ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Sean Gladwell/Moment via Getty Images

ಸದಾ ಎಚ್ಚರವಾಗಿರಿ!

ವಿಶ್ವದ ಮಿಲಿಟರಿ ಖರ್ಚು ಗಗನಕ್ಕೇರಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ವಿಶ್ವದ ಮಿಲಿಟರಿ ಖರ್ಚು ಗಗನಕ್ಕೇರಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 2022ರಲ್ಲಿ ಇಡೀ ಲೋಕದಲ್ಲಿರೋ ಮಿಲಿಟರಿ ಒಟ್ಟು 2.24 ಲಕ್ಷ ಕೋಟಿ ಡಾಲರ್‌ ಖರ್ಚು ಮಾಡಿತು. ಅದಕ್ಕೆ ಮುಖ್ಯ ಕಾರಣ ರಷ್ಯಾ-ಯುಕ್ರೇನ್‌ ಯುದ್ಧ. ಏಪ್ರಿಲ್‌ 2023ರಲ್ಲಿ ಸ್ಟಾಕ್‌​ಹೋಮ್‌ ಇಂಟರ್‌​ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌​ಸ್ಟಿಟ್ಯೂಟ್‌ (ಸಿಪ್ರಿ) ವರದಿ ಪ್ರಕಾರ 2022ರಲ್ಲಿ:

  •   ಯುರೋಪಿಯನ್‌ ಮಿಲಿಟರಿಯು ಯುದ್ಧಕ್ಕಾಗಿ “ಸುಮಾರು 13 ಪ್ರತಿಶತದಷ್ಟು ಹಣವನ್ನ ಖರ್ಚು ಮಾಡಿದೆ. ಶೀತಲ ಸಮರ ಆದಮೇಲೆ ಇದೇ ಮೊದಲ ಬಾರಿಗೆ ಇಷ್ಟು ಖರ್ಚು ಮಾಡಿರೋದು.”

  •   “ರಷ್ಯಾದ. . .ಮಿಲಿಟರಿ ಖರ್ಚು ಶೇಕಡಾ 9.2ರಷ್ಟು ಜಾಸ್ತಿಯಾಗಿದೆ. ಇದರಿಂದ ರಷ್ಯಾ ಯುದ್ಧ ಬೆಂಬಲಿಸೋದ್ರಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ.”

  •   ಅಮೆರಿಕ “ಸುಮಾರು 39 ಪ್ರತಿಶತದಷ್ಟು ಹಣವನ್ನ ಮಿಲಿಟರಿಗಾಗಿ ಖರ್ಚು ಮಾಡಿದೆ.” ಹೀಗೆ ವಿಶ್ವದಲ್ಲೇ ಹೆಚ್ಚು ಹಣ ಖರ್ಚು ಮಾಡ್ತಾ ಅಮೆರಿಕ ಮೊದಲನೇ ಸ್ಥಾನದಲ್ಲಿದೆ.

 “ವಿಶ್ವದಲ್ಲಿ ಎಲ್ಲಾ ಕಡೆ ಮಿಲಿಟರಿಗಾಗಿ ತುಂಬ ದುಡ್ಡನ್ನ ಸುರೀತಿದ್ದಾರೆ. ಇದರಿಂದ ನಮಗೆ ಯಾವುದೇ ಸುರಕ್ಷತೆ ಇಲ್ಲ” ಅಂತ ಸಿಪ್ರಿಯ ಸಹ ಲೇಖಕರಾದ ಡಾ. ನಾನ್‌ ಟಿಯಾನ್‌ ಹೇಳ್ತಾರೆ.

 ಬೈಬಲ್‌ ಎಷ್ಟೋ ವರ್ಷಗಳ ಹಿಂದೆನೇ ಇವತ್ತಿನ ಸರ್ಕಾರಗಳಿಗೆ ತುಂಬ ಶಕ್ತಿಯಿದ್ರೂ ಅವರ ಮಧ್ಯೆ ಒಗ್ಗಟ್ಟಿರಲ್ಲ ಅಂತ ಹೇಳಿತ್ತು. ಅಷ್ಟೇ ಅಲ್ಲ ನಿಜವಾದ ಶಾಂತಿ ಸಿಗಬೇಕಂದ್ರೆ ಏನು ಮಾಡಬೇಕು ಅಂತನೂ ತಿಳಿಸಿತ್ತು.

ಯುದ್ಧಗಳಾಗುತ್ತೆ ಅನ್ನೋ ಭವಿಷ್ಯವಾಣಿ

 ಈ ಭವಿಷ್ಯವಾಣಿ ಬಗ್ಗೆ ಹೆಚ್ಚನ್ನ ತಿಳಿದುಕೊಳ್ಳಲು ನೆರವೇರಿದ ಭವಿಷ್ಯವಾಣಿ—ದಾನಿಯೇಲ 11ನೇ ಅಧ್ಯಾಯ ಅನ್ನೋ ವಿಡಿಯೋ ನೋಡಿ.

ನಿಜವಾದ ಶಾಂತಿ ಹೇಗೆ ಸಿಗುತ್ತೆ?

  •   ದೇವರು ಮಾನವ ಸರ್ಕಾರಗಳನ್ನ ನಾಶಮಾಡಿ “ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ. ಅದು ಬೇರೆ ಜನ್ರ ಕೈಗೂ ಹೋಗಲ್ಲ. ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ. ಆ ಆಡಳಿತ ಸದಾಕಾಲ ಇರುತ್ತೆ” ಅಂತ ಬೈಬಲ್‌ ಹೇಳುತ್ತೆ.—ದಾನಿಯೇಲ 2:44.

  •   ಮನುಷ್ಯರಿಂದ ತರೋಕೆ ಆಗದಿರೋ ನಿಜವಾದ ಶಾಂತಿಯನ್ನ ಯೆಹೋವ a ತರ್ತಾನೆ. ಹೇಗೆ? ಆತನ ಸರ್ಕಾರ ಭೂಮಿಯಲ್ಲಿರೋ ಯುದ್ಧೋಪಕರಣಗಳನ್ನ ಮತ್ತು ಹಿಂಸೆಯನ್ನ ತೆಗೆದು ಹಾಕುತ್ತೆ.—ಕೀರ್ತನೆ 46:8, 9.

 ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ ಅಂತ ತಿಳ್ಕೊಳ್ಳೋಕೆ “ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ” ಅನ್ನೋ ಲೇಖನ ಓದಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.