ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 12-16

ವಿವೇಕವು ಬಂಗಾರಕ್ಕಿಂತ ಅಮೂಲ್ಯ

ವಿವೇಕವು ಬಂಗಾರಕ್ಕಿಂತ ಅಮೂಲ್ಯ

ದೈವಿಕ ವಿವೇಕವು ತುಂಬಾ ಅಮೂಲ್ಯ. ಏಕೆಂದರೆ ದೈವಿಕ ವಿವೇಕ ಪಡೆದಿರುವವರನ್ನು ಅದು ತಪ್ಪಾದ ಮಾರ್ಗಗಳಿಂದ ಕಾಪಾಡಿ ರಕ್ಷಣೆಗೆ ನಡೆಸುತ್ತದೆ. ಇದು ಆ ವ್ಯಕ್ತಿಯ ಮಾತು, ನಡತೆ ಮತ್ತು ಕೆಲಸದ ಮೇಲೆ ಒಳ್ಳೇ ಪರಿಣಾಮ ಬೀರುತ್ತೆ.

ವಿವೇಕವು ಹೆಮ್ಮೆ ಬರದಂತೆ ಕಾಪಾಡುತ್ತದೆ

16:18,19

  • ಯೆಹೋವನೇ ಸಕಲ ವಿವೇಕದ ಮೂಲ ಎಂದು ವಿವೇಕಿ ಗ್ರಹಿಸುತ್ತಾನೆ

  • ಮುಖ್ಯವಾಗಿ, ಯಶಸ್ಸು ಗಳಿಸಿದವರು ಅಥವಾ ಹೆಚ್ಚಿನ ಜವಾಬ್ದಾರಿಗಳು ಇರುವವರು ತಮ್ಮಲ್ಲಿ ಹೆಮ್ಮೆ ಅಥವಾ ಅಹಂಕಾರ ಬರದಂತೆ ಎಚ್ಚರವಹಿಸಬೇಕು

ವಿವೇಕಿಯ ಮಾತುಗಳು ಹಿತಕರವಾಗಿರುತ್ತವೆ

16:21-24

  • ವಿವೇಕಿಯು ಬೇರೆಯವರಲ್ಲಿ ಒಳ್ಳೇದನ್ನು ಹುಡುಕುತ್ತಾನೆ ಮತ್ತು ಬೇರೆಯವರ ಬಗ್ಗೆ ಒಳ್ಳೇದನ್ನೇ ಮಾತಾಡುತ್ತಾನೆ

  • ವಿವೇಕಯುತ ಮಾತುಗಳು ಕಠೋರವಾಗಿರುವುದಿಲ್ಲ. ಅದು ಜೇನಿನಂತೆ ಸಿಹಿಯಾಗಿದ್ದು ಬೇರೆಯವರನ್ನು ಆಕರ್ಷಿಸುತ್ತದೆ