ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿತ್ರ ಕೃಪೆ, ಎಡದಿಂದ ಬಲಕ್ಕೆ: ಇಯಾನ್‌ ಚಂಡಮಾರುತ, ಫ್ಲೋರಿಡಾ, ಅಮೆರಿಕ, ಸೆಪ್ಟಂಬರ್‌ 2022 (Sean Rayford/Getty Images); ಮಧ್ಯದ ಚಿತ್ರ: ತಾಯಿ ತನ್ನ ಮಗನೊಂದಿಗೆ ಮನೆ ಖಾಲಿ ಮಾಡ್ತಿದ್ದಾರೆ, ಡಾಂಟೆಸ್ಕ್‌, ಉಕ್ರೇನ್‌, ಜುಲೈ 2022 (Alex Chan Tsz Yuk/SOPA Images/LightRocket via Getty Images); ಬಲಭಾಗದ ಚಿತ್ರ: ತುಂಬ ಜನ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ತಿದ್ದಾರೆ, ಬೀಜಿಂಗ್‌, ಚೀನಾ, ಏಪ್ರಿಲ್‌ 2022 (Kevin Frayer/Getty Images)

ಸದಾ ಎಚ್ಚರವಾಗಿರಿ!

2022: ಆತಂಕ ಮತ್ತು ಗೊಂದಲದ ಗೂಡಾದ ವರ್ಷ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

2022: ಆತಂಕ ಮತ್ತು ಗೊಂದಲದ ಗೂಡಾದ ವರ್ಷ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 2022ರಲ್ಲಿ ಯುದ್ಧಗಳ ಬಗ್ಗೆ, ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮತ್ತು ಪ್ರಕೃತಿ ವಿಕೋಪಗಳ ಬಗ್ಗೆ ಯಾವಾಗಲೂ ನ್ಯೂಸ್‌ನಲ್ಲಿ ಸುದ್ದಿ ಕೇಳ್ತಾನೆ ಇದ್ವಿ. ಈ ಘಟನೆಗಳೆಲ್ಲಾ ಯಾಕೆ ನಡೀತಿದೆ ಅನ್ನೋದಕ್ಕೆ ಬೈಬಲ್‌ ಮಾತ್ರ ಉತ್ತರ ಕೊಡುತ್ತೆ.

2022ರಲ್ಲಿ ನಡೆದ ಘಟನೆಗಳು

 ಕಳೆದ ವರ್ಷ ನಡೆದ ಘಟನೆಗಳು ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. (2 ತಿಮೊತಿ 3:1) ಇದು 1914ರಿಂದ ಶುರುವಾಯ್ತು. ಬೈಬಲಿನಲ್ಲಿ ಹೇಳಿರೋ ಭವಿಷ್ಯವಾಣಿಗಳು ಈಗ ಹೇಗೆ ನಿಜ ಆಗ್ತಿದೆ ಅಂತ ಗಮನಿಸಿ:

 “ಯುದ್ಧಗಳು.”ಮತ್ತಾಯ 24:6.

  •   “2022ರಲ್ಲಿ ಯುರೋಪ್‌ ಖಂಡ ಮತ್ತೆ ರಣರಂಗ ಆಯ್ತು.” a

 ಉಕ್ರೇನ್‌ ಮೇಲೆ ರಷ್ಯಾ ದಾಳಿ” ಅನ್ನೋ ಲೇಖನ ನೋಡಿ.

 “ಆಹಾರದ ಕೊರತೆ.”ಮತ್ತಾಯ 24:7.

  •   “2022: ಹಸಿವಿನಿಂದ ಕಂಗಾಲಾದ ವರ್ಷ.” b

 “ಅಂಟುರೋಗಗಳು.”ಲೂಕ 21:11.

  •   “ಈ ವರ್ಷ ಮಂಕಿಪಾಕ್ಸ್‌, ಪೋಲಿಯೋ ಹಾಗೂ ಕೋವಿಡ್‌-19 ಪುನಃ ಅಬ್ಬರಿಸಿದ್ರಿಂದ ಎಷ್ಟೋ ಜನ್ರಿಗೆ ತೊಂದ್ರೆ ಆಯ್ತು. ಇದ್ರಿಂದ ಈ ಅಂಟುರೋಗಗಳು ಎಷ್ಟು ಮಾರಣಾಂತಿಕ ಮತ್ತು ಇವನ್ನು ಮನುಷ್ಯರಿಂದ ತೆಗೆದು ಹಾಕೋಕೆ ಆಗಲ್ಲ ಅಂತ ಗೊತ್ತಾಯ್ತು.” c

 ಕೋವಿಡ್‌ಗೆ 60 ಲಕ್ಷ ಜನರು ಬಲಿ” ಅನ್ನೋ ಲೇಖನ ನೋಡಿ.

 “ಭಯಾನಕ ದೃಶ್ಯಗಳು.”ಲೂಕ 21:11.

  •   “ತುಂಬ ಕಡೆ ಮಿತಿಮೀರಿದ ತಾಪಮಾನ, ಬರಗಾಲ, ಕಾಡ್ಗಿಚ್ಚು ಮತ್ತು ಪ್ರಳಯ ಆಯ್ತು. 2022ರ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿದ್ರಿಂದ ತುಂಬ ಜನ್ರಿಗೆ ನಷ್ಟ ಆಯ್ತು, ಸಾವಿರಾರು ಜನ್ರು ಜೀವ ಕಳಕೊಂಡರು, ಲಕ್ಷಾಂತರ ಜನ್ರು ಮನೆಯನ್ನೂ ಕಳಕೊಂಡ್ರು.” d

 “ಪರಿಸ್ಥಿತಿ ಹದಗೆಟ್ಟಿರೋ ಸುದ್ದಿಗಳು.”ಲೂಕ 21:9.

  •   “ಆರ್ಥಿಕ ಸಮಸ್ಯೆ ಮತ್ತು ಬೆಲೆಯೇರಿಕೆ ಜಾಸ್ತಿಯಾಗಿದ್ರಿಂದ 2022ರಲ್ಲಿ ಜನ್ರೆಲ್ಲಾ ಕೋಪದಿಂದ ತುಂಬ ಸಲ ಪ್ರತಿಭಟನೆ ಮಾಡಿದ್ರು, ದಂಗೆಯೆದ್ರು.” e

ಮುಂದಿನ ವರ್ಷ ಏನಾಗುತ್ತೆ?

 2023ರಲ್ಲಿ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲ. ಆದ್ರೆ ದೇವರ ಆಳ್ವಿಕೆ ಅಥವಾ ದೇವರ ಸರ್ಕಾರ ಆದಷ್ಟು ಬೇಗ ಭೂಮಿ ಮೇಲಿರೋ ಎಲ್ಲ ಕೆಟ್ಟತನವನ್ನ ನಾಶ ಮಾಡುತ್ತೆ ಅಂತ ನಮಗೆ ಗೊತ್ತು. (ದಾನಿಯೇಲ 2:44) ಈ ಸರ್ಕಾರ ಮನುಷ್ಯರ ಕಷ್ಟ ಸಂಕಟಗಳನ್ನ ತೆಗೆದು ದೇವರ ಇಷ್ಟವನ್ನ ಈ ಭೂಮಿ ಮೇಲೆ ನೆರವೇರಿಸುತ್ತೆ.—ಮತ್ತಾಯ 6:9, 10.

 ಬೈಬಲಿನಲ್ಲಿರೋ ಭವಿಷ್ಯವಾಣಿಗಳ ತರಾನೆ ಈ ಲೋಕದಲ್ಲಿ ಘಟನೆಗಳು ಹೇಗೆ ನಡಿತಿದೆ ಅಂತ ಗಮನಿಸಿ ಮತ್ತು ಯೇಸು ಹೇಳಿದ ತರ “ಸದಾ ಎಚ್ಚರವಾಗಿರಿ.” (ಮಾರ್ಕ 13:37) ಬೈಬಲ್‌ ನಿಮಗೆ ಈಗ ಹೇಗೆ ಸಹಾಯ ಮಾಡುತ್ತೆ ಮತ್ತು ಭವಿಷ್ಯದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯಾವ ನಿರೀಕ್ಷೆ ಕೊಡುತ್ತೆ ಅನ್ನೋದ್ರ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನಮ್ಮನ್ನ ಸಂಪರ್ಕಿಸಿ.

a ಎಪಿ ನ್ಯೂಸ್‌ನಲ್ಲಿ ಜಿಲ್‌ ಲಾಲೆಸ್‌ರವರು, “2022ರಲ್ಲಿ ಯುರೋಪ್‌ ಖಂಡ ಮತ್ತೆ ರಣರಂಗ ಆಯ್ತು” ಅನ್ನೋ ಲೇಖನ ಬರೆದ್ರು—ಡಿಸೆಂಬರ್‌ 8, 2022.

b ವಿಶ್ವ ಆಹಾರ ಕಾರ್ಯಕ್ರಮ, “ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!”

c ಜೆಎಎಮ್‌ಎ ಹೆಲ್ತ್‌ ಫೋರಂನಲ್ಲಿ ಲಾರೆನ್ಸ್‌ ಒ. ಗಾಸ್ಟಿನ್‌ ಜೆಡಿರವರು, “ಅಂಟುರೋಗಗಳ ಸಮಯದಲ್ಲಿ ಜೀವಿಸೋದು—ಕೋವಿಡ್‌-19ರಿಂದ ಮಂಕಿಪಾಕ್ಸ್‌, ಪೋಲಿಯೋ ಮತ್ತು ಡಿಸೀಸ್‌ ಎಕ್ಸ್‌” ಬಗ್ಗೆ ಲೇಖನ ಬರೆದ್ರು—ಸೆಪ್ಟಂಬರ್‌ 22, 2022.

d ಮಾರ್ಟಿನಾ ಇಗಿನಿರವರು Earth.Orgನಲ್ಲಿ, “2022ರ ಬೇಸಿಗೆಯಲ್ಲಿ ಮಿತಿ ಮೀರಿದ ತಾಪಮಾನ ಅಥ್ವಾ ಬಿಸಿಗಾಳಿ ಜಾಸ್ತಿಯಾಗಿರೋಕೆ ಕಾರಣ ಏನು?” ಅನ್ನೋ ಲೇಖನ ಬರೆದ್ರು—ಅಕ್ಟೋಬರ್‌ 24, 2022.

e ಕಾರ್ನೇಗಿ ಎಂಡೋವ್‌ಮೆಂಟ್‌ ಫಾರ್‌ ಇಂಟರ್ನ್ಯಾಷನಲ್‌ ಪೀಸ್‌ನಲ್ಲಿ, ಥಾಮಸ್‌ ಕ್ಯಾರೋಥರ್ಸ್‌ ಮತ್ತು ಬೆಂಜಮಿನ್‌ ಫೆಲ್ಡ್‌ಮನ್‌ರವರು “2022ರಲ್ಲಿ ಆರ್ಥಿಕ ಸಮಸ್ಯೆ ಮತ್ತು ಬೆಲೆಯೇರಿಕೆ ಜಾಸ್ತಿಯಾಗಿದ್ದರಿಂದ ಜನರು ಕೋಪದಿಂದ ಪ್ರತಿಭಟನೆಗಳನ್ನ ಮಾಡಿದ್ರು” ಅನ್ನೋ ಲೇಖನ ಬರೆದ್ರು—ಡಿಸೆಂಬರ್‌ 8, 2022.