ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು
ಶಾಲೆ ಒಂದು ಪ್ರಯೋಜನ ಹಲವು
ಡಿಸೆಂಬರ್ 1, 2020
ಪ್ರತೀ ವರ್ಷ ಲೋಕದ ಬೇರೆ ಬೇರೆ ಕಡೆಯಿಂದ ನೂರಾರು ವಿಶೇಷ ಪೂರ್ಣ ಸಮಯದ ಸೇವಕರು ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ಗೆ ಹಾಜರಾಗ್ತಾರೆ. ಈ ಶಾಲೆ ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್ ಎಜುಕೇಶನಲ್ ಸೆಂಟರ್‌ನಲ್ಲಿ ನಡಿಯುತ್ತೆ. a ವಿದ್ಯಾರ್ಥಿಗಳು ಯೆಹೋವನ ಸಂಘಟನೆಯಲ್ಲಿ ತಮಗಿರುವ ನೇಮಕಗಳನ್ನ ಹೇಗೆ ಚೆನ್ನಾಗಿ ಮಾಡೋದು ಅಂತ ಈ ಶಾಲೆಯಲ್ಲಿ ಕಲಿತಾರೆ. ಸಭೆಗಳನ್ನ ಮತ್ತು ಲೋಕದ ಬೇರೆ ಬೇರೆ ಕಡೆಯಿರೋ ಬ್ರಾಂಚ್‌ಗಳನ್ನ ಬಲಪಡಿಸೋಕೆ ಬೇಕಾದ ತರಬೇತಿ ಅವರಿಗೆ ಇಲ್ಲಿ ಸಿಗುತ್ತೆ.
ಗಿಲ್ಯಡ್ ನಿಜವಾಗಲೂ ಒಂದು ಅಂತರಾಷ್ಟ್ರೀಯ ಶಾಲೆ. ಉದಾಹರಣೆಗೆ, 2019 ರಲ್ಲಿ ನಡೆದ 147 ನೇ ಗಿಲ್ಯಡ್ ಶಾಲೆಗೆ 29 ದೇಶಗಳಿಂದ 56 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ವಿದ್ಯಾರ್ಥಿಗಳು ಈಗ ಬೇರೆ ಬೇರೆ ವಿಶೇಷ ಪೂರ್ಣ ಸಮಯದ ಸೇವೆಗಳನ್ನ ಮಾಡ್ತಿದ್ದಾರೆ. ಕೆಲವರು ಬೆತೆಲಿಗರಾಗಿ, ಸಂಚರಣ ಮೇಲ್ವಿಚಾರಕರಾಗಿ, ಮಿಷನರಿಗಳಾಗಿ ಅಥವಾ ವಿಶೇಷ ಪಯನೀಯರರಾಗಿ ಸೇವೆ ಮಾಡ್ತಿದ್ದಾರೆ.
ಈ ಶಾಲೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಮೊದಲ ಕ್ಲಾಸ್ ಶುರುವಾಗುವುದಕ್ಕಿಂತ ತುಂಬ ಸಮಯದ ಮುಂಚೆನೇ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಮುಖ್ಯ ಕಾರ್ಯಾಲಯದ ಟ್ರಾವೆಲ್ ಡಿಪಾರ್ಟ್‌ಮೆಂಟ್ ಈ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಮಾನದ ಟಿಕೇಟುಗಳನ್ನ ಖರೀದಿಸುತ್ತೆ. ಪ್ಯಾಟರ್‌ಸನ್‌ನಲ್ಲಿ ನಡೆದ 147 ನೇ ಗಿಲ್ಯಡ್ ಶಾಲೆಗೆ ಹಾಜರಾಗಲು ಬೇರೆ ದೇಶದಿಂದ ಬಂದ ಪ್ರತೀ ವಿದ್ಯಾರ್ಥಿಗೆ ಸರಿಸುಮಾರು 79,000 ರೂಪಾಯಿ ಖರ್ಚಾಯ್ತು. ಸಾಲೊಮನ್ ದ್ವೀಪಗಳಿಂದ ಬಂದ ವಿದ್ಯಾರ್ಥಿಗಳಿಗೆ ಪ್ಯಾಟರ್‌ಸನ್‌ಗೆ ಬರಲು ನಾಲ್ಕು ವಿಮಾನಗಳನ್ನ ಬದಲಾಯಿಸಬೇಕಾಯ್ತು. ಮತ್ತೆ ವಾಪಸ್ಸು ಹೋಗೋಕೆ ಮೂರು ವಿಮಾನಗಳನ್ನ ಬದಲಾಯಿಸಬೇಕಾಯ್ತು. ಒಟ್ಟಾರೆ ಅವರು 35,400 ಕಿಲೋಮೀಟರುಗಳಷ್ಟು ದೂರ ಪ್ರಯಾಣಿಸಬೇಕಾಯ್ತು. ಈ ರೀತಿ ಪ್ರಯಾಣಿಸಿದ ಒಬ್ಬ ವಿದ್ಯಾರ್ಥಿಗೆ ತಗಲಿದ ಖರ್ಚು 1,69,000 ರೂಪಾಯಿಗಳು. WHQ ಟ್ರಾವೆಲ್ ಡಿಪಾರ್ಟ್‌ಮೆಂಟ್‌ನವರು ದುಡ್ಡನ್ನ ಉಳಿತಾಯ ಮಾಡಲು ಮತ್ತು ಕಮ್ಮಿ ಬೆಲೆಗೆ ಟಿಕೇಟುಗಳನ್ನ ಖರೀದಿ ಮಾಡಲು ಕಂಪ್ಯೂಟರ್ ಬುಕಿಂಗ್ ಟೂಲನ್ನ ಬಳಸ್ತಾರೆ. ಟಿಕೇಟುಗಳನ್ನ ರಿಸರ್ವ್ ಮಾಡಿದ ನಂತರನೂ ಈ ಕಂಪ್ಯೂಟರ್ ಪ್ರೋಗ್ರ್ಯಾಮ್ ವಾರಗಟ್ಟಲೆ, ಟಿಕೇಟುಗಳ ಬೆಲೆಯಲ್ಲಿ ಏನಾದರೂ ಕಡಿಮೆ ಆಗಿದ್ಯಾ ಅಂತ ಹುಡುಕ್ತಾನೇ ಇರುತ್ತೆ. ಟಿಕೇಟುಗಳನ್ನ ಖರೀದಿ ಮಾಡೋಕೆ WHQ ಟ್ರಾವೆಲ್ ಡಿಪಾರ್ಟ್‌ಮೆಂಟ್ ಡೊನೇಟೆಡ್ ಏರ್‌ಲೈನ್ ಕ್ರೆಡಿಟ್ಸ್ ಮತ್ತು ಮೈಲೇಜ್ ಉಪಯೋಗಿಸುತ್ತೆ. ಏರ್‌ಲೈನ್ ಕ್ರೆಡಿಟ್ಸ್ ಮತ್ತು ಮೈಲೇಜ್ ಅಂದ್ರೆ ವಿಮಾನದಲ್ಲಿ ಪ್ರಯಾಣ ಮಾಡುವವ್ರಿಗೆ ಅವ್ರು ಎಷ್ಟು ದೂರ ಪ್ರಯಾಣ ಮಾಡ್ತಾರೋ ಅದರ ಮೇಲೆ ಕೆಲವು ಪಾಯಿಂಟ್ಸ್ ಸಿಗುತ್ತೆ. ಆ ಪಾಯಿಂಟ್ಸ್‌ನ ಬೇರೆಯವರಿಗೆ ಕೊಡಬಹುದು. ಈ ತರ ಸಿಕ್ಕಿದ ಪಾಯಿಂಟ್‌ಗಳಿಂದ ಸಂಘಟನೆ ಕಡಿಮೆ ಬೆಲೆಗೆ ಟಿಕೆಟ್‌ಗಳನ್ನ ಖರೀದಿ ಮಾಡುತ್ತೆ.
ಅಮೆರಿಕಗೆ ಬರಬೇಕಾದ್ರೆ ತುಂಬ ವಿದ್ಯಾರ್ಥಿಗಳಿಗೆ ವೀಸಾ ಬೇಕಾಗುತ್ತೆ. ಇದಕ್ಕಾಗಿ ಮುಖ್ಯ ಕಾರ್ಯಾಲಯದ ಲೀಗಲ್ ಡಿಪಾರ್ಟ್‌ಮೆಂಟ್ ಸ್ಟೂಡೆಂಟ್ ವೀಸಾಗಳನ್ನ ಪಡೆದುಕೊಳ್ಳೋದಿಕ್ಕೆ ಅವರಿಗೆ ಸಹಾಯ ಮಾಡುತ್ತೆ. ವೀಸಾ ಮತ್ತು ರಿಜಿಸ್ಟ್ರೇಷನ್ ಫೀಸ್ ಸೇರಿ ಒಬ್ಬ ವಿದ್ಯಾರ್ಥಿಗೆ ಸುಮಾರು 37,500 ರೂಪಾಯಿಗಳು ಬೇಕಾಗುತ್ತೆ.
ಈ ವಿದ್ಯಾರ್ಥಿಗಳಿಗೆ ಗಿಲ್ಯಡ್ ಶಾಲೆಯಿಂದ ಸಿಗುವ ತರಬೇತಿಯಿಂದ ನಮಗೇನು ಪ್ರಯೋಜನ? ಹೆಂಡ್ರಾ ಗುನವನ್ ಏಷ್ಯಾದ ಒಂದು ಸಭೆಯಲ್ಲಿ ಹಿರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿರುವ ಸಭೆಗೆ ಗಿಲ್ಯಡ್ ಶಾಲೆಯಿಂದ ತರಬೇತಿ ಪಡೆದ ಒಬ್ಬ ದಂಪತಿ ಬಂದರು. ಅವರ ಬಗ್ಗೆ ಈ ಹಿರಿಯ ಹೇಳಿದ್ದು: “ಈ ದಂಪತಿ ಬರೋಕೂ ಮುಂಚೆ ನಮ್ಮ ಸಭೆಯಲ್ಲಿ ಒಬ್ಬರೂ ಪಯನೀಯರ್ ಇರಲಿಲ್ಲ. ಇವರು ಬಂದ ಮೇಲೆ ಅವರಲ್ಲಿರುವ ಹುರುಪು ಮತ್ತು ಸಿದ್ಧ ಮನಸ್ಸು ನೋಡಿ ಬೇರೆಯವರು ಕೂಡ ಪಯನೀಯರ್ ಸೇವೆ ಶುರು ಮಾಡಿದರು. ನಂತರ ನಮ್ಮ ಸಭೆಯ ಒಬ್ಬ ಸಹೋದರಿ ರಾಜ್ಯ ಪ್ರಚಾರಕರ ಶಾಲೆಗೆ ಹೋದರು!”
ಏಷ್ಯಾದ ಬೆತೇಲಿನಲ್ಲಿ ಗಿಲ್ಯಡ್ ವಿದ್ಯಾರ್ಥಿಗಳ ಜೊತೆ ಕೆಲಸ ಮಾಡುವ ಸರ್ಜೋ ಪಂಜೈತನ್ ಹೀಗೆ ಹೇಳ್ತಾರೆ: “ಗಿಲ್ಯಡ್ ವಿದ್ಯಾರ್ಥಿಗಳಿಗೆ ಸಿಕ್ಕಿದ ತರಬೇತಿಯಿಂದ ಬರೀ ಅವರಿಗೆ ಮಾತ್ರ ಅಲ್ಲ, ನಮಗೂ ಪ್ರಯೋಜನ ಸಿಕ್ಕಿದೆ. ಅವರು ಆ ಶಾಲೆಯಲ್ಲಿ ತುಂಬ ವಿಷ್ಯಗಳನ್ನ ಕಲ್ತಿರ್ತಾರೆ. ‘ನಾವು ಗಿಲ್ಯಡ್ ಶಾಲೆಯ ಪದವೀಧರರು‘ ಅಂತ ಜಂಬಕೊಚ್ಚಿಕೊಳ್ಳುವ ಬದಲು ಕಲಿತ ವಿಷ್ಯಗಳನ್ನ ಬೇರೆಯವರ ಜೊತೆ ಹಂಚಿಕೊಳ್ತಾರೆ. ಇದರಿಂದ ನಮಗೂ ಪ್ರೋತ್ಸಾಹ ಸಿಗುತ್ತೆ, ನಾವೂ ಬೇರೆಯವರಿಗೆ ಪ್ರೋತ್ಸಾಹ ಕೊಡೋದಿಕ್ಕೆ ಆಗುತ್ತೆ.”
ಈ ಶಾಲೆ ನಡೆಸೋಕೆ ಬೇಕಾದ ದುಡ್ಡು ಸಂಘಟನೆಗೆ ಎಲ್ಲಿಂದ ಬರುತ್ತೆ? ಲೋಕವ್ಯಾಪಕವಾಗಿ ಕೊಡುವ ಕಾಣಿಕೆಗಳನ್ನ ಇದಕ್ಕಾಗಿ ಬಳಸ್ತಾರೆ. ಹೆಚ್ಚಿನವರು donate.pr418.comನಲ್ಲಿ ತಿಳಿಸಿರುವ ವಿಧಾನಗಳನ್ನ ಬಳಸಿ ಕಾಣಿಕೆಗಳನ್ನ ಕಳಿಸ್ತಾರೆ. ನೀವು ಕೊಡುವ ಉದಾರ ಕಾಣಿಕೆಗಳಿಂದ ಈ ಶಾಲೆಯನ್ನ ನಡೆಸಲು ಸಾಧ್ಯ ಆಗ್ತಿದೆ. ಅದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು.
a ಈ ಶಾಲೆಯಲ್ಲಿ ಏನೇನು ಕಲೀಬೇಕಂತ ಥಿಯೋಕ್ರೆಟಿಕ್ ಸ್ಕೂಲ್ಸ್ ಡಿಪಾರ್ಟ್‌ಮೆಂಟ್ ನೋಡಿಕೊಳ್ಳುತ್ತೆ. ಇದು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಟೀಚಿಂಗ್ ಕಮಿಟಿಯ ನಿರ್ದೇಶನದ ಪ್ರಕಾರ ಕೆಲಸ ಮಾಡುತ್ತೆ. ಈ ಶಾಲೆಯ ಶಿಕ್ಷಕರಾಗಿ ಆಡಳಿತ ಮಂಡಲಿಯ ಮತ್ತು ಟೀಚಿಂಗ್ ಕಮಿಟಿಯ ಕೆಲವು ಸದಸ್ಯರು ಕೆಲಸ ಮಾಡ್ತಾರೆ.