ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 1-6

“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”

“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”

ಯೆಹೋವನಲ್ಲಿ ನಾವು ಪೂರ್ಣ ಭರವಸೆ ಇಡಬಹುದು. ಅದಕ್ಕಾತನು ಅರ್ಹನು. ಆತನ ಹೆಸರಿನ ಅರ್ಥ, ತನ್ನ ಎಲ್ಲಾ ವಾಗ್ದಾನಗಳನ್ನು ನೆರವೇರಿಸುವ ಸಾಮರ್ಥ್ಯ ಆತನಿಗಿದೆ ಎಂಬ ಭರವಸೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಆತನಲ್ಲಿ ನಮ್ಮ ಭರವಸೆಯನ್ನು ಹೆಚ್ಚಿಸುವ ಪ್ರಾಮುಖ್ಯ ವಿಧ ಪ್ರಾರ್ಥನೆ. ನಾವು ಆತನಲ್ಲಿ ಭರವಸೆ ಇಡುವಾಗ ಆತನು ‘ನಮ್ಮ ಮಾರ್ಗಗಳನ್ನು ಸರಾಗಮಾಡುವ’ ಮೂಲಕ ಪ್ರತಿಫಲ ಕೊಡುತ್ತಾನೆ ಎಂದು ಜ್ಞಾನೋಕ್ತಿ 3⁠ನೇ ಅಧ್ಯಾಯ ತಿಳಿಸುತ್ತದೆ.

ತಾನೇ ಬುದ್ಧಿವಂತ ಎಂದೆಣಿಸುವವನು . . .

3:5-7

  • ಯೆಹೋವನ ಮಾರ್ಗದರ್ಶನವನ್ನು ಪಡೆಯದೆ ನಿರ್ಣಯಗಳನ್ನು ಮಾಡುತ್ತಾನೆ

  • ತನ್ನ ಸ್ವಂತ ಬುದ್ಧಿ ಅಥವಾ ಈ ಲೋಕದ ಜ್ಞಾನದ ಮೇಲೆ ಭರವಸೆ ಇಡುತ್ತಾನೆ

ಯೆಹೋವನಲ್ಲಿ ಭರವಸೆ ಇಡುವವನು . . .

  • ಬೈಬಲ್‌ ಅಧ್ಯಯನ, ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ದೇವರ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳುತ್ತಾನೆ

  • ನಿರ್ಣಯಗಳನ್ನು ಮಾಡುವಾಗ ಬೈಬಲ್‌ ತತ್ವಗಳಿಗಾಗಿ ಹುಡುಕುವ ಮೂಲಕ ದೇವರ ಮಾರ್ಗದರ್ಶನವನ್ನು ಪಡೆಯುತ್ತಾನೆ

ಇವುಗಳಲ್ಲಿ ನಾನು ನಿರ್ಣಯಗಳನ್ನು ಮಾಡುವ ರೀತಿ ಯಾವುದು?

ಮೊದಲು: ನಾನು ನನಗೆ ಸರಿಕಾಣುವ ನಿರ್ಣಯ ಮಾಡುತ್ತೇನೆ

ನಂತರ: ನನ್ನ ನಿರ್ಣಯವನ್ನು ಆಶೀರ್ವದಿಸುವಂತೆ ಯೆಹೋವನಿಗೆ ಪ್ರಾರ್ಥಿಸುತ್ತೇನೆ

ಮೊದಲು: ಪ್ರಾರ್ಥಿಸಿ ವೈಯಕ್ತಿಕ ಅಧ್ಯಯನ ಮಾಡುವ ಮೂಲಕ ಯೆಹೋವನ ಮಾರ್ಗದರ್ಶನ ಪಡೆಯುತ್ತೇನೆ

ನಂತರ: ಬೈಬಲ್‌ ತತ್ವಗಳಿಗೆ ಹೊಂದಿಕೆಯಲ್ಲಿರುವ ನಿರ್ಣಯ ಮಾಡುತ್ತೇನೆ