ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Thai Liang Lim/E+ via Getty Images

ಸದಾ ಎಚ್ಚರವಾಗಿರಿ! 

ಸೋಶಿಯಲ್‌ ಮೀಡಿಯಾದಿಂದ ನಿಮ್ಮ ಮಗುವಿಗೆ ತೊಂದ್ರೆ ಆಗ್ತಿದ್ಯಾ?—ಹೆತ್ತವರಿಗೆ ಬೈಬಲ್‌ ಕೊಡೋ ಸಲಹೆ

ಸೋಶಿಯಲ್‌ ಮೀಡಿಯಾದಿಂದ ನಿಮ್ಮ ಮಗುವಿಗೆ ತೊಂದ್ರೆ ಆಗ್ತಿದ್ಯಾ?—ಹೆತ್ತವರಿಗೆ ಬೈಬಲ್‌ ಕೊಡೋ ಸಲಹೆ

 “ಮಕ್ಕಳ ಮಾನಸಿಕ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗ್ತಿದೆ. ಇದಕ್ಕೆ ಮುಖ್ಯ ಕಾರಣ ಸೋಶಿಯಲ್‌ ಮೀಡಿಯಾ.”—ಡಾ. ವಿವೇಕ್‌ ಮೂರ್ತಿ, ಯು.ಎಸ್‌. ಸರ್ಜನ್‌ ಜನರಲ್‌, ನ್ಯೂಯಾರ್ಕ್‌ ಟೈಮ್ಸ್‌, ಜೂನ್‌ 17, 2024.

 ಮಕ್ಕಳನ್ನ ಸೋಶಿಯಲ್‌ ಮೀಡಿಯಾದ ಅಪಾಯದಿಂದ ಕಾಪಾಡೋಕೆ ಹೆತ್ತವರು ಏನು ಮಾಡಬೇಕು? ಇದ್ರ ಬಗ್ಗೆ ಬೈಬಲ್‌ ಕೆಲವು ಒಳ್ಳೇ ಸಲಹೆಗಳನ್ನ ಕೊಡುತ್ತೆ.

ಹೆತ್ತವರು ಏನು ಮಾಡಬಹುದು?

 ಬೈಬಲಿನ ಈ ಸಲಹೆಗಳನ್ನ ಪಾಲಿಸಿ.

 “ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.

 ಸೋಶಿಯಲ್‌ ಮೀಡಿಯಾದಿಂದ ಖಂಡಿತ ಕೆಲವು ಅಪಾಯಗಳಿವೆ. ಅದಕ್ಕೇ ನಿಮ್ಮ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬಳಸೋಕೆ ಅನುಮತಿ ಕೊಡೋ ಮುಂಚೆ ಚೆನ್ನಾಗಿ ಯೋಚನೆ ಮಾಡಿ. ಒಂದುವೇಳೆ ಅನುಮತಿ ಕೊಟ್ರೂ ಅವರು ಜಾಸ್ತಿ ಸಮಯ ಅದ್ರಲ್ಲೇ ಕಳೆಯದೇ, ಕೆಟ್ಟವರ ಫ್ರೆಂಡ್‌ಶಿಪ್‌ ಮಾಡದೇ, ಕೆಟ್ಟ ವಿಷ್ಯಗಳನ್ನ ನೋಡದೇ ಇರುವಷ್ಟು ಪ್ರೌಢರಾಗಿದ್ದಾರಾ ಅಂತ ತಿಳ್ಕೊಳ್ಳಿ.

 “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:16.

 ಸೋಶಿಯಲ್‌ ಮೀಡಿಯಾ ಬಳಸೋಕೆ ಮಕ್ಕಳಿಗೆ ಅನುಮತಿ ಕೊಡೋದಾದ್ರೆ ಕೆಲವು ನಿಯಮಗಳನ್ನ ಇಡಿ. ಅದನ್ನ ಪಾಲಿಸೋದ್ರಿಂದ ಅವರಿಗೆ ಹೇಗೆ ಸಹಾಯ ಆಗುತ್ತೆ ಅಂತಾನೂ ಹೇಳಿ. ಮಕ್ಕಳ ನಡವಳಿಕೆಯಲ್ಲಿ ಏನಾದ್ರೂ ಬದಲಾವಣೆ ಕಾಣಿಸಿದ್ರೆ ಸೋಶಿಯಲ್‌ ಮೀಡಿಯಾ ಬಳಸೋ ಸಮಯನ ಕಮ್ಮಿ ಮಾಡಿ, ಮಿತಿ ಇಡಿ.

ಹೆಚ್ಚನ್ನ ಕಲಿಯಿರಿ

 “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ” ಅಂತ ಬೈಬಲ್‌ ಹೇಳುತ್ತೆ ನಿಜ. (2 ತಿಮೊತಿ 3:1-5) ಆದ್ರೆ ಆ ಕಷ್ಟಗಳನ್ನ ನಿಭಾಯಿಸೋಕೆ ಬೇಕಾದ ಸಲಹೆಗಳನ್ನೂ ಅದು ಕೊಡುತ್ತೆ. ಮಾನಸಿಕ ಆರೋಗ್ಯದ ಬಗ್ಗೆ ಹೆತ್ತವರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡೋ 20ಕ್ಕಿಂತ ಹೆಚ್ಚು ಲೇಖನಗಳು ನಮ್ಮ ವೆಬ್‌ಸೈಟಲ್ಲಿ ಇವೆ. ಅದನ್ನ ಓದಿ ಹೆಚ್ಚನ್ನ ತಿಳ್ಕೊಳ್ಳಿ.