಬದಲಾವಣೆ ಅನ್ನೋ ವಿಡಿಯೋ ನೋಡಿ ಮತ್ತು ನವೆಂಬರ್‌ 2019ರ ಕೂಟದ ಕೈಪಿಡಿಯಲ್ಲಿರುವ “ನಾಲ್ಕು ಕುದುರೆ ಸವಾರರ ಸವಾರಿ” ಅನ್ನೋ ಲೇಖನ ಓದಿ.

ಆರ್ಥಿಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ

  •   “ಅವರು ಮನೆ ಕಟ್ಕೊಂಡು ವಾಸ ಮಾಡ್ತಾರೆ, ದ್ರಾಕ್ಷಿತೋಟ ಮಾಡಿ ಅದ್ರ ಫಲ ತಿಂತಾರೆ. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ, ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ.”—ಯೆಶಾಯ 65:21, 22.

  •   “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ.”—ಕೀರ್ತನೆ 72:16.

  •   “ಯೆಹೋವ ಹೀಗಂತಾನೆ: ‘ಜನರ ಮೇಲೆ ದಬ್ಬಾಳಿಕೆ ಆಗ್ತಿದೆ, ಬಡವರು ನರಳ್ತಿದ್ದಾರೆ, ನಾನು ಈಗ ಎದ್ದೇಳ್ತೀನಿ.’”—ಕೀರ್ತನೆ 12:5. a

 ಬೆಲೆಯೇರಿಕೆ ಅಥವಾ ಆರ್ಥಿಕ ಬಿಕ್ಕಟ್ಟು ಅನ್ನೋ ಸಮಸ್ಯೆಯನ್ನು ದೇವರು ಮುಂದೆ ಶಾಶ್ವತವಾಗಿ ಅಳಿಸಿ ಹಾಕ್ತಾನೆ. ಬರೀ ಒಂದು ದೇಶದಲ್ಲಿ ಅಲ್ಲ, ಲೋಕದ ಎಲ್ಲಾ ಕಡೆ ಈ ಸಮಸ್ಯೆಯನ್ನ ಇಲ್ಲದಂತೆ ಮಾಡ್ತಾನೆ. ಇದನ್ನು ಹೇಗೆ ಮಾಡ್ತಾನೆ ಅಂತ ತಿಳ್ಕೊಳ್ಳೋಕೆ “ಬಡತನವಿಲ್ಲದ ಲೋಕವು ಸಮೀಪವಿದೆ” ಅನ್ನೋ ಲೇಖನ ನೋಡಿ.

 ಆದ್ರೆ ಈಗ ಬೆಲೆಗಳು ಗಗನಕ್ಕೇರಿತ್ತಿದೆ, ಅದಕ್ಕೆ ಏನ್‌ ಮಾಡೋದು ಅನ್ನೋ ಪ್ರಶ್ನೆ ನಿಮಗೆ ಬರಬಹುದು. ಅದಕ್ಕೂ ಬೈಬಲ್‌ ಉತ್ರ ಕೊಡುತ್ತೆ. ಹೇಗೆ ಅಂತೀರಾ? ದುಡ್ಡನ್ನ ಹಿತಮಿತವಾಗಿ ಹೇಗೆ ಖರ್ಚು ಮಾಡೋದು ಅನ್ನೋದಕ್ಕೆ ಪ್ರಾಯೋಗಿಕ ಸಲಹೆಗಳನ್ನ ಬೈಬಲ್‌ ಕೊಡುತ್ತೆ. (ಜ್ಞಾನೋಕ್ತಿ 23:4, 5; ಪ್ರಸಂಗಿ 7:12) ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “ಜೀವನರೀತಿಯನ್ನು ಕಾಪಾಡಿಕೊಳ್ಳಿ” ಮತ್ತು “ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಅನ್ನೋ ಲೇಖನ ನೋಡಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.