ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Ismail Sen/Anadolu Agency via Getty Images

ಸದಾ ಎಚ್ಚರವಾಗಿರಿ!

ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಭಾರಿ ಭೂಕಂಪಗಳು—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಭಾರಿ ಭೂಕಂಪಗಳು—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಫೆಬ್ರವರಿ 6, 2023 ಸೋಮವಾರದಂದು, ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಭಾರಿ ಭೂಕಂಪಗಳು ಆದ್ವು.

  •   “ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಸೋಮವಾರ ಭಾರಿ ಭೂಕಂಪ ಆಯ್ತು. ಈ ಭೂಕಂಪದಲ್ಲಿ 3,700ಕ್ಕೂ ಹೆಚ್ಚು ಜನ ತೀರಿಹೋಗಿದ್ದಾರೆ. ಅಲ್ಲಿ ಮೈಕೊರೆಯೋ ಭಾರಿ ಚಳಿ ಇರೋದ್ರಿಂದ ಗಾಯ ಆಗಿರೋ ಜನರಿಗೆ ಮತ್ತು ಮನೆ ಕಳೆದುಕೊಂಡಿರೋ ಜನರಿಗೆ ಬೇರೆ ಕಡೆ ಹೋಗೋಕೂ ತುಂಬ ತೊಂದರೆ ಆಗ್ತಿದೆ. ಅಷ್ಟೇ ಅಲ್ಲ, ತಪ್ಪಿ ಹೋದವರನ್ನ ಹುಡುಕೋದಕ್ಕೂ ಕಷ್ಟ ಆಗ್ತಿದೆ.”—ರೂಟರ್ಸ್‌ ಪತ್ರಿಕೆ, ಫೆಬ್ರವರಿ 6, 2023.

 ಇಂತಹ ದುರಂತಗಳ ಬಗ್ಗೆ ಓದಿದಾಗ ಕೇಳಿದಾಗ ನಮ್ಮ ಮನಸ್ಸಿಗೆ ತುಂಬ ಬೇಜಾರಾಗುತ್ತೆ. ಇಂಥ ಸಮಯದಲ್ಲಿ ನಮಗೆ ನೆಮ್ಮದಿ ಕೇವಲ “ಸಾಂತ್ವನ ಕೊಡೋ ದೇವರು” ಆಗಿರೋ ಯೆಹೋವನಿಂದ ಮಾತ್ರ ಸಿಗುತ್ತೆ. (2 ಕೊರಿಂಥ 1:3) ಆತನು ಕೊಟ್ಟಿರೋ “ಪವಿತ್ರ ಬರಹಗಳು (ಅಂದ್ರೆ ಬೈಬಲ್‌) ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.

 ಬೈಬಲಲ್ಲಿ ಏನಿದೆ ಅಂದ್ರೆ:

  •   ಇಂತಹ ಭೂಕಂಪಗಳು ಆಗುತ್ತೆ ಅನ್ನೋ ಭವಿಷ್ಯವಾಣಿ ಇದೆ.

  •   ಇಂತಹ ಸಮಯದಲ್ಲಿ ಸಾಂತ್ವನ ಮತ್ತು ನೆಮ್ಮದಿ ಹೇಗೆ ಸಿಗುತ್ತೆ ಅಂತ ಇದೆ.

  •   ಎಲ್ಲ ಕಷ್ಟತೊಂದರೆಗಳನ್ನ ದೇವರು ಹೇಗೆ ತೆಗೆದುಹಾಕ್ತಾನೆ ಅಂತ ಇದೆ.

 ಈ ವಿಷಯದ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ಜಾಸ್ತಿ ತಿಳಿದುಕೊಳ್ಳೋಕೆ ಕೆಳಗಿರೋ ಲೇಖನಗಳನ್ನ ಓದಿ:

a ಯೆಹೋವ ಅನ್ನೋದು ದೇವರ ಹೆಸರು.— ಕೀರ್ತನೆ 83:18.