ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Chris McGrath/Getty Images

ಯುದ್ಧಗಳಿಗೆ ಕೊನೆ ದೇವರ ಸರ್ಕಾರ ತರುತ್ತಾ?

ಯುದ್ಧಗಳಿಗೆ ಕೊನೆ ದೇವರ ಸರ್ಕಾರ ತರುತ್ತಾ?

 ಲೋಕದಲ್ಲಿ ಎಲ್ಲಾ ಕಡೆ ಯುದ್ಧಗಳಿಂದ ತುಂಬ ನಾಶ-ನಷ್ಟ ಆಗ್ತಿದೆ. ಜನ ತುಂಬ ನೋವಿನಲ್ಲಿ ಇದ್ದಾರೆ, ಕಷ್ಟ ಅನುಭವಿಸ್ತಿದ್ದಾರೆ. ಇದರ ಬಗ್ಗೆ ಕೆಲವು ವರದಿಗಳನ್ನ ನೋಡೋಣ:

  •    1994ರಿಂದ ಹಿಡಿದು ಇವತ್ತಿನ ತನಕ ನಡೆದಿರೋ ಯುದ್ಧಗಳಲ್ಲಿ ಹೋದ ವರ್ಷನೇ ತುಂಬ ಜನ ತಮ್ಮ ಜೀವ ಕಳ್ಕೊಂಡ್ರು. ಅದರಲ್ಲೂ ಇಥಿಯೋಪಿಯ ಮತ್ತು ಯುಕ್ರೇನಿನಲ್ಲಿ ನಡೆದ ಯುದ್ಧದಲ್ಲಿ ತುಂಬ ಜನ ತೀರಿ ಹೋದ್ರು.—ಪೀಸ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಓಸ್ಲೋ, ಜೂನ್‌ 7, 2023.

  •    “2022ರಲ್ಲಿ ಯುಕ್ರೇನಿನಲ್ಲಿ ನಡೆದ ಯುದ್ಧ ತುಂಬ ಭೀಕರವಾಗಿತ್ತು. ಆಚೆ ವರ್ಷಕ್ಕಿಂತ ಹೋದ ವರ್ಷ ಇಡೀ ಲೋಕದಲ್ಲಿ 27%ಕ್ಕಿಂತ ಜಾಸ್ತಿ ರಾಜಕೀಯ ಹಿಂಸೆ ನಡೀತು. ಇದ್ರಿಂದ 170 ಕೋಟಿ ಜನ್ರಿಗೆ ತುಂಬ ಕಷ್ಟ ಆಯ್ತು.”—ದ ಆರ್ಮಡ್‌ ಕಾನ್ಫ್ಲಿಕ್ಟ್‌ ಲೊಕೇಶನ್‌ ಆಂಡ್‌ ಇವೆಂಟ್‌ ಡೇಟಾ ಪ್ರಾಜೆಕ್ಟ್‌ (ಎಸಿಎಲ್‌ಈಡಿ), ಫೆಬ್ರವರಿ 8, 2023.

 ಆದ್ರೆ ಬೈಬಲ್‌ ನಮಗೆ ನಿರೀಕ್ಷೆ ಕೊಡುತ್ತೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ” ಅಂತ ಬೈಬಲ್‌ ಹೇಳುತ್ತೆ. (ದಾನಿಯೇಲ 2:44) ದೇವರ ಸರ್ಕಾರ ಅಥವಾ ಆಳ್ವಿಕೆಯಲ್ಲಿ “ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.”—ಕೀರ್ತನೆ 46:9.