ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ನೇಹ ಒಂಟಿತನಕ್ಕೆ ಮದ್ದು—ಬೈಬಲ್‌ ಕೊಡೋ ಸಹಾಯ

ಸ್ನೇಹ ಒಂಟಿತನಕ್ಕೆ ಮದ್ದು—ಬೈಬಲ್‌ ಕೊಡೋ ಸಹಾಯ

 ಲೋಕದಲ್ಲಿರೋ ಹೆಚ್ಚಿನ ಜನರು ಒಂಟಿತನ ಅನ್ನೋ ಒಂದು ದೊಡ್ಡ ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದಾರೆ ಅಂತ 2023ರಲ್ಲಿ ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಒಂಟಿತನಕ್ಕೆ ಏನಾದ್ರೂ ಮದ್ದು ಇದ್ಯಾ?

  •   “ನಾವು ಜನರ ಜೊತೆ ಬೆರೆಯದೇ ಒಂಟಿಯಾಗಿದ್ರೆ ನಮ್ಮ ಆರೋಗ್ಯನೂ ಹಾಳಾಗುತ್ತೆ, ನಮ್ಮ ಖುಷಿನೂ ಕಳ್ಕೋತೀವಿ . . . ಆದ್ರೆ ಖಂಡಿತ ಈ ಸಮಸ್ಯೆಯಿಂದ ಆಚೆ ಬರಬಹುದು . . . ಬೇರೆವ್ರ ಜೊತೆಗಿರೋ ಸ್ನೇಹ ಸಂಬಂಧನಾ ಗಟ್ಟಿ ಮಾಡ್ಕೊಳ್ಳೋಕೆ ನಾವು ಪ್ರತಿದಿನ ಚಿಕ್ಕ ಪುಟ್ಟ ಹೆಜ್ಜೆಗಳನ್ನ ತಗೊಳ್ಳೋ ಮೂಲಕ ಅದ್ರಿಂದ ಆಚೆ ಬರಬಹುದು” ಅಂತ ಯು.ಎಸ್‌ ಸರ್ಜನ್‌ ವಿವೇಕ್‌ ಮೂರ್ತಿ ಹೇಳಿದ್ದಾರೆ. a

 ನಾವು ಒಬ್ಬರೇ ಇರೋವಾಗ ಮಾತ್ರ ಒಂಟಿತನ ಕಾಡಲ್ಲ. ಕೆಲವ್ರಿಗೆ ಜನರ ಗುಂಪಿನ ಮಧ್ಯೆ ಇದ್ರೂ ಒಂಟಿತನ ಕಾಡುತ್ತೆ. ಒಂಟಿತನಕ್ಕೆ ಕಾರಣ ಏನೇ ಆಗಿದ್ರೂ ಅದ್ರಿಂದ ಆಚೆ ಬರೋಕೆ ಬೈಬಲ್‌ ಸಹಾಯ ಮಾಡುತ್ತೆ. ಬೇರೆವ್ರ ಜೊತೆ ಸ್ನೇಹವನ್ನ ಗಟ್ಟಿ ಮಾಡ್ಕೊಳ್ತಾ ಒಂಟಿತನ ಅನ್ನೋ ಸಮಸ್ಯೆಯಿಂದ ಆಚೆ ಬರೋಕೆ ಬೈಬಲಿನಲ್ಲಿ ಕೆಲವು ಒಳ್ಳೇ ಸಲಹೆಗಳಿವೆ.

ನಿಮಗೆ ಸಹಾಯ ಮಾಡೋ ಬೈಬಲ್‌ ಸಲಹೆಗಳು

 ಚೆನ್ನಾಗಿ ಸಂಭಾಷಣೆ ಮಾಡಿ. ಸಂಭಾಷಣೆ ಅನ್ನೋದ್ರಲ್ಲಿ ನಿಮ್ಮ ಭಾವನೆಗಳನ್ನ ಹೇಳಿಕೊಳ್ಳೋದಷ್ಟೇ ಅಲ್ಲ, ಬೇರೆವ್ರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಳ್ಳೋದು ಸೇರಿದೆ. ನಿಮಗೆ ಬೇರೆವ್ರ ಕಡೆ ನಿಜವಾದ ಆಸಕ್ತಿ ಇದೆ ಅಂತ ತೋರಿಸಿಕೊಟ್ರೆ ಅವ್ರ ಜೊತೆಗಿರೋ ನಿಮ್ಮ ಸ್ನೇಹ ಸಂಬಂಧ ಗಟ್ಟಿ ಆಗುತ್ತೆ.

  •   ಬೈಬಲ್‌ ತತ್ವ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

 ಬೇರೆ ಬೇರೆ ರೀತಿಯ ಜನರನ್ನ ಫ್ರೆಂಡ್ಸ್‌ ಮಾಡ್ಕೊಳ್ಳಿ. ನಿಮಗಿಂತ ವಯಸ್ಸಲ್ಲಿ ದೊಡ್ಡವರನ್ನ, ಚಿಕ್ಕವರನ್ನ ಫ್ರೆಂಡ್ಸ್‌ ಮಾಡ್ಕೊಳ್ಳಿ. ಅಷ್ಟೇ ಅಲ್ಲ, ಬೇರೆ ದೇಶ, ಹಿನ್ನಲೆ, ಸಂಸ್ಕೃತಿಯ ಜನರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ.

  •   ಬೈಬಲ್‌ ತತ್ವ: “ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ.”—2 ಕೊರಿಂಥ 6:13.

 ಬೇರೆವ್ರ ಜೊತೆ ಒಳ್ಳೇ ಸ್ನೇಹ ಸಂಬಂಧವನ್ನ ಬೆಳೆಸಿಕೊಳ್ಳೋಕೆ “ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?” ಅನ್ನೋ ಲೇಖನ ನೋಡಿ.

a ಅವರ್‌ ಎಪಿಡೆಮಿಕ್‌ ಆಫ್‌ ಲೋನ್ಲಿನೆಸ್‌ ಆ್ಯಂಡ್‌ ಐಸೋಲೇಶನ್‌: ದ ಯು.ಎಸ್‌ ಸರ್ಜನ್‌ ಜನರಲ್ಸ್‌ ಅಡ್ವೈಸರಿ ಆನ್‌ ದ ಹೀಲಿಂಗ್‌ ಎಫೆಕ್ಟ್ಸ್‌ ಆಫ್‌ ಸೋಶಿಯಲ್‌ ಕನೆಕ್ಷನ್‌ ಆ್ಯಂಡ್‌ ಕಮ್ಯುನಿಟಿ, 2023.