ನಮ್ಮ ಕ್ರೈಸ್ತ ಜೀವನ
ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸ್ವಾರ್ಥ, ಸಿಟ್ಟು ಬೇಡ
ಏಕೆ ಪ್ರಾಮುಖ್ಯ: ಪ್ರೀತಿಯು ತನ್ನ ಶಿಷ್ಯರ ಗುರುತಾಗಿರುವುದು ಎಂದು ಯೇಸು ಕಲಿಸಿದನು. (ಯೋಹಾ 13:34, 35) ನಾವು ಯೇಸುವಿನಂತೆ ಪ್ರೀತಿ ತೋರಿಸಬೇಕೆಂದರೆ ಇತರರ ಆಸಕ್ತಿ ವಹಿಸಬೇಕು ಮತ್ತು ಸಿಟ್ಟುಗೊಳ್ಳಬಾರದು.—1ಕೊರಿಂ 13:5.
ಹೇಗೆ ಮಾಡುವುದು:
-
ಯಾರಾದರೂ ಮನನೋಯಿಸುವಂತೆ ಮಾತಾಡಿದರೆ ಅಥವಾ ನಡೆದುಕೊಂಡರೆ ಈ ಸಮಸ್ಯೆಗೆ ಕಾರಣವೇನು ಮತ್ತು ನಾನು ಸಿಟ್ಟುಗೊಂಡರೆ ಏನಾಗಬಹುದು ಎಂದು ಯೋಚಿಸಬೇಕು.—ಜ್ಞಾನೋ 19:11.
-
ನಾವೆಲ್ಲರೂ ಅಪರಿಪೂರ್ಣರು, ಕೆಲಮೊಮ್ಮೆ ಬೇರೆಯವರಿಗೆ ಮನನೋಯಿಸುವ ರೀತಿಯಲ್ಲಿ ಮಾತಾಡುತ್ತೇವೆ, ನಡೆದುಕೊಳ್ಳುತ್ತೇವೆ ಎನ್ನುವುದನ್ನು ಮರೆಯಬಾರದು
-
ಭಿನ್ನಾಭಿಪ್ರಾಯಗಳನ್ನು ಒಡನೇ ಬಗೆಹರಿಸಬೇಕು
‘ನಿಮ್ಮ ಮಧ್ಯೆ ಪ್ರೀತಿಯಿರಲಿ’—ಸ್ವಾರ್ಥ, ಸಿಟ್ಟು ಬೇಡ ಎಂಬ ವಿಡಿಯೋ ನೋಡಿ ಮತ್ತು ನಂತರ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
-
ಸಹೋದರ ಲೂಯಿಸ್‌ರವರ ಸಲಹೆಗೆ ಲೂಕ್ ಹೇಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದರು?
-
ಲೂಯಿಸ್‌ರವರು ದುಡುಕದೆ ಆಲೋಚಿಸಿದ್ದರಿಂದ ಸಿಟ್ಟುಮಾಡಿಕೊಳ್ಳದಿರಲು ಹೇಗೆ ಸಹಾಯವಾಯಿತು?
-
ಸಹೋದರ ಲೂಯಿಸ್‌ರವರ ಮೃದುವಾದ ಉತ್ತರವು ಸನ್ನಿವೇಶವನ್ನು ಹೇಗೆ ಬದಲಾಯಿಸಿತು?