ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Photo by Zhai Yujia/China News Service/VCG via Getty Images

ಸದಾ ಎಚ್ಚರವಾಗಿರಿ! 

ವಿನಾಶಕಾರಿ ಪ್ರಳಯಗಳು—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ವಿನಾಶಕಾರಿ ಪ್ರಳಯಗಳು—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಲೋಕದ ಎಷ್ಟೋ ಕಡೆ ತುಂಬ ಜನರು ವಿನಾಶಕಾರಿ ಪ್ರಳಯಗಳಿಂದ ಕಷ್ಟಪಡ್ತಿದ್ದಾರೆ. ಈ ರಿಪೋರ್ಟ್‌ಗಳನ್ನು ನೋಡಿ:

  •   “ಚೀನಾದ ರಾಜಧಾನಿಯಲ್ಲಿ ಕೆಲವು ದಿನಗಳ ಹಿಂದೆ ಭಾರಿ ಮಳೆ ಸುರೀತು. 140 ವರ್ಷಗಳಲ್ಲಿ ಈ ತರ ಮಳೆ ಯಾವತ್ತೂ ಬಂದಿರಲಿಲ್ಲ. ಶನಿವಾರದಿಂದ ಬುಧವಾರದ ಒಳಗೆ 744.8 ಮಿ.ಮೀ. (29.3 ಇಂಚು) ಮಳೆ ಸುರಿದಿದೆ.”—AP ನ್ಯೂಸ್‌, ಆಗಸ್ಟ್‌ 2, 2023.

  •   “ಜಪಾನಿನ ದಕ್ಷಿಣ ಭಾಗದಲ್ಲಿ ಖಾನುನ್‌ ತುಫಾನು ಶುರುವಾದ ಎರಡನೇ ದಿನವಾದ ಗುರುವಾರದಂದು ಧಾರಾಕಾರ ಮಳೆ ಮತ್ತು ಬಿರುಗಾಳಿ ಬಂತು. ಇದಕ್ಕೆ ಇಬ್ಬರು ಬಲಿಯಾದ್ರು. . . . ಮಧ್ಯ ತೈವಾನ್‌ನ ಪರ್ವತ ಪ್ರದೇಶದಲ್ಲಿ 0.6 ಮೀ (2 ಅಡಿ) ತನಕ ಚಂಡಮಾರುತದಿಂದ ಮಳೆ ಆಗೋ ಸಾಧ್ಯತೆ ಇದೆ.”—ಡೋಯ್ಚು ವೆಲ್ಲಾ, ಆಗಸ್ಟ್‌ 3, 2023.

  •   ಕೆನಡಾದ ಅಟ್ಲಾಂಟಿಕ್‌ ಪ್ರದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಈ ತರ ಮಳೆ ಬಂದೇ ಇರಲಿಲ್ಲ. ಈ ಮಳೆಯಿಂದ ನೋವಾ ಸ್ಕಾಟಿಯಾದಲ್ಲಿ ಪ್ರಳಯ ಆಯ್ತು.—BBC ನ್ಯೂಸ್‌, ಜುಲೈ 24, 2023.

 ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

‘ಕೊನೇ ದಿನಗಳ’ ಸೂಚನೆ

 ನಾವು ಇವತ್ತು ಜೀವಿಸೋ ದಿನಗಳನ್ನ ಬೈಬಲ್‌ ‘ಕೊನೇ ದಿನಗಳು’ ಅಂತ ಹೇಳುತ್ತೆ. (2 ತಿಮೊತಿ 3:1) “ಭಯಾನಕ ದೃಶ್ಯಗಳು” ಆಗುತ್ತೆ ಅಂತ ಯೇಸು ಮುಂಚೆನೇ ಹೇಳಿದನು. (ಲೂಕ 21:11) ಹವಮಾನದಲ್ಲಾಗೋ ಏರುಪೇರಿಂದ ನಾವು ಕನಸುಮನಸಲ್ಲೂ ನೆನಸದೆ ಇರೋ ಘಟನೆಗಳಾಗ್ತಾ ಇದೆ. ಈಗ ಹಿಂದೆಂದಿಗಿಂತಲೂ ಜಾಸ್ತಿ ಪ್ರಕೃತಿ ವಿಕೋಪಗಳು ಆಗ್ತಿವೆ.

ನಿರೀಕ್ಷೆಗೆ ಕಾರಣ

 ನಮ್ಮ ಕಣ್ಮುಂದೆ ಆಗ್ತಿರೋ ಭಯಾನಕ ದೃಶ್ಯಗಳೇ ಮುಂದೆ ನಮಗೆ ಒಳ್ಳೇದಾಗುತ್ತೆ ಅನ್ನೋ ನಿರೀಕ್ಷೆ ಕೊಡುತ್ತೆ. ಅದು ಹೇಗೆ? ಯೇಸು “ಈ ಎಲ್ಲ ವಿಷ್ಯ ನಡಿಯೋದನ್ನ ನೋಡಿದಾಗ ದೇವರ ಆಳ್ವಿಕೆ ತುಂಬ ಹತ್ರ ಇದೆ ಅಂತ ತಿಳ್ಕೊಳ್ಳಿ” ಅಂದನು.—ಲೂಕ 21:31; ಮತ್ತಾಯ 24:3.

 ಈಗ ನಡೀತಿರೋ ಘಟನೆಗಳನ್ನ ನೋಡುವಾಗ ದೇವರ ಆಳ್ವಿಕೆ ತುಂಬ ಹತ್ತಿರದಲ್ಲಿದೆ ಅಂತ ಗೊತ್ತಾಗುತ್ತೆ. ಜಲಚಕ್ರದಲ್ಲಾಗಿರೋ ಬದಲಾವಣೆ, ಪ್ರಕೃತಿಯಲ್ಲಿ ಆಗ್ತಿರೋ ಬದಲಾವಣೆಗಳೆಲ್ಲ ಮುಂದೆ ಸರಿಹೋಗುತ್ತೆ.—ಯೋಬ 36:27, 28; ಕೀರ್ತನೆ 107:29.

 ಈ ಭೂಮಿಯನ್ನ ದೇವರ ಸರ್ಕಾರ ಹೇಗೆ ಸರಿಮಾಡುತ್ತೆ ಅಂತ ತಿಳ್ಕೊಳೋಕೆ “ಈ ಭೂಮಿಯನ್ನು ಸಂರಕ್ಷಿಸುವುದು ಯಾರು?” ಅನ್ನೋ ಲೇಖನ ನೋಡಿ.