ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

fcafotodigital/E+ via Getty Images

ವೀಗನ್‌ ಜೀವನಶೈಲಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ವೀಗನ್‌ ಜೀವನಶೈಲಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ವೀಗನ್‌ ಜೀವನಶೈಲಿಯನ್ನ ಇವತ್ತು ತುಂಬ ಜನ ಇಷ್ಟಪಡ್ತಿದ್ದಾರೆ.

  •   ವೀಗನ್‌ ಜೀವನಶೈಲಿಯನ್ನ ಪಾಲಿಸುವವರು ಆಹಾರಕ್ಕಾಗಿ, ಬಟ್ಟೆಗಾಗಿ ಮತ್ತು ಇನ್ಯಾವುದೇ ಕಾರಣಕ್ಕಾಗಿ ಪ್ರಾಣಿಗಳನ್ನ ಹಿಂಸಿಸಲ್ಲ ಮತ್ತು ಅವುಗಳನ್ನ ಬಳಸೋಕೂ ಇಷ್ಟಪಡಲ್ಲ.—ದಿ ವೀಗನ್‌ ಸೊಸೈಟಿ.

 ಈ ಜೀವನಶೈಲಿಯನ್ನ ಪಾಲಿಸುವವರು ಪ್ರಾಣಿಗಳನ್ನ ಇಷ್ಟಪಡೋದ್ರಿಂದ ಮಾತ್ರ ಅಲ್ಲ ಪರಿಸರ ಕಾಪಾಡೋಕೆ, ಆರೋಗ್ಯ ಕಾಪಾಡೋಕೆ ಮತ್ತು ತಮ್ಮ ಧರ್ಮಕ್ಕೋಸ್ಕರನೂ ಇದನ್ನ ಪಾಲಿಸ್ತಾರೆ.

  •   ವೀಗನ್‌ ಒಂದು ಡಯಟ್‌ ಅಲ್ಲ, ಅದೊಂದು ಜೀವನಶೈಲಿ. ಯಾಕಂದ್ರೆ ಇದ್ರಲ್ಲಿ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆನೂ ಸೇರಿದೆ. ಈ ತರ ಜೀವನಶೈಲಿ ನಡೆಸಿದ್ರೆ ಮಾತ್ರ ಮುಂದೆ ಭೂಮಿ ಚೆನ್ನಾಗಿರುತ್ತೆ ಅಂತ ಇದನ್ನ ಪಾಲಿಸುವವರು ನಂಬ್ತಾರೆ.—ಬ್ರಿಟಾನಿಕಾ ಅಕಾಡೆಮಿಕ್‌.

 ಆದರೆ ಈ ವೀಗನ್‌ ಜೀವನಶೈಲಿಯಿಂದ ಭೂಮಿಯಲ್ಲಿರೋ ಎಲ್ಲ ಸಮಸ್ಯೆಗಳು ಸರಿಯಾಗುತ್ತಾ? ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮನುಷ್ಯರನ್ನ, ಪ್ರಾಣಿಗಳನ್ನ ದೇವರು ಹೇಗೆ ನೋಡ್ತಾನೆ?

 ಸೃಷ್ಟಿಕರ್ತನಾದ ಯೆಹೋವ ದೇವರು a ಮನುಷ್ಯರನ್ನ ಪ್ರಾಣಿಗಳಿಗಿಂತ ವಿಶೇಷವಾಗಿ ಸೃಷ್ಟಿ ಮಾಡಿದ್ದಾನೆ. ಮನುಷ್ಯರಿಗೆ ಪ್ರಾಣಿಗಳ ಮೇಲೆ ಅಧಿಕಾರ ಕೊಟ್ಟಿದ್ದಾನೆ. (ಆದಿಕಾಂಡ 1:27, 28) ಅಷ್ಟೇ ಅಲ್ಲ ಹೋಗ್ತಾ ಹೋಗ್ತಾ ಪ್ರಾಣಿಗಳನ್ನ ತಿನ್ನಬಹುದು ಅಂತನೂ ಆತನು ಹೇಳಿದನು. (ಆದಿಕಾಂಡ 9:3) ಆದ್ರೆ ಪ್ರಾಣಿಗಳನ್ನ ಕ್ರೂರವಾಗಿ ಹಿಂಸಿಸೋದನ್ನ ದೇವರು ಒಂಚೂರು ಇಷ್ಟಪಡಲ್ಲ.—ಜ್ಞಾನೋಕ್ತಿ 12:10.

 ಮಾಂಸ ತಿನ್ನಬೇಕಾ ಬೇಡ್ವಾ ಅನ್ನೋದು ಅವ್ರವ್ರಿಗೆ ಬಿಟ್ಟ ವಿಷಯ. b ಮಾಂಸ ತಿನ್ನುತ್ತೀವಾ ಇಲ್ವಾ ಅಂತ ನೋಡ್ಕೊಂಡು ನಾವು ಒಳ್ಳೇಯವರಾ ಕೆಟ್ಟವರಾ ಅಂತ ದೇವರು ತೀರ್ಮಾನ ಮಾಡಲ್ಲ. (1 ಕೊರಿಂಥ 8:8) ತಿನ್ನೋದ್ರ ಬಗ್ಗೆ ಒಬ್ಬ ವ್ಯಕ್ತಿ ಮಾಡೋ ತೀರ್ಮಾನಗಳನ್ನ ಗೌರವಿಸಬೇಕು. ಅದನ್ನ ಕೀಳಾಗಿ ನೋಡಬಾರದು.—ರೋಮನ್ನರಿಗೆ 14:3.

ಭವ್ಯ ಭವಿಷ್ಯಕ್ಕೆ ದಾರಿ

 ನಾವು ಯಾವ ತರ ಜೀವನಶೈಲಿ ನಡೆಸಿದ್ರೂ ಭೂಮಿಯಲ್ಲಿರೋ ಸಮಸ್ಯೆಗಳನ್ನ ಸರಿ ಮಾಡೋಕೆ ಆಗಲ್ಲ ಅಂತ ಬೈಬಲ್‌ ಹೇಳುತ್ತೆ. ಯಾಕಂದ್ರೆ ಈ ತರದ ಎಷ್ಟೋ ಸಮಸ್ಯೆಗಳಿಗೆ ರಾಜಕೀಯ, ಸಾಮಾಜಿಕ ಮತ್ತು ವಾಣಿಜ್ಯ ವ್ಯವಸ್ಥೆಗಳೇ ಕಾರಣ. ಇವುಗಳನ್ನ ಯಾರಿಂದಾನೂ ಸರಿ ಮಾಡೋಕೆ ಆಗಲ್ಲ. ಇದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ:

  •   “ಸೊಟ್ಟಗಿರೋದನ್ನ ನೆಟ್ಟಗೆ ಮಾಡೋಕಾಗಲ್ಲ.”—ಪ್ರಸಂಗಿ 1:15.

 ಎಲ್ಲ ಸಮಸ್ಯೆಗಳನ್ನ ನಮ್ಮ ಸೃಷ್ಟಿಕರ್ತ ಸರಿ ಮಾಡ್ತಾನೆ. ಆತನು ಅದನ್ನ ಹೇಗೆ ಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ.

  •   “ಆಗ ನಾನು ಹೊಸ ಆಕಾಶ, ಹೊಸ ಭೂಮಿಯನ್ನ ನೋಡ್ದೆ. ಯಾಕಂದ್ರೆ ಮುಂಚೆ ಇದ್ದ ಆಕಾಶ, ಭೂಮಿ ಇಲ್ಲದೆ ಹೋಗಿತ್ತು. ಸಮುದ್ರನೂ ಇರಲಿಲ್ಲ.”—ಪ್ರಕಟನೆ 21:1.

 ದೇವರು ಮಾನವ ಸರ್ಕಾರಗಳನ್ನ ಅಥವಾ ‘ಮುಂಚೆ ಇದ್ದ ಆಕಾಶವನ್ನ’ “ಹೊಸ ಆಕಾಶ” ಮಾಡ್ತಾನೆ. ಅದೇ ಆತನ ಸ್ವರ್ಗೀಯ ಸರ್ಕಾರ. ಆತನ ಸರ್ಕಾರ ಮುಂಚೆ ಇದ್ದ ‘ಭೂಮಿಯನ್ನ’ ತೆಗೆದುಹಾಕುತ್ತೆ. ಅಂದ್ರೆ ಕೆಟ್ಟವರನ್ನ ತೆಗೆದುಹಾಕುತ್ತೆ. ಆಮೇಲೆ “ಹೊಸ ಭೂಮಿ” ಮೇಲೆ ಅದು ಆಳ್ವಿಕೆ ಮಾಡುತ್ತೆ. ಅಲ್ಲಿ ದೇವರ ಮಾತನ್ನ ಕೇಳೋ ಜನ್ರು ಇರ್ತಾರೆ.

 ದೇವರ ಆಳ್ವಿಕೆ ಕೆಳಗೆ ಮಾತ್ರ ಮನುಷ್ಯರು ಪ್ರಾಣಿಗಳ ಜೊತೆ ನೆಮ್ಮದಿಯಾಗಿ ಇರ್ತಾರೆ. ಆಗ ಪರಿಸರನೂ ಚೆನ್ನಾಗಿರುತ್ತೆ.—ಯೆಶಾಯ 11:6-9.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

b “ರಕ್ತದಿಂದ ದೂರ ಇರಿ” ಅಂತ ಬೈಬಲ್‌ ಹೇಳುತ್ತೆ. ಇದರರ್ಥ ನಾವು ರಕ್ತ ಕುಡಿಬಾರದು, ರಕ್ತವಿರೋ ಮಾಂಸವನ್ನ ಮತ್ತು ರಕ್ತವಿರೋ ಆಹಾರವನ್ನೂ ತಿನ್ನಬಾರದು. (ಅಪೊಸ್ತಲರ ಕಾರ್ಯ 15:28, 29)