ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ನಂಬಿಕೆ ಕಟ್ಟೋಕೆ ಸಹಾಯ ಮಾಡಿದ ಒಂದು ಚಿಕ್ಕ ಬಾಕ್ಸ್‌

ನಂಬಿಕೆ ಕಟ್ಟೋಕೆ ಸಹಾಯ ಮಾಡಿದ ಒಂದು ಚಿಕ್ಕ ಬಾಕ್ಸ್‌

ಸೆಪ್ಟೆಂಬರ್‌ 1, 2020

 ಹಿಂದೆಂದಿಗಿಂತ್ಲೂ ಈಗ ಯೆಹೋವನ ಸಾಕ್ಷಿಗಳು ಬೈಬಲ್‌ ಆಧಾರಿತ ಪ್ರಕಾಶನಗಳನ್ನ ಮತ್ತು ವಿಡಿಯೋಗಳನ್ನ ಡಿಜಿಟಲ್‌ ಸಾಧನಗಳ ಮೂಲಕ ಹೇರಳವಾಗಿ ಪಡೀತಿದ್ದಾರೆ. ಆದ್ರೆ ಪ್ರಪಂಚದ ಅನೇಕ ಸ್ಥಳಗಳಲ್ಲಿ ನಮ್ಮ ಸಹೋದರರಿಗೆ ಇಂಟರ್ನೆಟ್‌ ಸಿಕ್ತಿಲ್ಲ. ಇನ್ನು ಕೆಲವು ಸ್ಥಳಗಳಲ್ಲಿ ಇಂಟರ್ನೆಟ್‌ ಆಗಾಗ ಬಂದು ಹೋಗ್ತಾ ಇರುತ್ತೆ, ಕೆಲವೊಮ್ಮೆ ಸ್ಲೋ ಆಗಿ ಇರುತ್ತೆ ಅಥವಾ ಇಂಟರ್ನೆಟೇ ಇರಲ್ಲ.

 ಇಂಥ ಸಂದರ್ಭದಲ್ಲೂ, ನಮ್ಮ ಅನೇಕ ಸಹೋದರ ಸಹೋದರಿಯರು ಇಂಟರ್ನೆಟ್‌ ಇಲ್ಲದೆ ಡಿಜಿಟಲ್‌ ಪ್ರಕಾಶನಗಳನ್ನ ಈಗ ಡೌನ್‌ಲೋಡ್‌ ಮಾಡ್ತಿದ್ದಾರೆ. ಇದು ಹೇಗೆ ಸಾಧ್ಯ?

 ಇಂಟರ್ನೆಟ್‌ ಸಮಸ್ಯೆ ಇರೋ ಸಭೆಗಳಿಗೆ ಚಿಕ್ಕ ಸಾಧನವಾದ JW ಬಾಕ್ಸ್‌ ಅನ್ನು ಕೊಡಲಾಗಿದೆ. ಇದಕ್ಕಾಗಿ ಕಮರ್ಷಿಯಲ್‌ ಫರ್ಮ್‌ನಿಂದ ಒಂದು ರೌಟರ್‌ನ್ನ ಖರೀದಿಸಲಾಯ್ತು. ಬೆತೆಲ್‌ನ ಕಂಪ್ಯೂಟರ್‌ ಡಿಪಾರ್ಟ್‌ಮೆಂಟ್‌ನಲ್ಲಿ ಇರೋರು ಅದಕ್ಕೆ ಬೇಕಾದ ಸಾಫ್ಟ್‌ವೇರ್‌ನ್ನ, jw.orgನಲ್ಲಿರೋ ಡಿಜಿಟಲ್‌ ಪ್ರಕಾಶನಗಳನ್ನ ಮತ್ತು ವಿಡಿಯೋಗಳನ್ನ ಹಾಕಿದ್ರು. ಪ್ರತಿ ಬಾಕ್ಸ್‌ನ ಬೆಲೆ ಸುಮಾರು 5500 ರೂಪಾಯಿ.

 ಸಭೆಯಲ್ಲಿ ಸಹೋದರ ಸಹೋದರಿಯರು ಮೊಬೈಲ್‌ನ್ನು ವೈಫೈ ಮೂಲಕ JW ಬಾಕ್ಸ್‌ಗೆ ಕನೆಕ್ಟ್‌ ಮಾಡಿ ಪ್ರಕಾಶನಗಳನ್ನ ಮತ್ತು ವಿಡಿಯೋಗಳನ್ನ ಡೌನ್‌ಲೋಡ್‌ ಮಾಡ್ಕೊಳ್ತಾರೆ. ಹಳೇದಾದ ಅಥವಾ ಸಾಮಾನ್ಯವಾದ ಡಿವೈಸ್‌ ಅನ್ನು ಸಹ ಇದಕ್ಕೆ ಕನೆಕ್ಟ್‌ ಮಾಡಬಹುದು. ಒಂದುವೇಳೆ ಸಭೆಯಲ್ಲಿ ಇಂಟರ್ನೆಟ್‌ ಸಮಸ್ಯೆ ಇದ್ರೆ ಪುನಃ ಹೊಸ ಪ್ರಕಾಶನಗಳನ್ನ JW ಬಾಕ್ಸ್‌ಗೆ ಹೇಗೆ ಹಾಕೋದು? ಆ ಬಾಕ್ಸ್‌ಗೆ jw.orgಯಿಂದ ಹೊಸ ಪ್ರಕಾಶನಗಳನ್ನ ಹಾಕೋಕೆ ಶಾಖಾ ಕಛೇರಿ ಪ್ರತಿ ಸಲ ಯುಎಸ್‌ಬಿ ಕೀ ಅನ್ನು ಕಳಿಸಿ ಕೊಡುತ್ತೆ. ಅದ್ರ ಬೆಲೆ ಸುಮಾರು 300 ರೂಪಾಯಿ.

 ಈ JW ಬಾಕ್ಸ್‌ನಿಂದ ನಮ್ಮ ಸಹೋದರರಿಗೆ ಹೇಗೆ ಸಹಾಯ ಆಯ್ತು? ಕಾಂಗೋ ಗಣರಾಜ್ಯದಲ್ಲಿ ವಾಸಿಸ್ತಿದ್ದ ನೇತನ್‌ ಆಂಡ್ರೂಏಂಡ್ರಾ ಹೀಗೆ ಹೇಳ್ತಾರೆ: “ನಾನು ತುಂಬ ಸಮಯದಿಂದ ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’ ಮತ್ತು‘ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ’ ಅನ್ನೋ ನಾಟಕವನ್ನ ಡೌನ್‌ಲೋಡ್‌ ಮಾಡ್ಕೊಳ್ಳೋಕೆ ಪ್ರಯತ್ನಿಸ್ತಿದ್ದೆ. ಆದ್ರೆ ಆಗಲಿಲ್ಲ. ಇದ್ರಿಂದ ನನ್ಗೆ ತುಂಬ ಬೇಜಾರ್‌ ಆಯ್ತು. ಈಗ ನಾನು ನನ್ನ ಮೊಬೈಲ್‌ನಲ್ಲಿ ಈ ವಿಡಿಯೋಗಳನ್ನ ಡೌನ್‌ಲೋಡ್‌ ಮಾಡ್ಕೊಳ್ಳಬಹುದು. ಇದ್ರಿಂದ ನನ್ನ ಮಕ್ಕಳಿಗೆ ಇನ್ನೂ ಚೆನ್ನಾಗಿ ಕಲಿಸೋಕೆ ಆಗ್ತಿದ್ದೆ.”

 ನೈಜೀರಿಯದ ಒಂದು ಸಭೆಗೆ JW ಬಾಕ್ಸ್‌ ಹಾಕೋಕೆ ಹೋದ ಒಬ್ಬ ಸಹೋದರ ಹೀಗೆ ಹೇಳ್ತಾರೆ: “ಈ JW ಬಾಕ್ಸ್‌ನ್ನ ನಮ್ಮ ಸಹೋದರ ಸಹೋದರಿಯರು ಯೆಹೋವನಿಂದ ಬಂದ ವಿಶೇಷ ಗಿಫ್ಟ್‌ ಅಂತ ಭಾವಿಸ್ತಾರೆ. ಅವರೀಗ ಬೋಧನಾ ಸಲಕರಣಾ ಪಟ್ಟಿಯಲ್ಲಿರೋ ಪ್ರಕಾಶನಗಳನ್ನ ಮತ್ತು ವಿಡಿಯೋಗಳನ್ನ ಡೌನ್‌ಲೋಡ್‌ ಮಾಡ್ಕೊಳ್ಳೋಕೆ ಆಗ್ತಿರೋ ಕಾರಣ ಅವರು ಖುಷಿಯಿಂದ ಕುಪಳಿಸ್ತಿದ್ದಾರೆ.”

 ಆಫ್ರಿಕ, ಓಶೀಯಾನಿಯ ಮತ್ತು ದಕ್ಷಿಣ ಅಮೆರಿಕದಲ್ಲಿರೋ ನಮ್ಮ ಸಹೋದರರಿಗೆ ಸುಮಾರು 1,700 ಬಾಕ್ಸ್‌ಗಳನ್ನ ಕಳಿಸಲಾಗಿದೆ. ಅಷ್ಟೇ ಅಲ್ಲ, ಇನ್ನಷ್ಟು ಸಭೆಗಳಿಗೆ ಈ ಬಾಕ್ಸ್‌ನ್ನ ಕಳಿಸೋಕೆ ಪ್ಲ್ಯಾನ್‌ ಮಾಡಲಾಗ್ತಿದೆ. ಈ ಖರ್ಚಿಗೆ ಹಣ ಎಲ್ಲಿಂದ ಬರುತ್ತೆ? ತುಂಬ ಜನ donate.pr418.com ಮೂಲಕ ಲೋಕವ್ಯಾಪಕ ಕೆಲಸಕ್ಕೆ ಕೊಟ್ಟ ಕಾಣಿಕೆಗಳನ್ನ ಬಳಸಲಾಯ್ತು. ನೀವು ಧಾರಳವಾಗಿ ಕೊಟ್ಟ ಕಾಣಿಕೆಗೆ ಧನ್ಯವಾದ.