“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”
ಜ್ಞಾನೋಕ್ತಿ ಪುಸ್ತಕದಲ್ಲಿ ಹೆತ್ತವರಿಗೆ ಒಳ್ಳೇ ಸಲಹೆಗಳಿವೆ. ಗಿಡ ನೇರವಾಗಿ ಬೆಳೆಯಬೇಕೆಂದರೆ ಚಿಕ್ಕದಿದ್ದಾಗಲೇ ಅದನ್ನು ಸರಿಮಾಡಬೇಕು. ಅದರಂತೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮಿಕವಾಗಿ ಚೆನ್ನಾಗಿ ತರಬೇತಿ ಕೊಟ್ಟರೆ ಅವರು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡಲು ಮುಂದೆಬರುತ್ತಾರೆ.
-
ಮಕ್ಕಳಿಗೆ ತರಬೇತಿ ಕೊಡಲು ಸಾಕಷ್ಟು ಸಮಯ ಮತ್ತು ಪ್ರಯತ್ನ ಅಗತ್ಯ
-
ಹೆತ್ತವರು ಮಕ್ಕಳಿಗೆ ಒಳ್ಳೇ ಮಾದರಿಯಾಗಿರಬೇಕು ಮತ್ತು ಅವರಿಗೆ ಚೆನ್ನಾಗಿ ಕಲಿಸಿ, ಎಚ್ಚರಿಸಿ, ಪ್ರೋತ್ಸಾಹಿಸಿ, ಶಿಸ್ತು ಕೊಡಬೇಕು
-
ಮಗುವಿನ ಭಾವನೆ, ಯೋಚನೆಯನ್ನು ಸರಿಮಾಡಲು ಶಿಸ್ತು ಒಂದು ಪ್ರೀತಿಯ ತರಬೇತಿಯಾಗಿದೆ
-
ಮಕ್ಕಳಿಗೆ ಬೇರೆ ಬೇರೆ ರೀತಿಯ ಶಿಸ್ತನ್ನು ಕೊಡಬೇಕಾಗುತ್ತೆ