ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋವಿಡ್‌-19 ಬರೋಕೂ ಮುಂಚೆ ನಿರ್ಮಾಣ ಕೆಲ್ಸದಲ್ಲಿ ಸಂಘಟನೆಯ ಸಾಧನೆಗಳು

ಕೋವಿಡ್‌-19 ಬರೋಕೂ ಮುಂಚೆ ನಿರ್ಮಾಣ ಕೆಲ್ಸದಲ್ಲಿ ಸಂಘಟನೆಯ ಸಾಧನೆಗಳು

ನೀವು ಕೊಡುವ ಕಾಣಿಕೆಗಳನ್ನ ಹೇಗೆ ಉಪಯೋಗಿಸಲಾಗುತ್ತದೆ

ನವೆಂಬರ್‌ 1, 2020

 ಪ್ರತಿ ವರ್ಷ ಲಕ್ಷಾಂತರ ಜನ್ರು ದೀಕ್ಷಾಸ್ನಾನ ತಗೊಳ್ತಿದ್ದಾರೆ. ಆದ್ರಿಂದ ಯೆಹೋವನ ಆರಾಧನೆಗಾಗಿ ಕಟ್ಟಡಗಳ ಅವಶ್ಯಕತೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ 2020 ರ ಸೇವಾ ವರ್ಷದಲ್ಲಿ ಆರಾಧನೆಗಾಗಿ 2,700ಕ್ಕಿಂತ ಹೆಚ್ಚು ಕಟ್ಟಡಗಳನ್ನ ಕಟ್ಟಲು ಕನ್ಸ್‌ಟ್ರಕ್ಷನ್‌ ಡಿಪಾರ್ಟ್‌ಮೆಂಟ್‌ ನಿರ್ಧಾರ ಮಾಡಿತು. a

 ಆದ್ರೆ ಕೋವಿಡ್‌-19 ಪಿಡುಗಿನ ಕಾರಣ ಈ ಕೆಲಸ ಅಲ್ಲಿಗೇ ನಿಂತುಹೋಯ್ತು. ಸಹೋದರ ಸಹೋದರಿಯರ ಆರೋಗ್ಯ ಕಾಪಾಡಲು ಮತ್ತು ಸರ್ಕಾರದ ನಿಯಮ ಪಾಲಿಸಲು ಲೋಕವ್ಯಾಪಕವಾಗಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣ ಕೆಲಸವನ್ನ ಆಡಳಿತ ಮಂಡಳಿಯ ಪಬ್ಲಿಷಿಂಗ್‌ ಕಮಿಟಿ ಸ್ವಲ್ಪ ಸಮಯಕ್ಕೆ ನಿಲ್ಲಿಸಬೇಕಾಯ್ತು. 2020 ರ ಸೇವಾ ವರ್ಷದಲ್ಲಿ ಕೋವಿಡ್‌ ಕಾಯಿಲೆ ಬರೋಕೂ ಮುಂಚೆ 1, 700ಕ್ಕಿಂತಲೂ ಹೆಚ್ಚಿನ ರಾಜ್ಯಸಭಾಗೃಹದ ನಿರ್ಮಾಣ ಮತ್ತು ರಿಪೇರಿ ಕೆಲಸ ಮಾಡಲಾಯ್ತು. ಸುಮಾರು 100 ಶಾಖಾ ಕಛೇರಿಯ ಪ್ರಾಜೆಕ್ಟ್‌ಗಳನ್ನ ಆ ವರ್ಷದಲ್ಲಿ ಮುಗಿಸಲಾಯ್ತು. ನಾವೀಗ ಅದರಲ್ಲಿ 2 ಪ್ರಾಜೆಕ್ಟ್‌ಗಳ ಬಗ್ಗೆ ನೋಡೋಣ. ಅದ್ರಿಂದ ಸಹೋದರ ಸಹೋದರಿಯರಿಗೆ ಹೇಗೆಲ್ಲಾ ಪ್ರಯೋಜ್ನ ಆಯ್ತು ಅಂತ ತಿಳ್ಕೊಳ್ಳೋಣ.

 ಕ್ಯಾಮರೂನ್‌ ಬ್ರಾಂಚ್‌. ಇಲ್ಲಿನ ಹಳೇ ಬ್ರಾಂಚ್‌ ಡುವಾಲಾ ಅನ್ನೋ ಜಾಗದಲ್ಲಿತ್ತು. ಅದು ತುಂಬಾ ಚಿಕ್ಕದಾಗಿತ್ತು ಮತ್ತು ಜಾಸ್ತಿ ರಿಪೇರಿ ಕೆಲಸಗಳಿತ್ತು. ಪಬ್ಲಿಷಿಂಗ್‌ ಕಮಿಟಿಯವರು ಅದನ್ನ ರಿಪೇರಿಮಾಡಲು ಯೋಚಿಸಿದ್ರು, ಆದ್ರೆ ಅದಕ್ಕೆ ತಗಲೋ ಖರ್ಚು ಆ ಜಾಗದ ಬೆಲೆಗಿಂತ ಜಾಸ್ತಿಯಾಗಿತ್ತು. ಆದ್ರಿಂದ ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ಹೊಸ ಜಾಗ ತಗೊಂಡು ಕಟ್ಟಡ ಕಟ್ಟೋದು. ಇನ್ನೊಂದು, ಕಟ್ಟಿರೋ ಕಟ್ಟಡ ತಗೊಂಡು ಅದನ್ನ ರಿಪೇರಿ ಮಾಡೋದು. ಆದ್ರೆ ಪರಿಸ್ಥಿತಿ ಬದಲಾಗಿದ್ರಿಂದ ಈ ಎರಡನ್ನೂ ಮಾಡೋಕೆ ಆಗಲಿಲ್ಲ.

 ಡುವಾಲಾದ ಉತ್ತರ ಭಾಗದಲ್ಲಿ ನಮ್ಮ ಸಮ್ಮೇಳನ ಹಾಲ್‌ ಇದೆ. ಅಲ್ಲಿ ಸರ್ಕಾರ, ಹೊಸದಾಗಿ ರಸ್ತೆನ ಮಾಡ್ತಿದೆ ಅಂತ ನಮ್ಮ ಸಹೋದರರಿಗೆ ಗೊತ್ತಾಯ್ತು. ಇದ್ರಿಂದ ಅಲ್ಲಿ ಓಡಾಡಲು ನಮಗೆ ತುಂಬ ಸುಲಭ ಆಗುತ್ತೆ. ಬ್ರಾಂಚ್‌ಗೆ ಕೂಡ ಇದೇ ಬೇಕಾಗಿತ್ತು. ಆದ್ರಿಂದ ಆಡಳಿತ ಮಂಡಳಿ, ಸಮ್ಮೇಳನ ಹಾಲಿನ ಒಂದು ಭಾಗದಲ್ಲಿ ಹೊಸ ಬ್ರಾಂಚ್‌ ಕಟ್ಟೋಕೆ ಅನುಮತಿ ಕೊಡ್ತು.

ಕ್ಯಾಮರೂನ್‌ ಬ್ರಾಂಚ್‌ ಕಟ್ಟಲು ಸಹೋದರ ಸಹೋದರಿಯರು ಸಹಾಯ ಮಾಡ್ತಿದ್ದಾರೆ

 ಈ ಪ್ರಾಜೆಕ್ಟ್‌ನಲ್ಲಿ ಸಾಕ್ಷಿಗಳು ಮತ್ತು ಹೊರಗಿನ ಕಾಂಟ್ರಾಕ್ಟರ್‌ಗಳು ಕೈಜೋಡಿಸಿ ಕೆಲಸ ಮಾಡಿದ್ರಿಂದ ಸಮಯ ಮತ್ತು ಹಣ ಎರಡೂ ಉಳಿತಾಯ ಆಯ್ತು. ಈ ಪ್ರಾಜೆಕ್ಟ್‌ಗೆ ಹತ್‌ ಹತ್ರ 15 ಕೋಟಿ ಖರ್ಚಾಯ್ತು. ಇದು ನಾವು ಅಂದುಕೊಂಡಿದ್ದಕ್ಕಿಂತ ಕಮ್ಮಿ. ಈ ಪ್ರಾಜೆಕ್ಟ್‌ನ ಬೇಗ ಮುಗಿಸಿದ್ರಿಂದ ಬೆತೆಲ್‌ ಕುಟುಂಬದವ್ರು ಕೋವಿಡ್‌-19 ಹರಡೋಕೂ ಮುಂಚೆನೇ ಅಲ್ಲಿ ಸ್ಥಳಾಂತರಿಸಲು ಸಾಧ್ಯವಾಯ್ತು.

ಕ್ಯಾಮರೂನ್‌ ಬ್ರಾಂಚ್‌ ಪ್ರಾಜೆಕ್ಟ್‌ ಕೋವಿಡ್‌-19 ಅಂಟುರೋಗ ಬರೋದಕ್ಕಿಂತ ಮುಂಚೆ ಕಟ್ಟಿ ಮುಗಿಸಿದ್ರು

 ಕ್ಯಾಮರೂನ್‌ನ ಬೆತೆಲ್‌ ಸದಸ್ಯರು ಈ ಹೊಸ ಕಟ್ಟಡದಲ್ಲಿ ಕೆಲಸ ಮಾಡಲು ತುಂಬ ಸಂತೋಷಪಡ್ತಾರೆ. ಇದು ಯೆಹೋವನು ಅವರಿಗೆ ಕೊಟ್ಟ ಗಿಫ್ಟ್‌ ಅಂತ ಹೇಳ್ತಾರೆ. “ಯೆಹೋವನು ನಮಗೆ ಇಂಥಾ ಒಳ್ಳೇ ಗಿಫ್ಟನ್ನ ಕೊಟ್ಟಿರೋದಕ್ಕಾಗಿ ನಮ್ಮ ಕೈಯಿಂದಾದಷ್ಟು ಕಷ್ಟ ಪಟ್ಟು ಕೆಲಸಮಾಡಬೇಕು” ಅಂತ ಒಬ್ಬ ದಂಪತಿ ಹೇಳ್ತಾರೆ.

ಮಹಾ ಪಿಡುಗು ಬರೋದಕ್ಕಿಂತ ಮುಂಚೆ ಸಹೋದರ ಸಹೋದರಿಯರು ಹೊಸ ಆಫೀಸಲ್ಲಿ ಕೆಲಸ ಮಾಡ್ತಿದ್ದಾರೆ

 ಟೊಹೋಲಾಬಾಲ್‌ ಭಾಷಾಂತರ ಕಛೇರಿ (ಆರ್‌.ಟಿ.ಓ), ಮೆಕ್ಸಿಕೊ. ತುಂಬಾ ವರ್ಷಗಳಿಂದ ಟೊಹೋಲಾಬಾಲ್‌ ಭಾಷಾಂತರ ತಂಡದವರು ಮೆಕ್ಸಿಕೊ ಪಟ್ಟಣದಲ್ಲಿರೊ ಸೆಂಟ್ರಲ್‌ ಅಮೆರಿಕ ಬ್ರಾಂಚ್‌ನಲ್ಲಿ ಕೆಲಸ ಮಾಡ್ತಿದ್ರು. ಅಲ್ಲಿ ಈ ಭಾಷೆ ಮಾತಾಡುವವ್ರು ಯಾರೂ ಇರಲಿಲ್ಲ. ಟೊಹೋಲಾಬಾಲ್‌ ಭಾಷೆನಾ ಆಲ್ಟಾಮಿರಾನೊ ಮತ್ತು ಲಾಸ್‌ ಮಾರ್ಗರೇಟಾಸ್‌ ಅನ್ನೋ ಜಾಗದಲ್ಲಿ ಮಾತಾಡ್ತಾರೆ. ಇದು ಬ್ರಾಂಚ್‌ನಿಂದ 1,000 ಕಿಲೋಮೀಟರ್‌ ದೂರ ಇತ್ತು. ಇದ್ರಿಂದ ಟೊಹೋಲಾಬಾಲ್‌ ಭಾಷೆಯಲ್ಲಿ ಆಗ್ತಿದ್ದ ಬದಲಾವಣೆಗಳು ಭಾಷಾಂತರಗಾರರಿಗೆ ಗೊತ್ತಾಗ್ತಿರಲಿಲ್ಲ. ಅಷ್ಟೇಅಲ್ಲದೇ ಭಾಷಾಂತರ ಮತ್ತು ಆಡಿಯೋ ರೆಕಾರ್ಡಿಂಗ್‌ ಕೆಲಸಕ್ಕೆ ಆ ಭಾಷೆ ಮಾತಾಡೋ ಸಹೋದರ ಸಹೋದರಿಯರನ್ನ ಕಂಡು ಹಿಡಿಯೋಕೂ ಕಷ್ಟ ಆಗ್ತಿತ್ತು.

ಸಹೋದರ ಸಹೋದರಿಯರು ಭಾಷಾಂತರ ಕಛೇರಿ ಕಟ್ಟೋದಕ್ಕೆ ಸಹಾಯ ಮಾಡ್ತಿದ್ದಾರೆ

 ಹಾಗಾಗಿ ಟೊಹೋಲಾಬಾಲ್‌ ಭಾಷೆ ಮಾತಾಡುವ ಸ್ಥಳಕ್ಕೆ ಭಾಷಾಂತರ ತಂಡವನ್ನ ಸ್ಥಳಾಂತರಿಸಲು ಆಡಳಿತ ಮಂಡಳಿಯ ರೈಟಿಂಗ್‌ ಕಮಿಟಿ ನಿರ್ಧಾರ ಮಾಡ್ತು. ಇದಕ್ಕಾಗಿ ಒಂದು ಬಿಲ್ಡಿಂಗ್‌ ತಗೊಂಡು ಅದನ್ನ ರಿಪೇರಿ ಮಾಡಿದ್ರು. ಹೊಸದಾಗಿ ಅಥವಾ ಬಾಡಿಗೆಗೆ ತಗೊಳ್ಳೋದಕ್ಕಿಂತ ಹೀಗೆ ಮಾಡಿದ್ರಿಂದ ಖರ್ಚು ಕಮ್ಮಿ ಆಯ್ತು.

 “ನಾನು 10 ವರ್ಷದಿಂದ ಭಾಷಾಂತರ ತಂಡದಲ್ಲಿ ಕೆಲಸ ಮಾಡ್ತಿದ್ದೀನಿ. ನಮ್ಮ ಬ್ರಾಂಚ್‌ ಸುತ್ತಮುತ್ತ ಈ ಭಾಷೆ ಮಾತಾಡುವವ್ರು ಯಾರೂ ಇಲ್ಲ. ಆದ್ರೆ ಈಗ ನಮ್ಮ ಭಾಷಾಂತರ ತಂಡ ಟೊಹೋಲಾಬಾಲ್‌ ಭಾಷೆ ಮಾತಾಡುವ ಜಾಗಕ್ಕೆ ಸ್ಥಳಾಂತರ ಆಗಿದೆ. ನಾನು ಪ್ರತಿ ದಿನ ಆ ಭಾಷೆ ಜನ್ರ ಜೊತೆ ಮಾತಾಡ್ತೀನಿ ಇದ್ರಿಂದ ತುಂಬ ಹೊಸ ಪದಗಳನ್ನ ಕಲ್ತಿದ್ದೀನಿ. ಭಾಷಾಂತರ ಕೆಲಸಕ್ಕೂ ತುಂಬ ಸಹಾಯ ಆಗಿದೆ” ಅಂತ ಒಬ್ಬ ಭಾಷಾಂತರಗಾರ ಹೇಳಿದ್ರು.

ಟೊಹೋಲಾಬಾಲ್‌ ಭಾಷಾಂತರ ಕಛೇರಿ, ರಿಪೇರಿ ಕೆಲಸಕ್ಕೂ ಮುಂಚೆ ಮತ್ತು ಆಮೇಲೆ

2021 ಸೇವಾ ವರ್ಷದ ಪ್ರಾಜೆಕ್ಟ್‌ಗಳು

 ಮುಂದೆ ಪರಿಸ್ಥಿತಿ ಸರಿಹೋದರೆ 2021 ರ ಸೇವಾ ವರ್ಷದಲ್ಲಿ 75 ಭಾಷಾಂತರ ಕಛೇರಿಗಳು ಮತ್ತು ಬೈಬಲ್‌ ಶಾಲೆ ನಡೆಸುವ ಕಟ್ಟಡಗಳನ್ನ ಕಟ್ಟಬೇಕು ಅಂತ ಅಂದುಕೊಂಡಿದ್ದೀವಿ. ಅಲ್ಲದೇ ನಿಂತು ಹೋಗಿದ್ದ 8 ದೊಡ್ಡ ಬ್ರಾಂಚ್‌ ಪ್ರಾಜೆಕ್ಟ್‌ಗಳ ಕೆಲಸ ಕೂಡ ಮತ್ತೆ ಶುರುವಾಗುತ್ತೆ. ಅದರಲ್ಲಿ ನ್ಯೂಯಾರ್ಕಿನ ರಾಮಪೋದಲ್ಲಿರೋ ಮುಖ್ಯ ಕಾರ್ಯಾಲಯದ ಪ್ರಾಜೆಕ್ಟ್‌ ಮತ್ತು ಅರ್ಜೆಂಟಿನಾ, ಇಟಲಿ ಬ್ರಾಂಚ್‌ಗಳ ಸ್ಥಳಾಂತರ ಕೆಲಸನೂ ಸೇರಿದೆ. ಜೊತೆಗೆ 1,000ಕ್ಕಿಂತ ಹೆಚ್ಚು ರಾಜ್ಯಸಭಾಗೃಹಗಳು ಬೇಕಾಗಿದೆ. ಈಗ ಉಪಯೋಗಿಸ್ತಿರೊ 6,000 ರಾಜ್ಯ ಸಭಾಗೃಹಗಳು ಅಷ್ಟು ಚೆನ್ನಾಗಿ ಇಲ್ಲದಿರೋದ್ರಿಂದ ಅದನ್ನ ಬದಲಾಯಿಸಬೇಕಾಗಿದೆ ಮತ್ತು 4,000 ರಾಜ್ಯಸಭಾಗೃಹಗಳ ರಿಪೇರಿ ಮಾಡಬೇಕಾಗಿದೆ.

 ಹಾಗಾದ್ರೆ ಈ ಎಲ್ಲಾ ರಿಪೇರಿ ಮತ್ತು ನಿರ್ಮಾಣ ಕೆಲಸಗಳಿಗೆ ದುಡ್ಡು ಎಲ್ಲಿಂದ ಬರುತ್ತೆ? ಸೆಂಟ್ರಲ್‌ ಅಮೆರಿಕದ ಬ್ರಾಂಚ್‌ ಕಮಿಟಿ ಸದಸ್ಯರಾದ ಸಹೋದರ ಲಜಾರೋ ಗಾನ್‌ಸೇಲ್ಸ್‌, ಟೊಹೋಲಾಬಾಲ್‌ ಭಾಷಾಂತರ ಕಛೇರಿ ಪ್ರಾಜೆಕ್ಟ್‌ ಬಗ್ಗೆ ಮಾತನಾಡುವಾಗ ಇದಕ್ಕೆ ಉತ್ತರಿಸಿದ್ರು. ಅವ್ರು ಹೇಳಿದ್ದು, “ನಮ್ಮ ಬ್ರಾಂಚ್‌ ಟೆರಿಟೊರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಹಣ ಕಡಿಮೆ ಇರೋದ್ರಿಂದ ಸಹೋದರ ಸಹೋದರಿಯರ ಸಹಾಯ ಇಲ್ಲದೆ ನಾವು ಈ ಭಾಷಾಂತರ ಕಛೇರಿನ ಕಟ್ಟಿಮುಗಿಸೋಕೆ ಆಗ್ತಿರಲಿಲ್ಲ. ಲೋಕದ ಎಲ್ಲಾ ಕಡೆಯಿಂದ ಸಹೋದರ ಸಹೋದರಿಯರು ಕೊಟ್ಟ ಕಾಣಿಕೆಯ ಸಹಾಯದಿಂದ ಅದೇ ಭಾಷೆ ಮಾತಾಡುವ ಜಾಗಗಳಿಗೆ ಭಾಷಾಂತರ ತಂಡಗಳನ್ನ ಸ್ಥಳಾಂತರ ಮಾಡೋಕೆ ಸಾಧ್ಯವಾಯ್ತು. ಧಾರಾಳವಾಗಿ ಕಾಣಿಕೆ ಕೊಟ್ಟಿರುವ ಲೋಕವ್ಯಾಪಕ ಸಹೋದರ ಬಳಗಕ್ಕೆ ತುಂಬ ಧನ್ಯವಾದಗಳು.” ನಿಮ್ಮಲ್ಲಿ ಹೆಚ್ಚಿನವರು donate.pr418.com ಮೂಲಕ ಲೋಕವ್ಯಾಪಕ ಕೆಲಸಕ್ಕೆ ಕೊಟ್ಟಿದ್ದೀರಾ. ನೀವು ಕೊಟ್ಟ ಉದಾರ ಕಾಣಿಕೆಗಳಿಂದಾನೇ ಈ ಪ್ರಾಜೆಕ್ಟ್‌ಗಳನ್ನೆಲ್ಲಾ ಪೂರ್ತಿ ಮಾಡೋಕೆ ಸಾಧ್ಯವಾಯ್ತು.

a ಲೋಕಲ್‌ ಡಿಸೈನ್‌/ಕನ್ಸ್‌ಟ್ರಕ್ಷನ್‌ ಡಿಪಾರ್ಟ್‌ಮೆಂಟ್‌ ತಮ್ಮ ಟೆರಿಟೊರಿಯಲ್ಲಿ ಯಾವ ರಾಜ್ಯ ಸಭಾಗೃಹನ ಕಟ್ಟಬೇಕು ಅಂತ ಪ್ಲಾನ್‌ ಮಾಡಿ ಅದರಂತೆ ಕೆಲ್ಸ ಶುರು ಮಾಡ್ತಾರೆ. ಮುಖ್ಯಕಾರ್ಯಾಲಯದಲ್ಲಿರುವ ವಲ್ಡ್‌ವೈಡ್‌ ಡಿಸೈನ್‌/ಕನ್ಸ್‌ಟ್ರಕ್ಷನ್‌ ಡಿಪಾರ್ಟ್‌ಮೆಂಟ್‌ ಪ್ರಪಂಚದ ಎಲ್ಲಾ ಕಡೆ ನಡೆಯುವ ಕಟ್ಟಡ ನಿರ್ಮಾಣ ಕೆಲಸನಾ ನೋಡಿಕೊಳ್ಳುತ್ತೆ. ಯಾವ ಪ್ರಾಜೆಕ್ಟ್‌ನ ಮೊದಲು ಮಾಡಬೇಕು, ಹೇಗೆ ಮಾಡಬೇಕು ಅಂತ ನಿರ್ಧಾರ ಮಾಡುತ್ತೆ.