ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಚೆನ್ನಾಗಿ ಉತ್ತರ ಕೊಡುವುದು ಹೇಗೆ?

ಚೆನ್ನಾಗಿ ಉತ್ತರ ಕೊಡುವುದು ಹೇಗೆ?

ಚೆನ್ನಾಗಿ ತಯಾರಿಸಿದ ಉತ್ತರಗಳು ಸಭೆಯಲ್ಲಿರುವವರ ಭಕ್ತಿವೃದ್ಧಿ ಮಾಡುತ್ತವೆ. (ರೋಮ 14:19) ಉತ್ತರ ಕೊಡುವವರಿಗೂ ಇದರಿಂದ ಪ್ರಯೋಜನ ಇದೆ. (ಜ್ಞಾನೋ 15:23, 28) ಆದ್ದರಿಂದ ಪ್ರತಿ ಕೂಟದಲ್ಲಿ ಕಡಿಮೆಪಕ್ಷ ಒಂದು ಉತ್ತರವಾದರೂ ಕೊಡಲು ಪ್ರಯತ್ನಿಸಬೇಕು. ನಾವು ಕೈ ಎತ್ತಿದಾಗೆಲ್ಲಾ ಉತ್ತರ ಹೇಳುವ ಅವಕಾಶ ಸಿಗುವುದಿಲ್ಲ. ಆದ್ದರಿಂದ ಅನೇಕ ಉತ್ತರಗಳನ್ನು ತಯಾರಿಸುವುದು ಒಳ್ಳೇದು.

ಉತ್ತರ ಹೇಗಿರಬೇಕು?

  • ಸರಳವಾಗಿ, ಸ್ಪಷ್ಟವಾಗಿ ಮತ್ತು ಚುಟುಕಾಗಿ ಇರಬೇಕು. ಸಾಧ್ಯವಾದಾಗೆಲ್ಲ, 30 ಸೆಕೆಂಡುಗಳಲ್ಲೇ ಉತ್ತರ ಕೊಡಬೇಕು

  • ಸ್ವಂತ ಮಾತಿನಲ್ಲಿ ಇರಬೇಕು

  • ಈಗಾಗಲೇ ಬಂದ ಉತ್ತರವನ್ನು ಪುನಃ ಹೇಳಬಾರದು

ಪ್ರಶ್ನೆಗೆ ಮೊದಲ ಉತ್ತರ ಹೇಳುವ ಅವಕಾಶ ಸಿಕ್ಕಿದಾಗ . . .

  • ಸರಳವಾಗಿ ಮತ್ತು ನೇರವಾಗಿ ಉತ್ತರ ಕೊಡಿ

ನಂತರ, ಅದೇ ಪ್ರಶ್ನೆಗೆ ಉತ್ತರ ಕೊಡುವಾಗ . . .

  • ಕೊಡಲಾಗಿರುವ ವಚನ ಚರ್ಚಿಸುತ್ತಿರುವ ವಿಷಯಕ್ಕೆ ಹೇಗೆ ಸಂಬಂಧಪಟ್ಟಿದೆ ಅಂತ ತಿಳಿಸಿ

  • ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಹುದು ಅಂತ ತಿಳಿಸಿ

  • ಆ ವಿಷಯವನ್ನು ಎಲ್ಲೆಲ್ಲಾ ಉಪಯೋಗಿಸಬಹುದು ಅಂತ ವಿವರಿಸಿ

  • ಮುಖ್ಯ ಅಂಶವನ್ನು ಒತ್ತಿಹೇಳುವಂಥ ಅನುಭವವನ್ನು ಚುಟುಕಾಗಿ ಹೇಳಿ