ನಮ್ಮ ಕ್ರೈಸ್ತ ಜೀವನ
ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?
ನೀವು ಫ್ರೆಂಡ್ ಮಾಡಿಕೊಳ್ಳೋ ವ್ಯಕ್ತಿಗೆ ಯಾವೆಲ್ಲಾ ಗುಣಗಳಿರಬೇಕು ಅಂತ ಬಯಸ್ತೀರಾ? ನಿಷ್ಠೆ, ಕರುಣೆ ಮತ್ತು ಉದಾರತೆಯಂಥ ಗುಣಗಳು ಆ ವ್ಯಕ್ತಿಯಲ್ಲಿ ಇರಬೇಕಾ? ಈ ಎಲ್ಲಾ ಗುಣಗಳು ಯೆಹೋವನಲ್ಲಿದೆ. (ವಿಮೋ 34:6; ಅಕಾ 14:17) ಯೆಹೋವನು ನೀವು ಪ್ರಾರ್ಥನೆ ಮಾಡಿದಾಗ ಕೇಳ್ತಾನೆ. ಸಹಾಯ ಬೇಕಿದ್ದಾಗೆಲ್ಲಾ ನಿಮ್ಮ ಕೈ ಹಿಡಿತಾನೆ. (ಕೀರ್ತ 18:19, 35) ನಿಮ್ಮ ತಪ್ಪುಗಳನ್ನ ಕ್ಷಮಿಸುತ್ತಾನೆ. (1ಯೋಹಾ 1:9) ಯೆಹೋವನು ಎಷ್ಟು ಒಳ್ಳೇ ಫ್ರೆಂಡ್ ಅಲ್ವಾ!
ಯೆಹೋವನ ಫ್ರೆಂಡ್ ಆಗೋಕೆ ನೀವೇನು ಮಾಡಬೇಕು? ಬೈಬಲ್ ಓದಿ ಯೆಹೋವನ ಬಗ್ಗೆ ತಿಳುಕೊಳ್ಳಿ. ನಿಮ್ಮ ಅನಿಸಿಕೆ ಭಾವನೆಗಳನ್ನು ಆತನೊಟ್ಟಿಗೆ ಹಂಚಿಕೊಳ್ಳಿ. (ಕೀರ್ತ 62:8; 142:2) ಯೆಹೋವನಿಗೆ ತನ್ನ ಮಗ, ತನ್ನ ರಾಜ್ಯ ಮತ್ತು ಭವಿಷ್ಯದ ಬಗ್ಗೆ ಕೊಟ್ಟಿರೋ ಮಾತುಗಳು ಅಂದ್ರೆ ತುಂಬ ಅಮೂಲ್ಯ. ನೀವೂ ಈ ವಿಷಯಗಳನ್ನ ಅಮೂಲ್ಯವಾಗಿ ನೋಡಿ. ಬೇರೆಯವರಿಗೆ ಯೆಹೋವನ ಬಗ್ಗೆ ತಿಳಿಸಿ. (ಧರ್ಮೋ 32:3) ಯೆಹೋವನೊಂದಿಗೆ ಆಪ್ತ ಸ್ನೇಹ ಬೆಳೆಸಿಕೊಂಡ್ರೆ ಆತನು ಎಂದೆಂದಿಗೂ ನಿಮ್ಮ ಫ್ರೆಂಡಾಗಿ ಇರುತ್ತಾನೆ.—ಕೀರ್ತ 73:25, 26, 28.
ಯುವಜನರೇ—“ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ” ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳಲು ಏನೆಲ್ಲಾ ಮಾಡಬೇಕು?
-
ಯೆಹೋವನ ಸೇವೆ ಮಾಡೋಕೆ ಸಭೆಯಲ್ಲಿರೋ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡ್ತಾರೆ?
-
ಸೇವೆ ಮಾಡೋದ್ರಿಂದ ಯೆಹೋವನೊಂದಿಗೆ ನಿಮ್ಮ ಸಂಬಂಧ ಹೇಗೆ ಬಲಗೊಳ್ಳುತ್ತೆ?
-
ಯಾವೆಲ್ಲಾ ರೀತಿಯ ಸೇವೆಗಳನ್ನ ನೀವು ಮಾಡಬಹುದು?
-
ಯೆಹೋವನಲ್ಲಿರೋ ಯಾವ ಗುಣ ನಿಮಗೆ ಇಷ್ಟ?